ಮೈಸೂರು

ಸಾಂಸ್ಕೃತಿಕ ನಗರಿಯಲ್ಲಿ ರಾಜವಂಶಸ್ಥ ಯದುವೀರ್ ಮತ್ತವರ ಧರ್ಮಪತ್ನಿ,ಸುತ್ತೂರು ಶ್ರೀ ,ಶಾಸಕದ್ವಯರು, ಮೈತ್ರಿ ಅಭ್ಯರ್ಥಿಯಿಂದ ಹಕ್ಕು ಚಲಾವಣೆ

ಮೈಸೂರು,ಏ.18:- ಮೈಸೂರು-ಕೊಡಗು ವಿಧಾನಸಭಾ ಕ್ಷೇತ್ರಕ್ಕೆ ಬೆಳಿಗ್ಗೆ 7ಗಂಟೆಯಿಂದಲೇ ಮತದಾನ ಆರಂಭವಾಗಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ 9ಗಂಟೆಯವರೆಗೆ  ಶೇ 7.79% ಮತದಾನವಾಗಿದೆ.

ಮಡಿಕೇರಿ- 12.17, ವಿರಾಜಪೇಟೆ- 12.67, ಪಿರಿಯಾಪಟ್ಟಣ- 10.0, ಹುಣಸೂರು- 7.55, ಚಾಮುಂಡೇಶ್ವರಿ- 5:81, ಕೃಷ್ಣರಾಜ- 3.5, ಚಾಮರಾಜ- 8.2, ನರಸಿಂಹರಾಜ- 4.58 ಮತದಾನವಾಗಿದೆ.

ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಅವರ ಧರ್ಮಪತ್ನಿ ತ್ರಿಷಿಕಾದೇವಿ ಒಡೆಯರ್ ಅವರು ಅಗ್ರಹಾರದ ಶ್ರೀಕಾಂತ ಶಾಲೆಯ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಬಳಿಕ ತಾವು ಮತದಾನ ಮಾಡಿ ಶಾಹಿ ಹಾಕಿಸಿಕೊಂಡ ಬೆರಳನ್ನು ಪ್ರದರ್ಶಿಸಿದರು. ನಂತರ ಮಾತನಾಡಿದ ಅವರು 18ವರ್ಷ ತುಂಬಿದ ಪ್ರತಿಯೊಬ್ಬ ಪ್ರಜೆಯೂ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಉತ್ತಮ ಆಡಳಿತಕ್ಕೆ ಅನುವು ಮಾಡಿಕೊಡಬೇಕು ಎಂದರು.

ಚಾಮುಂಡಿಪುರಂ ನ ಸೇಂಟ್ ಮೇರಿಸ್ ಶಾಲೆಯ ಮತಗಟ್ಟೆಯಲ್ಲಿ ಶಾಸಕ ಎಸ್.ಎ.ರಾಮದಾಸ್ ಮತ ಚಲಾಯಿಸಿದರು. ಇದೇ ವೇಳೆ ಊಟಿ ರಸ್ತೆಯಲ್ಲಿರುವ ಜೆಎಸ್ ಎಸ್ ಕಾಲೇಜಿನ ಮತಗಟ್ಟೆಯಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ ಚಲಾಯಿಸಿದರು.

ಬಳಿಕ ಮಾತನಾಡಿದ ಶಾಸಕ ರಾಮದಾಸ್ ನಮ್ಮ ಮತದಿಂದ ದೇಶದ ಭವಿಷ್ಯ ನಿರ್ಮಾಣವಾಗುತ್ತದೆ. ಪ್ರತಿಯೊಬ್ಬರೂ ಮತದಾನ ಮಾಡಿ. ಜಿಲ್ಲೆಯಲ್ಲಿ ಎರಡು ಕಡೆ ಮತಯಂತ್ರದಲ್ಲಿ ದೋಷ ಕಂಡು ಬಂದಿತ್ತು. ಅದನ್ನು ಬದಲಾಯಿಸಲಾಗಿದೆ ಎಂದರು.

 

ಚಾಮರಾಜ ಕ್ಷೇತ್ರದ ಶಾಸಕ ಎಲ್ ನಾಗೇಂದ್ರ ಅವರು ಜಯನಗರದಲ್ಲಿರುವ ಬಾಲೋಧ್ಯಾನ ವಿದ್ಯಾಸಂಸ್ಥೆಯಲ್ಲಿರುವ ಮತಗಟ್ಟೆಗೆ ತಮ್ಮ ಕುಟುಂಬಿಕರೊಂದಿಗೆ ತೆರಳಿ ಮತ ಚಲಾಯಿಸಿದರು. ಬಳಿಕ ಮಾತನಾಡಿದ ಅವರು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಮತದಾನವಾಗಲಿದ್ದು, ಒಂದು ಲಕ್ಷ ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೈತ್ರಿ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್  ವಿಜಯನಗರದ ಮೂರನೇ ಹಂತದಲ್ಲಿ ಇರುವ ಸರ್ಕಾರ ಶಾಲೆಯಲ್ಲಿ  ಮತಗಟ್ಟೆ ಸಂಖ್ಯೆ 108 ಕ್ಕೆ   ಕುಟುಂಬ ಸಮೇತವಾಗಿ ಆಗಮಿಸಿ ಮತಚಲಾಯಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: