ಪ್ರಮುಖ ಸುದ್ದಿಮೈಸೂರು

ರಾಜು ಅನಂತಸ್ವಾಮಿ ಜನ್ಮ ದಿನ ‘ರಾಜು ಗಾನಲಹರಿ’ ನಾಳೆ

ಮೈಸೂರು, ಏ.19 : ಖ್ಯಾತ ಸುಗಮ ಸಂಗೀತಗಾರ ರಾಜು ಅನಂತಸ್ವಾಮಿ ಅವರ ಜನ್ಮ ದಿನದ ಅಂಗವಾಗಿ ‘ರಾಜು ಗಾನಲಹರಿ’ ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ನಾದಾಮೃತ ಸಂಗೀತ ವಿದ್ಯಾಲಯದ ಪ್ರಾಂಶುಪಾಲ ನಿತಿನ್ ರಾಜಾರಾಂ ಶಾಸ್ತ್ರಿ ತಿಳಿಸಿದರು.

ಸಂಸ್ಥೆಯ ವತಿಯಿಂದ ಏ.20ರ ಸಂಜೆ 5.30ಕ್ಕೆ ಗಾನಭಾರತಿಯ ವೀಣೆ ಶೇಷಣ ಭವನದಲ್ಲಿ ಆಯೋಜಿಸಿರುವ ಕಾರ್ಯಕ್ರಮವನ್ನು ಹಿರಿಯ ರಂಗಕರ್ಮಿ ಕಿರಗಸೂರು ರಾಜಪ್ಪ ಚಾಲನೆ ನೀಡುವರು, ಗಾನಭಾರತಿ ಅಧ್ಯಕ್ಷ ಡಾ.ಸಿ.ಜಿ.ನರಸಿಂಹನ್ ಅಧ್ಯಕ್ಷತೆ, ಗಾಯಕಿ ರಮ್ಯ ವಸಿಷ್ಠ, ಮೈಸೂರು ಅನಂತಸ್ವಾಮಿಯವರ ಪತ್ನಿ ಶಾಂತಾ ಅನಂತಸ್ವಾಮಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಂತರ ವಿದ್ಯಾರ್ಥಿಗಳಿಂದ ರಾಜು ಅನಂತಸ್ವಾಮಿ ಅವರ ಸಂಯೋಜನೆಗಳ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಅವರ ಸ್ಮರಣಾರ್ಥ ಪ್ರತಿ ತಿಂಗಳ ಎರಡನೇ ಶನಿವಾರದಂದು ನಾಡಿನಾದ್ಯಂತ ಇರುವ ರಾಜು ಅನಂತಸ್ವಾಮಿ ಶಿಷ್ಯರನ್ನು ಕರೆಸಿ ಸಂಗೀತ ಕಛೇರಿ ನಡೆಸುವ ಯೋಜನೆಯನ್ನು ಹಾಕಲಾಗಿದೆ ಎಂದು ತಿಳಿಸಿದರು.

ಸಂಸ್ಥೆ ಕಾರ್ಯದರ್ಶಿ ಅಮೃತಾ ರಾಜಾರಾಂ ಶಾಸ್ತ್ರಿ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: