ಮೈಸೂರು

ಯುವತಿಯನ್ನು ಅಪಹರಿಸಿಕೊಂಡು ಕಾರಿನಲ್ಲಿ ಪರಾರಿಯಾಗಲೆತ್ನಿಸಿದ ಯುವಕನ ಬಂಧನ : ಮೈಸೂರಿನಲ್ಲಿ ನಡೆದ ಘಟನೆ

ಮೈಸೂರು,ಏ.18:- ನಗರದ ಯುವತಿಯೋರ್ವರನ್ನು ಕಾರಿನಲ್ಲಿ ಅಪಹರಿಸಿಕೊಂಡು ಪರಾರಿಯಾಗಲೆತ್ನಿಸಿದ ಯುವಕನ್ನು ಬಂಧಿಸಿದ ಪೊಲೀಸರು ಯುವತಿಯನ್ನು ರಕ್ಷಿಸಿದ್ದಾರೆ.

ಬಂಧಿತನನ್ನು ನಿವೃತ್ತ ಎಸ್ ಐ ರಾಮನಾಯ್ಕ್ ಅವರ ಪುತ್ರ ರಾಜೇಶ್ ಅಲಿಯಾಸ್ (ರಾಜೀವ್ ನಾಯ್ಕ್ ) ಎಂದು ಗುರುತಿಸಲಾಗಿದೆ. ಈತನ ಜೊತೆಗಿದ್ದ  ಈತನ ಸ್ನೇಹಿತರಾದ ಚಿಕ್ಕಹುಣಸೂರು ನಿವಾಸಿ ರಘು, ಹೌಸಿಂಗ್ ಬೋರ್ಡ್ ಕಾಲನಿಯ ಸಂತು ಪರಾರಿಯಾಗಿದ್ದಾರೆ. ಈತ ಹುಣಸೂರು-ಮಡಿಕೇರಿ ಹೆದ್ದಾರಿಯ ನಗರದ ಆರ್ ಟಿ ಒ ಕಛೇರಿ ಬಳಿ ತನ್ನ ಸ್ನೇಹಿತರೊಂದಿಗೆ ಬಂದಿದ್ದ ರಾಜೇಶ್, ಸ್ಕೂಟಿಯಲ್ಲಿ ಬರುತ್ತಿದ್ದ ಯುವತಿಯನ್ನು ತಡೆದು ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ. ತನ್ನ ಜೊತೆ ಬಾ ಎಂದು ಒತ್ತಾಯಿಸಿದ್ದಾನೆ. ಇದಕ್ಕೆ ಯುವತಿ ಒಪ್ಪದಿದ್ದಾಗ ಬಲವಂತವಾಗಿ ಯುವತಿಯನ್ನು ಸ್ನೇಹಿತರ ಸಹಾಯದಿಂದ ಕಾರಿಗೆ ಎಳೆದುಕೊಂಡು ಹೊರಟಿದ್ದು, ಯುವತಿಯ ಪೋಷಕರು ಕೂಡಲೇ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡ ಪೊಲೀಸರು ವೃತ್ತ ನಿರೀಕ್ಷಕ ಶಿವಕುಮಾರ್ ಮತ್ತು ಎಸ್ ಐ ಮಹೇಶ್ ನೇತೃತ್ವದಲ್ಲಿ ತಂಡ ರಚಿಸಿದ್ದು, ಮೊಬೈಲ್ ಕರೆ ಆಧರಿಸಿ ಕಾರ್ಯಾಚರಣೆ ನಡೆಸಿದರು. ಮಧ್ಯಾಹ್ನದ ವೇಳೆ ಆರೋಪಿಗಳು ಕೆ.ಆರ್.ನಗರದ ಚುಂಚನಕಟ್ಟೆ ದಾಟಿ ಮಾರಗೌಡನ ಬಳಿ ಬರುತ್ತಿದ್ದಾಗ ಪೊಲೀಸರು ಬೆನ್ನಟ್ಟಿದ್ದು, ಹುಣಸೂರು ಹೊರವಲಯದ ಹಾಳಗೆರೆ ಬಳಿ ಕಾರನ್ನು ಅಡ್ಡಗಟ್ಟಿದ್ದಾಗ ಸ್ನೇಹಿತರು ಪರಾರಿಯಾಗಿದ್ದಾರೆ. ಆರೋಪಿ ರಾಜೇಶ್ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.  ಪರಾರಿಯಾದ ಇನ್ನಿಬ್ಬರು ಸ್ನೇಹಿತರ ಹುಡುಕಾಟ ನಡೆದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: