ಪ್ರಮುಖ ಸುದ್ದಿಮೈಸೂರು

ವಿದ್ವಾನ್ ಮೈಸೂರು ಎನ್.ಶ್ರೀನಾಥ್ ರಿಂದ ಬೆಳದಿಂಗಳ ಸಂಗೀತ

ಮೈಸೂರು,ಏ.18 : ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಏ.19 ರಂದು ನಡೆಯುವ 211ನೇ ಬೆಳದಿಂಗಳ ಸಂಗೀತ ಗಾಯನ ಕಛೇರಿಯಲ್ಲಿ ವಿದ್ವಾನ್ ಮೈಸೂರು ಎನ್.ಶ್ರೀನಾಥ್ ಅವರು ನಡೆಸಿಕೊಡಲಿದ್ದಾರೆ.

ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಆರಂಭಿಕ ಸಂಗೀತವನ್ನು ವಿದುಷಿ ಕೆ.ಜಿ.ಕನಕಲಕ್ಷ್ಮೀಯವರಲ್ಲಿ ಪಡೆದರು, ಬಳಿಕ ಡಾ.ಎಸ್. ರಾಮನಾಥನ್, ವಿದ್ವಾನ್ ಆರ್.ಕೆ.ನಾರಾಯಣಸ್ವಾಮಿ, ವಿದ್ವಾನ್ ಆರ್. ಎನ್. ತ್ಯಾಗರಾಜನ್, ನಂತರ ಡಾ.ಆರ್. ಎನ್.ತಾರಾನಾಥನ್ ಅವರ ಬಳಿ ಸಂಗೀತ ಸೂಕ್ಷ್ಮತೆಗಳನ್ನು ಕಲಿತು, ಮದ್ರಾಸ್ ವಿವಿಯಿಮದ ಬಿ.ಮ್ಯೂಸಿಕ್, ಕರ್ನಾಟಕ ಸಂಗೀತದ್ಲಲಿ ವಿದ್ವತ್, ಸಂಸ್ಕೃತ ಆಗಮದಲ್ಲಿ ಪ್ರವೀಣ ಪದವಿ ಪಡೆದಿದ್ದಾರೆ. ಮೈಸೂರು ಆಕಾಶವಾಣಿಯಲ್ಲಿ ಬಿ-ಹೈ ಶ್ರೇಣಿಯ ಕಲಾವಿದರಾಗಿದ್ದಾರೆ.

ಇವರು ಧರ್ಮಸ್ಥಳ ಮಂಜುನಾಥಸ್ವಾಮಿ, ಹೊಂಬುಜ ಮಠ ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವಿದ್ಯಾರ್ಥಿ ವೇತನಕ್ಕೆ ಭಾಜನರಾಗಿದ್ದಾರೆ. ದೇಶ ವಿದೇಶಗಳಲ್ಲಿ ಸಂಗೀತ ಕಚೇರಿ ನೀಡಿದ್ದಾರೆ. ಇವರೊಂದಿಗೆ ಪಕ್ಕ ವಾಧ್ಯದಲ್ಲಿ ವಿದ್ವಾನ್ ಸಿ.ಎನ್.ತ್ಯಾಗರಾಜನ್, ವಿದ್ವಾನ್ ಪಿ.ನಟರಾಜ್, ವಿದ್ವಾನ್ ವಿ.ಎಸ್.ರಮೇಶ್ ಇವರುಗಳು ಸಾಥ್ ನೀಡಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: