
ಪ್ರಮುಖ ಸುದ್ದಿ
ಮಂಡ್ಯದಿಂದ ಟೂರಿಂಗ್ ಟಾಕೀಸ್ ಪ್ಯಾಕ್ ಅಪ್ ಅಗಲಿದೆ ಎಂದವರಿಗೆ ನಟ ಅಭಿಷೇಕ್ ಟಾಂಗ್
ರಾಜ್ಯ(ಮಂಡ್ಯ)ಏ.20:- ಚುನಾವಣೆಯ ನಂತರ ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ನಟಿ ಸುಮಲತಾ ಅಂಬರೀಷ್ ಮತ್ತು ಅವರ ಮಗ ಅಭಿಷೇಕ್ ಇಬ್ಬರೂ ಸಿಂಗಪೂರ್ ಗೆ ಹೋಗುತ್ತಾರೆ. ಏ.19ರ ನಂತರ ಮಂಡ್ಯದಲ್ಲಿರುವ ಟೂರಿಂಗ್ ಟಾಕೀಸ್ ಪ್ಯಾಕಪ್ ಆಗಲಿದೆ. ಇದಕ್ಕಾಗಿ ಟಿಕೇಟ್ ಕೂಡ ಬುಕ್ ಆಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬಿಸಿದವರಿಗೆ ನಟ ಅಭಿಷೇಕ್ ಟಾಂಗ್ ನೀಡಿದ್ದಾರೆ.
ಮತದಾನ ನಡೆದ ಮಾರನೇ ದಿನವೇ ಮಂಡ್ಯದಲ್ಲಿ ಅಡ್ಡಾಡಿದ ಅಭಿಷೇಕ್ ನಾನು ಟೀ ಅಂಗಡಿಯವರಿಗೆ ಮಾತುಕೊಟ್ಟಿದ್ದೆ. ಚುನಾವಣೆ ಮುಗಿದ ಬಳಿಕವೂ ಬರುವುದಾಗಿ ತಿಳಿಸಿದ್ದೆ. ಅದರಂತೆ ನಾನು ಬಂದು ಟೀ ಕುಡಿದು ಹೋಗುತ್ತಿದ್ದೇನೆ. ಯಾರೋ ಸಾಮಾಜಿಕ ಜಾಲತಾಣದಲ್ಲಿ ಅಮ್ಮ ಸಿಂಗಪೂರ್ ಗೆ ಹೋಗುವ ಸುಳ್ಳು ಸುದ್ದಿ ಹಬ್ಬಿಸಿದ್ದರು. ಯಾರು ಈ ಸುಳ್ಳು ಸುದ್ದಿ ಹಬ್ಬಿಸಿದ್ದರೋ ಅವರಿಗೆ ತಲುಪುತ್ತದೆ ಬಿಡಿ ಎಂದಿದ್ದಾರೆ. ನಾನು ಇಲ್ಲಿಂದ ಮೈಸೂರಿಗೆ ತೆರಳಿ ಮೈಸೂರು ಏರ್ ಪೋರ್ಟ್ ನಿಂದ ಸಿಂಗಪೂರ್ ಗೆ ಹಾರುತ್ತೇನೆ ಎಮದು ವ್ಯಂಗ್ಯವಾಡಿದ್ದಾರೆ. ಬೆಟ್ಟಿಂಗ್ ಕಟ್ಟಿ ಯಾರೂ ಹಣ ಹಾಳುಮಾಡಿಕೊಳ್ಳಬೇಡಿ. ಹೆಚ್ಚಿನ ಸಂಖ್ಯೆಯಲ್ಲಿ ಮತದಾನವಾಗಿದ್ದು, ಅಮ್ಮನ ಗೆಲುವಿನ ಸಾಧ್ಯತೆ ಹೆಚ್ಚಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. (ಕೆ.ಎಸ್,ಎಸ್.ಎಚ್)