ಪ್ರಮುಖ ಸುದ್ದಿಮೈಸೂರು

ಗೆಲ್ಲುವು ನನ್ನದೆ : ವಿಶ‍್ವಾಸ ವ್ಯಕ್ತಪಡಿಸಿದ ಸಿ.ಹೆಚ್. ವಿಜಯಶಂಕರ್

ಮತದಾರರನ್ನು ಹಾಗೂ ಚುನಾವಣಾ ಸಿಬ್ಬಂದಿಯನ್ನು ಅಭಿನಂದಿಸಿದರು

ಮೈಸೂರು. ಏ.20 : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಹಿಂದಿಗಿಂತ ಈ ಬಾರಿ ಹೆಚ್ಚು ಮತದಾನವಾಗಿದ್ದು ತಮ್ಮ ಗೆಲುವು ನಿಶ್ಚಿತ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಪ್ರದೇಶಗಳಿಗಿಂತ ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚಿನ ಮತದಾನವಾಗಿದ್ದು, ಇದು ತಮಗೆ ಅನುಕೂಲಕರವಾದ ವಾತಾವರಣವಿರುವುದಕ್ಕೆ ಸಾಕ್ಷಿ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

.ಕಾಂಗ್ರೆಸ್ ಕಾರ್ಯಕರ್ತರ ಜತೆಗೆ, ಜೆಡಿಎಸ್ ಕಾರ್ಯಕರ್ತರು ಮುಖಂಡರು ಕೂಡ ಕೈಜೋಡಿಸಿದ್ದು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ, ಹುಣಸೂರು, ಪಿರಿಯಾಪಟ್ಟಣ್ಣ, ಚಾಮುಂಡೇಶ್ವರಿ, ಎನ್.ಆರ್.ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಹೆಚ್ಚಿನ ಮತಗಳು ಬರಲಿದೆ, ಬಿಜೆಪಿಗೆ ಹೆಚ್ಚು ಅನುಕೂಲಕರ ಎನ್ನುವ ಕೆ.ಆರ್ ಹಾಗೂ ಚಾಮರಾಜ ಕ್ಷೇತ್ರಗಳಲ್ಲಿ ಮತದಾನ ಕುಂಠಿತವಾಗಿರುವುದು ಪಕ್ಷಕ್ಕೆ ಪೂರಕವಾಗಿದೆ ಎಂದರು.

ಕಾಂಗ್ರೆಸ್ ಹಾಗೂ‌ ಜೆಡಿಎಸ್ ಎರಡು ಪಕ್ಷಗಳಲ್ಲಿಯೂ‌ ಹಲವಾರು ಆಕಾಂಕ್ಷಿಗಳಿದ್ದರು ಅಭ್ಯರ್ಥಿ ಘೋಷಣೆ ನಂತರ ಎರಡು ‌ಪಕ್ಷದ ಕಾರ್ಯಕರ್ತರು ಯಾವುದೇ ಬಂಡಾಯವಿಲ್ಲದೆ ಸಹಕರಿಸಿದ್ದು ಅನಗತ್ಯ ಚರ್ಚೆ ಸಂಘರ್ಷಕ್ಕೆ ಎಡೆಯಾಗದೆ ಮುಖಂಡರು ಎಚ್ಚರವಹಿಸಿದ್ದರು.

ಸಾರ್ವಜನಿಕ ಜೀವನದಲ್ಲಿರುವವರು ಆದರ್ಶಪ್ರಾಯರಾಗಿ ಬದ್ಧತೆಬೇಕೆಂದು ಸಂಸದ ಪ್ರತಾಪ್ ಸಿಂಹರಿಗೆ ಟಾಂಗ್ ನೀಡಿ,

ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಿತ ಮತದಾನವಾಗಿದ್ದು. ಈ ನಿಟ್ಟಿನಲ್ಲಿ ಮಾಡಿದ ಮನವಿ ಫಲಿಸಿ ಪ್ರಜಾಪ್ರಭುತ್ವ ಗಟ್ಟಿಯಾಗುತ್ತಿದೆ. ವ್ಯವಸ್ಥಿತವಾಗಿ ಹಾಗೂ ಪಕ್ಷಾತೀತವಾಗಿದ್ದು ಕಾರ್ಯನಿರ್ವಹಿಸಿದ ಆರಕ್ಷಕರು ಇತರೆ ಜಿಲ್ಲೆಗಳಿಗೆ‌ ಮಾದರಿಯಾಗಿದ್ದಾರೆ ಎಂದರು.

ತಮ್ಮ 6ನೇ ಲೋಕಸಭಾ ಚುನಾವಣೆ ಇದಾಗಿದ್ದು, ಗ್ರಾಮೀಣ ಭಾಗದ ಮತದಾರರ ನಾಡಿ ಮಿಡಿತಬಲ್ಲೆ.ಮೇ.23ರಂದು ನಿಶ್ಚಿತ ಶುಭ ಸುದ್ದಿಯೊಂದಿಗೆ ಭೇಟಿ ಮಾಡುವ ಆಶಾಭಾವವವನ್ನು ಅವರು ವ್ಯಕ್ತಪಡಿಸಿದರು . .

ಇಂಕ್ ಗೆ ಮಸಿ ಬಳಿಯುವ ಕೆಲಸ ತರವಲ್ಲ :

ಮೈಲಾಕ್ ಮಾಜಿ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಚುನಾವಣೆಯಲ್ಲಿ ಉಪಯೋಗಿಸುವ ಶಾಯಿ ಶ್ರೇಷ್ಠ ಗುಣಮಟ್ಟ ಕಾಯ್ದುಕೊಂಡಿದೆ. ಅಲ್ಲದೆ ಹಲವು ಪ್ರತಿಷ್ಠಿತ ಪ್ರಯೋಗಾಲಯದಲ್ಲಿ ಪರೀಕ್ಷೆಗಳೊಪಡುತ್ತದೆ. ಗುಣಮಟ್ಟದಲ್ಲಿ ಎಂದಿಗೂ ರಾಜೀ ಮಾಡಿಕೊಂಡಿಲ್ಲ. ಈ ಬಗ್ಗೆ ಗೊಂದಲಬೇಡ, ಸಂಸ್ಥೆಗೆ ಮಸಿ ಬಳಿಯುವ ಕೆಲಸವಾಗುವುದನ್ನು ತಡೆಯಬೇಕು ಎಂದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯ ಕಾರ್ಖಾನೆ. ಸರ್ಕಾರಿ ಸಂಸ್ಥೆಯೊಂದಿಗೆ ಕೈಜೋಡಿಸಿ ಯಶಸ್ವಿಯಾಗಿ ನಷ್ಟವಿಲ್ಲದೆ ನಡೆಯುತ್ತಿರುವ ಸಂಸ್ಥೆ ಇದಾಗಿದೆ ಎಂದು ಸ್ಪಷ್ಟಪಡಿಸಿದರು .

ಮಾಜಿ ಮೇಯರ್ ಆರ್.ಜಿ.ನರಸಿಂಹ ಅಯ್ಯಂಗಾರ್, ರಘು, ಎಂ.ರಮೇಶ್, ಈಶ್ವರ್ ಚಕ್ಕಡಿ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: