ಮೈಸೂರು

ನಾಳೆಯಿಂದ ತೇಜಸ್ವಿಯವರ ‘ತಬರನ ಕಥೆ’ ನಾಟಕ ಪ್ರದರ್ಶನ

ಮೈಸೂರು,ಏ.19 : ಮಹೇಶ್ ಥಿಯೇಟರ್ ಗ್ರೂಪ್ ರಂಗವೇದಿಕೆ ವತಿಯಿಂದ ಹಿರಿಯ ಕಾದಂಬರಿಕಾರ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಾದಂಬರಿ ಆಧಾರಿತ ‘ತಬರನ ಕಥೆ’ ನಾಟಕ ಪ್ರದರ್ಶನವನ್ನು ಏ.20 ಮತ್ತು 21ರಂದು ಕಲಾಮಂದಿರದಲ್ಲಿ ಏರ್ಪಡಿಸಲಾಗಿದೆ.

ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ಅವರು ಸಂಜೆ 7ಕ್ಕೆ ಉದ್ಘಾಟಿಸುವರು, ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಹೆಚ್.ಚನ್ನಪ್ಪ, ಚಿಂತಕ ರಮೇಶ್ ಗುಬ್ಬಿಗೂಡು ಇವರುಗಳು ಹಾಜರಿರಲಿದ್ದಾರೆ.

ಮಾಯಸಂದ್ರ ಕೃಷ್ಣ ಪ್ರಸಾದ್ ನಿರ್ದೇಶನ, ಸಿ.ಚಂದ್ರಶೇಖರ್ ನಿರ್ವಹಣೆ, ಮಹೇಶ್ ನಂಜಯ್ಯ ನಿರ್ಮಿಸಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: