ಪ್ರಮುಖ ಸುದ್ದಿಮೈಸೂರು

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗಣಪತಿಯ ವಿಗ್ರಹ ಕಳಿಸಿದ ಮೈಸೂರಿನ ಅರ್ಜುನ ಅವಧೂತರು

ರಾಜ್ಯ(ಚಿಕ್ಕೋಡಿ)ಏ.19:- ಚಿಕ್ಕೋಡಿ ಯಲ್ಲಿ ನಡೆದ ಬಿಜೆಪಿ  ಬಹಿರಂಗ ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮೈಸೂರಿನ ಅರ್ಜುನ ಅವಧೂತರು ವಿಶೇಷ ಪೂಜೆ ಮಾಡಿದ ಗಣಪತಿ ವಿಗ್ರಹ, ಸತ್ಯ ಸಾಯಿ ಚರಿತ್ರೆ ಪುಸ್ತಕ, ರುದ್ರಾಕ್ಷಿ ಮಾಲೆಯನ್ನು ಮೈಸೂರಿನಿಂದ  ವಿಧಾನ ಪರಿಷತ್ ಸದಸ್ಯೆ ತಾರಾ (ಅನುರಾಧ) ಅವರ ಮೂಲಕ ಕಳುಹಿಸಿಕೊಟ್ಟಿದ್ದಾರೆ.

ಪ್ರಧಾನಿ ಮೋದೊಯವರು ರಾಷ್ಟ್ರಾದ್ಯಂತ ಚುನಾವಣೆ ಯ ನಿಮ್ಮಿತ್ತ ಪ್ರವಾಸ ಕೈ ಗೊಂಡಿದ್ದು 543 ರ ಲೋಕಸಭಾ ಸದಸ್ಯರ ಗೆಲುವಿನ ನಿಟ್ಟಿನಲ್ಲಿ ಜನರ ಮನವೊಲಿಸಲು ಮೋದಿಯವರು ಕಳೆದ 5 ವರ್ಷ ಗಳ ಸಾಧನೆ ಮತ್ತು ಕಾರ್ಯಾಚರಣೆಯ ಅಧಾರದ ಮೇಲೆ ಮತ ಚಲಾಯಿಸಲು ಮತದಾರರನ್ನು ಜಾಗೃತಿಗೊಳಿಸಲು ಸಭೆ, ಸಮಾವೇಶಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.  ಬಹು ಮತದಿಂದ ಸರ್ಕಾರ ರಚನೆ ಮಾಡಲು ಅದಮ್ಯ ನವರಾತ್ರಿಯ ಸಂದರ್ಭದಲ್ಲಿ ನವ ದಿವಸವು ಕೂಡ ಉಪವಾಸದಲ್ಲಿದ್ದು ಸಂಘಟನೆ ಮಾಡುತ್ತಿರುವುದನ್ನು ಮನಗಂಡು ಮೈಸೂರಿನ ಸೋನಾರ್ ಬೀದಿಯಲ್ಲಿ ಇರುವ ಅರ್ಜುನ್ ಅವಧೂತ ಮಹರಾಜ ರು ಮೋದಿ ಅವರಿಗೆ ದೇವರು ಶಕ್ತಿ ಕರುಣಿಸಲಿ ಮತ್ತು ಮುಂದೆ ಸರ್ಕಾರ ರಚನೆಯ ಸಂದರ್ಭದಲ್ಲಿ ಯಾವುದೇ ಅಡಚಣೆ ಯಾಗದ ರೀತಿ ಮತ್ತು ಅನ್ಯ ಪಕ್ಷಗಳು ಮೋದಿ ಅವರಿಗೆ ಸಂಪೂರ್ಣ ಬೆಂಬಲ ಕೊಡಲೆಂದು ವಿಶೇಷ ವಾದ ಪೂಜೆ ಮಾಡಿಸಿ   ಒಳ್ಳೆಯದು ಆಗಲಿ ಎಂದು ಪ್ರಾರ್ಥಿಸಿ, ವಿಘ್ನೇಶ್ವರನ ಶುದ್ಧ ಬೆಳ್ಳಿ ವಿಗ್ರಹವನ್ನು ವಿಧಾನ ಪರಿಷತ್ ಸದಸ್ಯೆ ತಾರಾ(ಅನುರಾಧ)ಅವರ ಮೂಲಕ ನೀಡಿದ್ದಾರೆ. ಚಿಕ್ಕೋಡಿಯ ಬಹಿರಂಗ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯೆ ತಾರಾ ಅವರು ಮೋದಿಯವರಿಗೆ ನೀಡಿದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: