ದೇಶಪ್ರಮುಖ ಸುದ್ದಿ

ಮುಖ್ಯನ್ಯಾಯಾಧೀಶರ ಕಚೇರಿ ನಿಷ್ಕ್ರಿಯವಾಗಬೇಕಿದೆ! ನ್ಯಾಯಾಂಗ ವ್ಯವಸ್ಥೆ ಬೆದರಿಕೆಯಲ್ಲಿದೆ: ಸಿಜೆಐ ಎಚ್ಚರಿಕೆ

"ನನ್ನ ಕಚೇರಿಯ ಜವಾನ ನನಗಿಂತಲೂ ಹೆಚ್ಚಿನ ಆಸ್ತಿ ಮತ್ತು ಹಣ ಹೊಂದಿದ್ದಾರೆ"

ನವದೆಹಲಿ (ಏ.20): ಸುಪ್ರೀಂಕೋರ್ಟ್​​ ಮಾಜಿ ಸಿಬ್ಬಂದಿಯೊಬ್ಬರು ಮುಖ್ಯ ನ್ಯಾಯಮೂರ್ತಿ ರಂಜನ್​ ಗೋಗೊಯ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ನಂತರ ಶನಿವಾರ ಬೆಳಗ್ಗೆ ಸುಪ್ರೀಂಕೋರ್ಟ್​ ವಿಶೇಷ ವಿಚಾರಣೆ ನಡೆಸಿತು.

ಮುಖ್ಯನ್ಯಾಯಮೂರ್ತಿ ಗೋಗೊಯ್​ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಈ ವಿಚಾರಣೆ ನಡೆದಿದೆ. “ಈ ಆರೋಪವೂ ನ್ಯಾಯಾಂಗ ವ್ಯವಸ್ಥೆ ಎದುರಿಸುತ್ತಿರುವ ತುಂಬಾ ಗಂಭೀರ ಬೆದರಿಕೆಯನ್ನು ತೋರಿಸುತ್ತದೆ,” ಎಂದು ನ್ಯಾ.ಗೋಗೊಯ್ ಹೇಳಿದರು. ಆರೋಪ ಕುರಿತಾಗಿ ಪೀಠ ಯಾವುದೇ ಆದೇಶ ನೀಡಿಲ್ಲ. ಮುಖ್ಯನ್ಯಾಯಮೂರ್ತಿ ತಮ್ಮ ವಿರುದ್ಧ ಕೇಳಿಬಂದಿರುವ ಆರೋಪ ಸಂಬಂಧ ಹಿರಿಯ ನ್ಯಾಯಮೂರ್ತಿಗಳ ವಿಚಾರಣೆ ವೇಳೆ ಸ್ಪಷ್ಟೀಕರಣ ನೀಡಲಿದ್ದಾರೆ.

ನ್ಯಾಯಾಂಗ ವ್ಯವಸ್ಥೆ ತುಂಬಾ ಗಂಭೀರ ಬೆದರಿಕೆ ಎದುರಿಸುತ್ತಿದೆ. ಒಳ್ಳೆಯ ಜನರು ನ್ಯಾಯಮೂರ್ತಿಗಳಾಗಬಾರದು. ಒಂದು ವೇಳೆ ಆದರೆ, ಹೀಗೆ ಗುರಿಗೆ ಈಡಾಗಬೇಕಾಗುತ್ತದೆ. ನನಗೆ ಗೌರವಕ್ಕಿಂತ ಹೆಚ್ಚು ಮೌಲ್ಯಯುತವಾದದ್ದು ಬೇರೆ ಯಾವುದೂ ಇಲ್ಲ. ಮತ್ತು ಉನ್ನತ ಸ್ಥಾನದಲ್ಲಿರುವ ನಾನು ಇದನ್ನು ಹೇಳುವುದಕ್ಕಾಗಿ ಈ ಪೀಠ ರಚಿಸಿದೆ ಎಂದು ನ್ಯಾ.ಗೋಗೊಯ್​ ಕರೆಯಲಾಗಿದ ತುರ್ತು ವಿಚಾರಣೆ ವೇಳೆ ಹೇಳಿದರು.

ಇದರ ಹಿಂದೆ ದೊಡ್ಡ ಪಡೆಯೇ ಇದೆ, ಅವರಿಗೆ ಮುಖ್ಯನ್ಯಾಯಮೂರ್ತಿ ಕಚೇರಿ ನಿಷ್ಕ್ರಿಯಗೊಳ್ಳುವುದುಬೇಕಿದೆ ಎಂದು ನ್ಯಾ.ಗೋಗೊಯ್ ಹೇಳಿದರು. ಇಪ್ಪತ್ತು ವರ್ಷಗಳಿಂದ ನಾನು ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ಬ್ಯಾಂಕ್​ ಖಾತೆಯಲ್ಲಿ 6.80 ಲಕ್ಷ ಹಣವಿದೆ. ನನ್ನ ಕಚೇರಿಯ ಜವಾನ ನನಗಿಂತಲೂ ಹೆಚ್ಚಿನ ಆಸ್ತಿ ಮತ್ತು ಹಣ ಹೊಂದಿದ್ದಾರೆ ಎಂದು ನ್ಯಾ.ಗೋಗೊಯ್ ತಿಳಿಸಿದರು. (ಎನ್.ಬಿ)

Leave a Reply

comments

Related Articles

error: