ಪ್ರಮುಖ ಸುದ್ದಿ

ಪ್ರಧಾನಿ ನರೇಂದ್ರ ಮೋದಿ ಬಯೋಪಿಕ್ ಸಿನಿಮಾಕ್ಕೆ ಅರ್ಹರಲ್ಲ : ನಟಿ ಊರ್ಮಿಳಾ ಮಾತೊಂಡ್ಕರ್ ಟೀಕೆ

ದೇಶ(ನವದೆಹಲಿ)ಏ.19:- ಪ್ರಧಾನಿ ನರೇಂದ್ರ ಮೋದಿ ಬಯೋಪಿಕ್ ಸಿನಿಮಾಕ್ಕೆ ಅರ್ಹರಲ್ಲ ಅವರ ಮೇಲೆ ಕಾಮಿಡಿ ಸಿನಿಮಾ ಮಾಡಿ ಎಂದು ಕಾಂಗ್ರೆಸ್ ನ ಮುಂಬೈ ಉತ್ತರ ಭಾಗದ ಅಭ್ಯರ್ಥಿ, ನಟಿ ಊರ್ಮಿಳಾ ಮಾತೊಂಡ್ಕರ್ ಟೀಕಿಸಿದ್ದಾರೆ.

ಮೋದಿ ಜನರಿಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸಲು ವಿಫಲರಾಗಿದ್ದಾರೆ. ಮೋದಿ ಕುರಿತು ಮಾಡಿರುವ ಸಿನಿಮಾ ಪ್ರಧಾನಿಗೆ ಮಾಡಿದ ಜೋಕ್ ಆಗಿದೆ. ಅವರ ಮೇಲೆ ಮಾಡಿರುವ ಸಿನಿಮಾ ಪ್ರಜಾಪ್ರಭುತ್ವ, ಬಡತನ ಮತ್ತು ಭಾರತದ ವೈವಿಧ್ಯತೆಗಳ ಮೇಲೆ ಮಾಡಿರುವ ಜೋಕ್. ಜನರಿಗೆ ನೀಡಿರುವ ಆಶ್ವಾಸನೆ ಈಡೇರಿಸದ ಹಿನ್ನೆಲೆಯಲ್ಲಿ ಇದನ್ನು ಕಾಮಿಡಿ ಸಿನಿಮಾ ಮಾಡಬೇಕು ಎಂದಿದ್ದಾರೆ. (ಎಸ್.ಎಚ್)

 

Leave a Reply

comments

Related Articles

error: