ಕರ್ನಾಟಕಪ್ರಮುಖ ಸುದ್ದಿ

ಮೈಸೂರಿನಲ್ಲಿ ಮತಯಂತ್ರ ಹೊತ್ತೊಯ್ಯುತ್ತಿದ್ದ ಬಸ್‍ಗೆ ಬೆಂಕಿ!: ಸ್ವಲ್ಪದರಲ್ಲೇ ತಪ್ಪಿದ ಅನಾಹುತ

ಮೈಸೂರು (ಏ.19): ಮತದಾನ ಮುಗಿದ ಬಳಿಕ ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು ಸಾಗಿಸುತ್ತಿದ್ದ ಮೈಸೂರಿನ ಬಸ್‌ವೊಂದರಲ್ಲಿ ಗುರುವಾರ ತಡರಾತ್ರಿ (ಏಪ್ರಿಲ್ 18) ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತು. ಆದರೆ ಚಾಲಕನ ಸಮಯ ಪ್ರಜ್ಞೆ ಮೆರೆಯಿಂದ ದೊಡ್ಡ ಅವಘಡವೊಂದು ತಪ್ಪಿದಂತಾಗಿದೆ.

ಹೌದು, ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಚಾಲಕ ಕೇಬಲ್ ವೈರ್ ಕತ್ತರಿಸಿ ಬೆಂಕಿ ಹರಡುವುದನ್ನು ತಡೆಗಟ್ಟಿದ್ದಾರೆ. ಮತಗಟ್ಟೆ ಸಂಖ್ಯೆ 242 ಮತ್ತು 245ರ ಮತಯಂತ್ರಗಳನ್ನು ಬಸ್‌ನಲ್ಲಿ ತರುತ್ತಿದ್ದ ವೇಳೆ ಗೌರಿಶಂಕರ ನಗರದ ಗವಿಮಠ ರಸ್ತೆಯಲ್ಲಿ ಬೆಂಕಿಯ ಕಿಡಿಗಳು ಕಾಣಿಸಿಕೊಂಡಿವೆ.

ಬಸ್ ನಲ್ಲಿ ಗೌರಿಶಂಕರ ನಗರ ಸರ್ಕಾರಿ ಶಾಲೆಯ ಮತಯಂತ್ರಗಳನ್ನು KA 09 F -3650 ನೋಂದಣಿಯ ನಗರ ಸಾರಿಗೆ ಬಸ್ ನಲ್ಲಿ ಸಾಗಿಸುತ್ತಿದ್ದು, ಚಾಲಕ ಹಿರಿಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿ ತಕ್ಷಣ ಕೇಬಲ್ ವೈರ್ ಕತ್ತರಿಸಿದ್ದಾರೆ. ಇದರಿಂದ ಬೆಂಕಿ ಹರಡಿಲ್ಲ. ನಂತರ, ಸ್ಥಳಕ್ಕೆ ಬಂದ ಕೆ.ಆರ್.ಠಾಣೆಯ ಇನ್‌ಸ್ಪೆಕ್ಟರ್ ವಿ.ನಾರಾಯಣ ಸ್ವಾಮಿ ಬೇರೊಂದು ಬಸ್ ತರಿಸಿ ಅದರಲ್ಲಿ ಮತಯಂತ್ರಗಳನ್ನು ಕಳುಹಿಸಿದರು. (ಎನ್.ಬಿ)

Leave a Reply

comments

Related Articles

error: