
ಮೈಸೂರು
ಮದ್ಯ ಸೇವಿಸಿ ಹಿಂಸೆ ನೀಡುತ್ತಿದ್ದ ಪತಿಯನ್ನು ಕೊಲೆಗೈದ ಪತ್ನಿ
ಮೈಸೂರು,ಏ.18:- ಮದ್ಯ ಸೇವಿಸಿ ಹಿಂಸೆ ನೀಡುತ್ತಿದ್ದ ಪತಿಯನ್ನು ಪತ್ನಿಯೇ ಕೊಲೆಗೈದ ಘಟನೆ ಗುಂಡೂರಾವ್ ನಗರದಲ್ಲಿ ನಡೆದಿದೆ.
ಕೊಲೆಯಾದವರನ್ನು ವೇಣುಗೋಪಾಲ್(43)ಎಂದು ಗುರುತಿಸಲಾಗಿದೆ. ಅವರ ಪತ್ನಿ ವಿಮಲಾ ಎಂಬವರೇ ತಮ್ಮ ನಿವಾಸದಲ್ಲಿ ಪತಿಯನ್ನು ಕೊಲೆಗೈದಿದ್ದಾರೆ. ವೇಣುಗೋಪಾಲ್ ನಿತ್ಯ ಕುಡಿದು ಬಂದು ಹೊಡೆಯುತ್ತಿದ್ದು, ಬದುಕಿಗೆ ಹಣ ಕೊಡುತ್ತಿರಲಿಲ್ಲ. ಕೂಲಿ ಮಾಡಿಕೊಂಡು ಬಂದ ಹಣವನ್ನು ಕಿತ್ತುಕೊಳ್ಳುತ್ತಿದ್ದ. ಹೀಗಾಗಿ ಕೊಲೆ ಮಾಡಿದ್ದೇನೆ ಎಂದು ಮಹಿಳೆ ತಿಳಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ತಂದೆ ಕೊಲೆಯಾಗಿ, ತಾಯಿ ಜೈಲಿಗೆ ಹೋಗಿದ್ದು, ಇಬ್ಬರು ಚಿಕ್ಕಮಕ್ಕಳು ತಬ್ಬಲಿಯಾಗಿದ್ದಾರೆ.
ವಿದ್ಯಾರಣ್ಯಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)