ಕ್ರೀಡೆವಿದೇಶ

ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟರ್ ನಿಕೊಲಾ ಹ್ಯಾನ್ಕಾಕ್ ಜೊತೆ ನ್ಯೂಜಿಲೆಂಡ್ ಮಹಿಳಾ ಕ್ರಿಕೆಟರ್ ಹೇಯ್ಲೆ ಜೆನ್ಸನ್ ವಿವಾಹ !

ವಿದೇಶ(ಸಿಡ್ನಿ)ಏ.19:- ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟರ್ ನಿಕೊಲಾ ಹ್ಯಾನ್ಕಾಕ್ ಮತ್ತು ನ್ಯೂಜಿಲೆಂಡ್ ಮಹಿಳಾ ಕ್ರಿಕೆಟರ್ ಹೇಯ್ಲೆ ಜೆನ್ಸನ್ ನಡುವೆ ವಿವಾಹ ನೆರವೇರಿದೆ.

ಮೆಲ್ಬೋರ್ನ್ ಸ್ಟಾರ್ಸ್ ಎಂಬ ಟ್ವೀಟರ್ ಖಾತೆಯಲ್ಲಿ ವಿವಾಹವಾಗಿರುವುದನ್ನು ಬಹಿರಂಗಪಡಿಸಿದ್ದು, ಅದಕ್ಕೆ ಸಾಕ್ಷಿಯಾಗಿ ವಿವಾಹ ಸಮಾರಂಭದ ಫೋಟೋವನ್ನು ಶೇರ್ ಮಾಡಿದೆ. ಟೀಂ ಗ್ರೀನ್ ತಂಡದವರು ಸ್ಠರ್ ಬೌಲರ್ ನಿಕೊಲಾ ಹ್ಯಾನ್ಕಾಕ್ ಅವರಿಗೆ ವಿವಾಹದ ಶುಭಾಶಯ ಕೋರುವುದಾಗಿ ಮೆಲ್ಬಿರ್ನ್ ಸ್ಟಾರ್ಸ್ ಟ್ವೀಟರ್ ನಲ್ಲಿ ತಿಳಿಸಿದೆ. ಕಳೆದ ವರ್ಷ ದಕ್ಷಿಣ ಆಫ್ರಿಕಾದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಡೇನ್ ವ್ಯಾನ್ ನೈಕರ್ಕ್ ಮತ್ತು ತಂಡದ ಸಹ ಆಟಗಾರ್ತಿ ಮಾರಿಝನ್ನೆ ಕಪ್ಟ್ ವಿವಾಹವಾಗಿದ್ದರು. (ಎಸ್.ಎಚ್)

Leave a Reply

comments

Related Articles

error: