ಮೈಸೂರು

ದಿ.ನಟ ತೂಗುದೀಪ ಶ್ರೀನಿವಾಸ್ ಅವರ 79ನೆಯ ಜನುಮದಿನದ ಆಚರಣೆ : ಕಡ್ಡಾಯ ಮತ ಚಲಾಯಿಸಲು ಅರಿವು

ಮೈಸೂರು,ಏ.17:-  ದಿವಂಗತ ನಟ ತೂಗುದೀಪ ಶ್ರೀನಿವಾಸ್ ಅವರ 79ನೆಯ ಜನುಮದಿನದ ಆಚರಣೆಯ ಪರವಾಗಿ ಇಂದು ಲಲಿತಮಹಲ್ ಆರ್ಚ್ ತೂಗುದೀಪ ಶ್ರೀನಿವಾಸ್ ರವರ ವೃತ್ತದಲ್ಲಿ ಕಡ್ಡಾಯವಾಗಿ ಮತ ಚಲಾಯಿಸಿ ಎಂದು ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.

ಈ ಸಂದರ್ಭ ಮಾತನಾಡಿದ  ಮೀನಾ ತೂಗುದೀಪ ಶ್ರೀನಿವಾಸ್ ಅವರ ಜನ್ಮದಿನಾಚರಣೆ ಮಾಡುತ್ತಿರುವುದು ಈ ಒಂದು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ.  ನಮ್ಮ ಪತಿ ಅವರ ಜನ್ಮದಿನಾಚರಣೆ ಮಾಡುತ್ತಿರುವುದು ಅದರಲ್ಲೂ ಮತದಾನದ ಜಾಗೃತಿ ಕುರಿತು ಸಂದೇಶ ನೀಡುತ್ತಿರುವುದು ನಮ್ಮೆಲ್ಲರಿಗೂ ಸಂತೋಷದ ವಿಷಯವಾಗಿದೆ. ಈ ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಮತ್ತು ಪ್ರಜಾಪ್ರಭುತ್ವದ ಒಳಿತಿಗಾಗಿ ಪ್ರತಿಯೊಬ್ಬ ಭಾರತೀಯನು ಮತ ಚಲಾಯಿಸಬೇಕು ಎಂದು ಕರೆ ನೀಡಿದರು ಆ ನಂತರ ಸಮುದಾಯದ ಯುವ ಮುಖಂಡ ಹರೀಶ್ ನಾಯ್ಡು ಮಾತನಾಡಿ ನಮ್ಮ ದೇಶ ಅತಿ ಹೆಚ್ಚು ಯುವಕರನ್ನು ಹೊಂದಿರುವ ದೇಶವಾಗಿದೆ.  ಈ ದೇಶದ ಯುವಶಕ್ತಿಯ ಇಂದು ಸಂಘಟಿತರಾಗಿದ್ದಾರೆ. ಅಭಿವೃದ್ಧಿಗಾಗಿ ಮತ ಚಲಾಯಿಸಲು ಉತ್ಸಾಹದಿಂದ ಪಾಲ್ಗೊಳ್ಳಲಿದ್ದಾರೆ ಮತ್ತು ಯಾವುದೇ ಆಸೆ ಆಮಿಷ ಗಳಿಗೆ ಒಳಗಾಗದೆ ಮತದಾನ ಮಾಡೋಣ ಎಂದು ಕರೆ ನೀಡಿದರು.

ಈ ಸಂದರ್ಭ  ಮೈಸೂರು ಜಿಲ್ಲಾ ಬಲಿಜ (ನಾಯ್ಡು) ಸಮಾಜದ ಅಧ್ಯಕ್ಷರಾದ ಎಸ್.ಹೇಮಂತಕುಮಾರ್, ಉಪಾಧ್ಯಕ್ಷರಾದ ಎಂಡಿ. ಶ್ರೀನಿವಾಸ್, ಕಾರ್ಯದರ್ಶಿ ಗಳಾದ ಡಾ.ಆರ್. ಮಂಜುನಾಥ್ ಮತ್ತು ಸಂಘದ ಸದಸ್ಯರುಗಳಾದ  ಗೋವಿಂದರಾಜ್,ಶಿವಕುಮಾರ,ಆರ್.ಎಂ.ಎಸ್ ರಾಘವೇಂದ್ರ,   ಸರಳ ನಾಯ್ಡು, ಚಿತ್ರನಟರಾದ ಪವನ್ ತೇಜ,ವಿಜಯಸೂರ್ಯ ನಾಯ್ಡು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: