ದೇಶಪ್ರಮುಖ ಸುದ್ದಿ

ಪ್ರಧಾನಿ ಮೋದಿ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ಮಾತನಾಡುತ್ತಿದ್ದಾರೆ: ದೇವೇಗೌಡರ ಬೇಸರ

ರಾಯಚೂರು (ಏ.19): ಪ್ರಧಾನಿ ಮೋದಿ ಅವರ ಪ್ರಭಾವ ಕಡಿಮೆ ಆಗಿದ್ದು ಅರಿವಿಗೆ ಬಂದಿದ್ದು ಸ್ಥಿಮಿತ ತಪ್ಪಿ ಮಾತನಾಡುತ್ತಿದ್ದಾರೆ ಎಂದು ಜೆಡಿಎಸ್ ವರಿಷ್ಟ ದೇವೇಗೌಡ ಅವರು ಹೇಳಿದರು. ರಾಯಚೂರಿನಲ್ಲಿ ನಡೆದ ಜಂಟಿ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿ ಅವರು ರಾಜ್ಯದ ಮೈತ್ರಿ ಸರ್ಕಾರವನ್ನು ಕಲಬೆರಕೆ ಸರ್ಕಾರ ಎಂದಿದ್ದಾರೆ, ಒಬ್ಬ ಪ್ರಧಾನಿ ಸಂವಿಧಾನಬದ್ಧ ಸರ್ಕಾರವನ್ನು ಇಷ್ಟು ಹೀನಾಯವಾಗಿ ಟೀಕಿಸಿದ್ದು ನಾನು ನೊಡಿಲ್ಲ ಎಂದು ಅವರು ಹೇಳಿದರು.

ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಕಲಬೆರಕೆ ಸರ್ಕಾರ ಎನ್ನುವ ಅವರ ಬಿಜೆಪಿ ಪಕ್ಷವು 15 ರಾಜ್ಯಗಳಲ್ಲಿ ಮೈತ್ರಿ ಸರ್ಕಾರವನ್ನೇ ನಡೆಸುತ್ತಿದೆ, ಅದನ್ನು ಮರೆತು ಅವರು ಸ್ಥಿಮಿತ ಕಳೆದುಕೊಂಡು ಮಾತನಾಡುತ್ತಿದ್ದಾರೆ ಎಂದು ಅವರು ಹೇಳಿದರು. ಇತ್ತೀಚಿನ ದಿನಗಳಲ್ಲಿ ಬಿಜೆಪಿಯು ಮೂರು ವಿಧಾನಸಭೆ ಮತ್ತು 12 ಲೋಕಸಭೆ ಉಪಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದಾರೆ ಹಾಗಾಗಿ ಅವರಿಗೆ ಅರಿವಾಗಿದೆ ಬಿಜೆಪಿಯ ಪ್ರಭಾವ ತಗ್ಗಿದೆ ಎಂಬುದು ಹಾಗಾಗಿ ಅವರು ಹೊಸ ನಾಟಕ ಪ್ರಾರಂಭಿಸಿದ್ದು ಹಿಂದುಳಿದ ಜಾತಿಯವನು ಎಂದು ಮತಕೇಳಲು ತೊಡಗಿದ್ದಾರೆ ಎಂದು ಅವರು ಹೇಳಿದರು.

ಇಷ್ಟು ವರ್ಷ ಆಡಳಿತ ಆದಮೇಲೆ ದೇಶಕ್ಕೆ ಬಲಿಷ್ಠ ಸರ್ಕಾರ ಬೇಕು ಎಂದು ಹೇಳುತ್ತಿರುವ ಇವರು, ಎಐಡಿಎಂಕೆ, ಶಿವಸೇನಾ, ಅಕಾಲಿದಳ, ಬಿಹಾರದ ಜನತಾ ದಳಗಳ ಬಳಿ ಹೋಗಿ ಮೈತ್ರಿಗೆ ಕೈ ಚಾಚಿದ್ದಾರೆ. ಸಣ್ಣ ಪಕ್ಷಗಳನ್ನು ಸೇರಿಸಿಕೊಂಡು ಚುನಾವಣೆಗೆ ಹೋಗುತ್ತಿರುವ ಅವರು ಮಹಾಘಟಭಂದನ್ ಅನ್ನು ಟೀಕಿಸುತ್ತಿದ್ದಾರೆ ಎಂದು ದೇವೇಗೌಡ ಅವರು ಹೇಳಿದ್ದಾರೆ.

ಮೋದಿ ಆಡಳಿತದಲ್ಲಿ ರೈತರು ಹೈರಾಣಾಗಿದ್ದಾರೆ. ನಾನು ಪ್ರಧಾನಿ ಆಗಿದ್ದ ಕೇವಲ 10.5 ತಿಂಗಳಲ್ಲಿ ಕೃಷಿ ಅಭಿವೃದ್ಧಿ 7.5% ಆಗಿತ್ತು. ಆದರೆ ಮೋದಿಗೆ ರೈತರ ಬಗ್ಗೆ ಕಾಳಜಿ ಇಲ್ಲ, ಈಗ ಖಾತೆಗೆ ವರ್ಷಕ್ಕೆ 6000 ಹಾಕುತ್ತೇನೆ ಎನ್ನುತ್ತಿದ್ದಾರೆ ಆದರೆ ಅದು ಬಹಳ ಕಡಿಮೆ ಎಂದು ದೇವೇಗೌಡ ಹೇಳಿದರು.

ದಶಕಗಳ ನಂತರ ಮೋದಿಗೆ ಬಹುಮತ ದೊರೆತಿತ್ತು, ಆದರೆ ಅದನ್ನು ಅವರು ಹಾಳುಮಾಡಿಕೊಂಡರು, ಅವರು ಕೆಟ್ಟ ಆಡಳಿತ ನೀಡಿದರು. ಇವರ ಆಡಳಿತದಲ್ಲಿ ದಲಿತ ಜನರು, ಮುಸ್ಲಿಂ ಭಾಂದವರಿಗೆ ಕೆಟ್ಟ ಅನುಭವವಾಗಿದೆ ಹಾಗಾಗಿ ಈ ಬಾರಿ ಅವರನ್ನು ಬದಲಾಯಿಸಬೇಕು ಎಂದು ದೇವೇಗೌಡ ಕರೆ ಮಾಡಿದರು. (ಎನ್.ಬಿ)

Leave a Reply

comments

Related Articles

error: