ಮೈಸೂರು

ಎಟಿಎಂ ಮಷಿನ್ ಜೊತೆ 15ಲಕ್ಷರೂ.ದರೋಡೆ

ಎಟಿಎಂ ಮಷಿನ್ ಜೊತೆಗೆ 15 ಲಕ್ಷ ರೂಗಳನ್ನು ದರೋಡೆಕೋರರು ಹೊತ್ತೊಯ್ದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಾಡ್ಲಿ ವೃತ್ತದ ಬಳಿ ಇರುವ ಎಸ್ ಬಿ ಎಂ ಬ್ಯಾಂಕ್ ಗೆ ಸೇರಿದ ಎಟಿಎಂನಿಂದ ಕಳ್ಳರು ಹಣ ಎಗರಿಸಿದ್ದಾರೆ.  ಎಟಿಎಂ ಒಳಗೆ ಆಳವಡಿಸಲಾಗಿದ್ದ ಸಿಸಿ ಕ್ಯಾಮರಾವನ್ನು ತಿರುಗಿಸಿದ ಕಳ್ಳರು ಎಟಿಎಂ ಬಾಕ್ಸ್  ಸಹಿತ 15,29,300 ರೂ ನಗದನ್ನು ಕದ್ದೊಯ್ದಿದ್ದಾರೆ. ಸೋಮವಾರ 16 ಲಕ್ಷ ರೂ. ಹಾಕಲಾಗಿದ್ದು, 15,29,300 ರೂ. ಹಣ ಎಟಿಎಂನಲ್ಲಿ ಇತ್ತೆಂದು ತಿಳಿದು ಬಂದಿದೆ. ಒಳಗೆ ಪ್ರವೇಶಿದ ದುಷ್ಕರ್ಮಿಗಳು ಮೈ ತುಂಬ ಬಟ್ಟೆ ಧರಿಸಿ ದರೋಡೆ ನಡೆಸಿದ್ದಾರೆ.  ಸ್ಥಳಕ್ಕೆ ಮಳವಳ್ಳಿ ಡಿವೈಎಸ್ ಪಿ ಮ್ಯಾಥ್ಯೂ ಥಾಮಸ್ ಭೇಟಿ ನೀಡಿದ್ದಾರೆ. ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಮಳವಳ್ಳಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: