ಮೈಸೂರು

ಏ.27ರಿಂದ ಸುತ್ತೂರಿನಲ್ಲಿ ವೈದ್ಯರ ಶಿಬಿರ

ಮೈಸೂರು,ಏ.18 : ಜೆಎಸ್ಎಸ್ ವಿದ್ಯಾಪೀಠ ಹಾಗೂ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಗಳ ಸಂಯುಕ್ತಾಶ್ರಯದಲ್ಲಿ ಏ.27, 28ರಂದು ಸುತ್ತೂರಿನಲ್ಲಿ ವೈದ್ಯರ ಶಿಬಿರವನ್ನು ಆಯೋಜಿಸಲಾಗಿದೆ.

ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಪ್ರವಚನ ನೀಡಲಿದ್ದಾರೆ. ಶಿಬಿರದಲ್ಲಿ ‘ಜೀವನ; ಭಾರತೀಯ ಸಂಸ್ಕೃತಿ, ಸುಖೀ ಜೀವನದ ನಿದರ್ಶನಗಳು’ ಒಂದು ವಿಶ್ಲೇಷಣೆ ಹಾಗೂ ವೈದ್ಯ ಔಷಧಿ, ನಂಬಿಕೆ, ಸ್ವಾಸ್ಥ್ಯ ಸ್ವರ್ಣ ತ್ರಿಕೋನ ವಿಷಯವಾಗಿ ಅನುಕ್ರಮವಾಗಿ ಡಾ.ತಿಮ್ಮಪ್ಪ ಹೆಗ್ಡೆ, ಡಾ.ವಿ.ಬಿ.ಆರತಿ, ಡಾ.ಶ್ರೀಧರ್ ದೇಶ್ ಮುಖ್, ಸ್ವಾಮಿ ವಿರೇಶಾನಂದ ಸರಸ್ವತಿ ಇವರುಗಳು ಉಪನ್ಯಾಸ ನೀಡಲಿದ್ದಾರೆ ಎಂದು ಸಂಚಾಲಕರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: