ಕರ್ನಾಟಕ

ಎಸ್.ಎಂ.ಕೃಷ್ಣಗೆ ಸ್ವಾಗತವೆಂದ ಬಿಜೆಪಿ ಮುಖಂಡ ಆರ್.ಆಶೋಕ್

ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ ಅವರ ಅಭಿಮಾನಿಯಾಗಿದ್ದು ಅವರು ಬಿಜೆಪಿಗೆ ಬಂದ್ರೆ ಸ್ವಾಗತಿಸುತ್ತೇನೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ವರಕವಿ ದ.ರಾ.ಬೇಂದ್ರ ಜನ್ಮದಿನದಂಗವಾಗಿ ಆಯೋಜಿಸಿದ್ದ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ರಾಜ್ಯ ಕಂಡ ಅಪರೂಪ ರಾಜಕಾರಣಿಗಳಲ್ಲಿ ಎಸ್.ಎಂ.ಕೃಷ್ಣ ಅವರು ಮೊದಲಿಗರು, ಮುಖ್ಯಮಂತ್ರಿಯಾಗಿದ್ದು ರಾಜ್ಯಕ್ಕೆ ಹಲವಾರು ಪ್ರಗತಿಪರ ಯೋಜನೆಗಳನ್ನು ಜಾರಿಗೊಳಿಸಿ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯದ್ದವರು, ಅಂತಹವರನ್ನು ಕಾಂಗ್ರೆಸ್ ನಡೆಸಿಕೊಳ್ಳುತ್ತಿರುವುದು ಸೂಕ್ತವಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹಿಂಬಾಲಕರಿಗಷ್ಟೇ ಮಣೆ ಹಾಕುತ್ತಿದ್ದು ಇದರಿಂದಾಗಿ ಮೂಲ ಕಾಂಗ್ರೆಸಿಗರಿಗೆ ಬೇಸರವುಂಟಾಗಿದೆ. ಕೃಷ್ಣ ಅವರ ಮುಂದಿನ ನಡೆಯೇನು ಎಂದು ಇಂದಿಗೂ ಬಹಿರಂಗಪಡಿಸಿಲ್ಲ, ಬಿಜೆಪಿಯ ಮುಖಂಡನಾಗಿ ಅವರನ್ನು ನಮ್ಮ ಪಕ್ಷಕ್ಕೆ ಸ್ವಾಗತಿಸುತ್ತೇನೆ ಎಂದರು.

Leave a Reply

comments

Related Articles

error: