ಕರ್ನಾಟಕ

ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್‍ಗೆ ಗೌರವಪೂರ್ಣ ಬೀಳ್ಕೊಡುಗೆ

ಬೆಂಗಳೂರು : ಪೊಲೀಸ್ ಮಹಾನಿರ್ದೇಶಕ ಸ್ಥಾನದಿಂದ ನಿವೃತ್ತರಾದ ಓಂಪ್ರಕಾಶ್ ಅವರಿಗೆ ಇಂದು ಗೌರವ ಪೂರ್ಣವಾಗಿ ಬೀಳ್ಕೊಡಲಾಯಿತು.

ಕೋರಮಂಗಲದ ಕೆಎಸ್‍ಆರ್‍ಪಿ ಮೈದಾನದಲ್ಲಿ ಇಂದು ನಡೆದ ಬೀಳ್ಕೊಡುಗೆ ಕವಾಯಿತಿನ ಗೌರವ ರಕ್ಷೆ ಸ್ವೀಕರಿಸಿ ನಂತರ ಮಾತನಾಡಿ ಪೊಲೀಸರು ಸಮಾಜ ಸ್ವಾಸ್ಥ್ಯ ಕಾಪಾಡುವಾಗ ಕಠಿಣ ಸ್ಥಿತಿಗಳು ಎದುರಾಗುವವು ಅವುಗಳಿಗೆ ಎದೆಗುಂದದೆ ಸವಾಲಾಗಿ ಸ್ವೀಕರಿಸಿ ಮುನ್ನುಗ್ಗಬೇಕು. ಪೊಲೀಸರು ದೈಹಿಕ ಹಾಗೂ ಮಾನಸಿಕವಾಗಿ ಸದೃಡರಾಗಿ ಜನಸ್ನೇಹಿಗಳಾಗಬೇಕು ಎಂದು ಕಿವಿಮಾತು ಹೇಳಿ, ವೃತ್ತಿಯಲ್ಲಿ ನನಗೆ ಧನ್ಯತಾ ಭಾವ ಮೂಡಿದೆ ಎಂದು ಭಾವುಕರಾದರು.

Leave a Reply

comments

Related Articles

error: