ಕರ್ನಾಟಕಪ್ರಮುಖ ಸುದ್ದಿ

ನರೇಂದ್ರ ಮೋದಿಗಿಂತ ದೇವೇಗೌಡರೇ ಉತ್ತಮ ಪ್ರಧಾನಿ: ಸಿ.ಎಂ ಕುಮಾರಸ್ವಾಮಿ

ಬೆಂಗಳೂರು (ಏ.20): ಭದ್ರತೆ ದೃಷ್ಟಿಯಿಂದ ನೋಡುವುದಾದರೆ ಪ್ರಧಾನಿ ನರೇಂದ್ರ ಮೋದಿ ಅವರಿಗಿಂತ ಎಚ್.​ಡಿ ದೇವೇಗೌಡರು ಅತ್ಯುತ್ತಮ ಆಡಳಿತ ನೀಡಿದ್ದರು ಎಂದು ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಎಎನ್​ಐ ಸುದ್ದಿಸಂಸ್ಥೆ ಜೊತೆ ಮಾತನಾಡಿರುವ ಸಿಎಂ, “1995ರಲ್ಲಿ 10 ತಿಂಗಳು ದೇವೇಗೌಡ ಅವರು ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದರು. ಈ ವೇಳೆ ಯಾವುದೇ ಭಯೋತ್ಪಾದನಾ ಚಟುವಟಿಕೆ ನಡೆದಿರಲಿಲ್ಲ. ಆ ಸಮಯದಲ್ಲಿ ದೇಶದಲ್ಲಿ ಯಾವುದಾದರೂ ಭಯೋತ್ಪಾದನಾ ಕೃತ್ಯಗಳು ನಡೆದಿತ್ತೇ? ಭಾರತ-ಪಾಕ್​ ಗಡಿಯಲ್ಲಿ ಉಗ್ರ ಚಟುವಟಿಕೆ ನಡೆದಿತ್ತೇ? ನನ್ನ ತಂದೆ ಪ್ರಧಾನಿಯಾಗಿದ್ದಾಗ ಇಡೀ ದೇಶವೇ ಶಾಂತವಾಗಿತ್ತು” ಎಂದು ಅಭಿಪ್ರಾಯಪಟ್ಟಿದ್ದಾರೆ.

ದೇವೇಗೌಡರು 10 ತಿಂಗಳಲ್ಲಿ ಎಷ್ಟು ಕೆಲಸ ಮಾಡಿದ್ದಾರೆ, ಮೋದಿ ಐದು ವರ್ಷಗಳಲ್ಲಿ ಏನು ಮಾಡಿದ್ದಾರೆ ಎಂಬುದನ್ನು ದಾಖಲೆಗಳ ಮೂಲಕ ಪರಿಶೀಲಿಸಬಹುದು. ದೇಶದ ಭದ್ರತೆ ದೃಷ್ಟಿಯಲ್ಲಿ ಮೋದಿಗೆ ಹೋಲಿಸಿದರೆ ದೇವೇಗೌಡ ಅತ್ಯುತ್ತಮ ಆಡಳಿತ ನೀಡಿದ್ದಾರೆ ಎಂದರು ಎಚ್​ಡಿಕೆ.

ಲೋಕಸಭಾ ಚುನಾವಣೆಯ ಫಲಿತಾಂಶ ಬಂದನಂತರ ದೇವೇಗೌಡ ಅವರು ಪ್ರಮುಖ ಪಾತ್ರ ವಹಿಸಲಿದ್ದಾರೆ. ಈ ಬಾರಿ ಬಿಜೆಪಿ ಸರ್ಕಾರ ರಚನೆ ಮಾಡುವುದಿಲ್ಲ. ಪ್ರಾದೇಶಿಕ ಪಕ್ಷಗಳು ಒಟ್ಟಾಗಿ ಸರ್ಕಾರ ರಚನೆ ಮಾಡುತ್ತವೆ. ಈ ವೇಳೆ ದೇವೇಗೌಡರ ಪಾತ್ರ ಬಹಳ ಪ್ರಮುಖವಾಗಲಿದೆ. ಅವರು ಎಲ್ಲರಿಗೂ ಮಾರ್ಗದರ್ಶನ ನೀಡಲಿದ್ದಾರೆ ಎಂದರು. (ಎನ್.ಬಿ)

Leave a Reply

comments

Related Articles

error: