
ಮೈಸೂರು
ಪತ್ನಿಯೊಂದಿಗೆ ತೆರಳಿ ಮತಚಲಾಯಿಸಿದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ
ಮೈಸೂರು,ಏ.18:- ಮೈಸೂರು ಕೊಡಗು ಕ್ಷೇತ್ರದ ಚುನಾವಣೆ ಇಂದು ಬೆಳಿಗ್ಗೆಯಿಂದಲೇ ಆರಂಭಗೊಂಡಿದ್ದು, ಬೋಗಾದಿಯ ಎರಡನೇ ಹಂತದಲ್ಲಿರುವ ರಾಯಲ್ ಕಾಂಕರ್ಡ್ ಇಂಟರ್ ನ್ಯಾಶನಲ್ ಸ್ಕೂಲ್ ಮತಗಟ್ಟೆ ಸಂಖ್ಯೆ 109ಕ್ಕೆ ಬಂದು ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ತಮ್ಮ ಪತ್ನಿ ಅರ್ಪಿತಾ ಅವರೊಂದಿಗೆ ತೆರಳಿ ಮತ ಚಲಾಯಿಸಿದರು.
ಇದೇ ವೇಳೆ ಅವರ ಪತ್ನಿ ಅರ್ಪಿತಾ ಕೂಡ ಮತ ಚಲಾಯಿಸಿದ್ದು, ಶಾಯಿಯ ಬೆರಳನ್ನು ಪ್ರದರ್ಶಿಸಿದರು. (ಕೆ.ಎಸ್,ಎಸ್.ಎಚ್)