ಪ್ರಮುಖ ಸುದ್ದಿ

ಹಕ್ಕು ಚಲಾಯಿಸಿದ ಬಳಿಕ ಹೆಣ್ಣು ಮಗುವಿಗೆ ಜನ್ಮ ನೀಡಿದ ಚಿಕ್ಕಮರಳಿ ಗ್ರಾಮದ ತಾ.ಪಂ. ಸದಸ್ಯೆ

ರಾಜ್ಯ(ಪಾಂಡವಪುರ)ಏ.18:-  ಲೋಕಸಭಾ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ ಪಾಂಡವಪುರ ತಾಲೂಕಿನ ಚಿಕ್ಕಮರಳಿ ಗ್ರಾಮದ ನಿವಾಸಿ, ತಾಪಂ ಸದಸ್ಯೆ ಬಳಿಕ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.

ಪಾಂಡವಪುರ ತಾಲೂಕಿನ ಚಿಕ್ಕಮರಳಿ ಗ್ರಾಮದ ನಿವಾಸಿ  ತಾಪಂ ಸದಸ್ಯೆ ಮಂಗಳನವೀನ್ ಕುಮಾರ್ ಅವರು ತುಂಬು ಗರ್ಭಿಣಿಯಾಗಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ   ಚಿಕ್ಕಮರಳಿ ಗ್ರಾಮದ ಮತಗಟ್ಟೆಯಲ್ಲಿ 7.30ಕ್ಕೆ  ಪತಿ ನವೀನ್ ಅವರೊಂದಿಗೆ ತೆರಳಿ  ತಮ್ಮ ಹಕ್ಕು ಚಲಾಯಿಸಿದ್ದಾರೆ. ಬಳಿಕ ಮನೆಗೆ ತೆರಳಿದ ವೇಳೆ ಹೊಟ್ಟೆನೋವು ಕಾಣಿಸಿಕೊಂಡಿದೆ. ತಕ್ಷಣ ಮಂಗಳ ಅವರನ್ನು ಪಾಂಡವಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಮಂಗಳ ನವೀನ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: