ಮೈಸೂರು

ಮತದಾರರನ್ನು ಸೆಳೆಯಲು ವಿನೂತನ ಸಾಂಪ್ರದಾಯಿಕ ಮತಗಟ್ಟೆ : 11 ಕಡೆಗಳಲ್ಲಿ ಸಾಂಪ್ರದಾಯಿಕ ಬುಡಕಟ್ಟು ಮತಗಟ್ಟೆ ಸ್ಥಾಪನೆ

ಮೈಸೂರು,ಏ.17:-  ಲೋಕಸಭಾ ಚುನಾವಣೆ ಬುಡಕಟ್ಟು ಜನಾಂಗದ ಮತದಾನ ಹೆಚ್ಚಿಸಲು ಚುನಾವಣಾ ಆಯೋಗ,ಮೈಸೂರು ಜಿಲ್ಲಾಡಳಿತ ಹಾಗೂ ಸ್ವೀಪ್ ವತಿಯಿಂದ ವಿನೂತನ ಸಾಂಪ್ರದಾಯಿಕ ಮತಗಟ್ಟೆ ನಿರ್ಮಿಸಿದ್ದು,ಎಲ್ಲರ ಕಣ್ಮನ ಸೆಳೆಯುತ್ತಿದೆ.

ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಎಚ್.ಡಿ.ಕೋಟೆ, ಹುಣಸೂರು ಕ್ಷೇತ್ರದಲ್ಲಿ ಎತ್ನಿಕ್ ಬೂತ್ ನಿರ್ಮಿಸಲಾಗಿದೆ. ಹುಣಸೂರಿನ ಮತಗಟ್ಟೆ ನಾಗಾಪುರ, ಶೆಟ್ಟಹಳ್ಳಿ, ನಲ್ಲೂರು ಪಾಲ್,ಎಚ್.ಡಿ.ಕೋಟೆಯ ಬಸವನಗಿರಿ ಹಾಡಿ, ಪೆಂಜಹಳ್ಳಿ ಕಾಲೂನಿ, ಭೀಮನಹಳ್ಳಿ, ಪಿರಿಯಾಪಟ್ಟಣದ ಮುತ್ತೂರು ಕಾಲೂನಿ, ಅಬ್ಬಲಾತಿ, ರಾಣಿ ಗೇಟ್ ಸೇರಿದಂತೆ 11 ಕಡೆಗಳಲ್ಲಿ ಸಾಂಪ್ರದಾಯಿಕ ಬುಡಕಟ್ಟು ಮತಗಟ್ಟೆ ಸ್ಥಾಪನೆ ಮಾಡಲಾಗಿದೆ.

ಮತಗಟ್ಟೆಗೆ ಹೋಗುವ ಮುನ್ನಾ ಬಾಗಿಲಲ್ಲಿ ಒಣ ಹುಲ್ಲು, ಹಸಿ ಸೊಪ್ಪಿನಿಂದ ಸ್ವಾಗತ ಮಾಡಲಾಗಿದೆ.ನಂತರ ಮತಗಟ್ಟೆಯ ಸುತ್ತ ಮುತ್ತ ಬುಡಕಟ್ಟು ಜನಾಂಗದ ಚಿತ್ರಕಲೆ ರಚಿಸಲಾಗಿದೆ. ಅದಲ್ಲದೇ ಬುಡಕಟ್ಟು ಮೂಲ ಸಂಸ್ಕೃತಿಯನ್ನು ಬಿಂಬಿಸುತ್ತಿರುವ ಮತಗಟ್ಟೆ ಸುತ್ತಲೂ ಸಿಂಗಾರ ಮಾಡಲಾಗಿದ್ದು ಎಲ್ಲರ ಗಮನ ಸೆಳೆಯುತ್ತದೆ.

ಮತಗಟ್ಟೆಗಳೆಂದರೆ ಸೌಲಭ್ಯವಿಲ್ಲದ ತಾಣಗಳು ಎಂದು ಮೂಗು ಮುರಿಯುವ ಮಂದಿಗೆ ಉತ್ತರವಾಗಿ ಈ ಮತಗಟ್ಟೆಗಳಿದ್ದು ಮತದಾರರನ್ನು ಕೈ ಬೀಸಿ ಕರೆಯುತ್ತಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: