ಮೈಸೂರು

ವಿಕಲಚೇತನರ ಸಮಸ್ಯೆ ನಿವಾರಿಸಲು ಸದಾ ಸಿದ್ಧ : ಸೋಮಶೇಖರ್

ಮೈಸೂರಿನ ರೈಲ್ವೇ ಗ್ರೌಂಡ್ ನಲ್ಲಿ  ಅಂತಾರಾಷ್ಟ್ರೀಯ  ಕ್ರೀಡಾ ದಿನಾಚರಣೆಯ ಅಂಗವಾಗಿ ಪರಿವರ್ತನಂ ಟ್ರಸ್ಟ್    ಆಯೋಜಿಸಿದ್ದ   5ದಿನಗಳ ವಿಕಲಚೇತನರ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಕರ್ನಾಟಕ ತಂಡದ ವಿಜಯ್ ಕಾಂತ್ ಟಿವಾರಿಆಂಧ್ರ ಪ್ರದೇಶದ ಶಂಕರ್, ಹಿಮಾಚಲ್ ಪ್ರದೇಶ ಸಂಜಯ್   ತಂಡದ ನಾಯಕರನ್ನು  ಸನ್ಮಾನಿಸಲಾಯಿತು.

 ಶಾಸಕ ಎಂ.ಕೆ ಸೋಮಶೇಖರ್ ಮಾತನಾಡಿ ಪರಿವರ್ತನಂ ಟ್ರಸ್ಟ್ ಪಂಚರಾಜ್ಯಗಳ ಕ್ರಿಕೆಟ್ ಪಂದ್ಯಾವಳಿಯನ್ನು ಮೈಸೂರಿನಲ್ಲಿ ಆಯೋಜಿಸುವ ಮೂಲಕ  ರಾಷ್ಟ್ರಮಟ್ಟದ ವಿಕಲಚೇತನರ ಕ್ರಿಕೆಟ್ ಪಂದ್ಯಾವಳಿ ಸಹಸ್ರಾರು ವಿಕಲಚೇತನರಿಗೆ ಸ್ಪೂರ್ತಿ ನೀಡಿದೆ. ದೈಹಿಕ ಶಕ್ತಿಗಿಂತ ಮಾನಸಿಕ ಶಕ್ತಿ  ಮುಖ್ಯ. ವಿಕಲಚೇತನರು ಕೂಡ ವಿಶ್ವಮಟ್ಟದಲ್ಲಿ ಸಾಧನೆ ಮಾಡಿರುವ ಕ್ರಿಕೆಟಿನಲ್ಲಿ ಬಿ.ಎಸ್ ಚಂದ್ರಶೇಖರ್, ಅರ್ಜುನ ಪ್ರಶಸ್ತಿ ಪಡೆದುಕೊಂಡ  ಎಂ ಮಹದೇವ್, ರೈಲ್ವೆ ಇಲಾಖೆಯ ರಾಮಚಂದ್ರ  ಅವರ ಜೀವನ ಸಾಧನೆಯನ್ನು ಆದರ್ಶವಾಗಿಟ್ಟುಕೊಳ್ಳಬೇಕು ಎಂದು ಹೇಳಿದರು. ವಿಕಲಚೇತನರ ಸಮಸ್ಯೆಗಳಿದ್ದರೆ   ಅವುಗಳನ್ನು ನಿವಾರಿಸುವಲ್ಲಿ ಅವರೊಂದಿಗೆ ನಾವೆಲ್ಲರೂ ಇರುತ್ತೇವೆ ಎಂದು ತಿಳಿಸಿದರು.
 ಬಿಜೆಪಿ ನಗರಾಧ್ಯಕ್ಷ ಡಾ.ಮಂಜುನಾಥ್ ಮಾತನಾಡಿ  ಇಂತಹ  ಪ್ರತಿಭಾನ್ವಿತ ವಿಕಲಚೇತನ ಕ್ರೀಡಾ ಸ್ಫರ್ಧಿಗಳಿಗೆ ಅನುಕಂಪಕ್ಕಿಂತ ಅವರ ಪ್ರತಿಭೆಗೆ ಅನುಗುಣವಾಗಿ ಖಾಸಗಿ ಕ್ಷೇತ್ರಗಳಲ್ಲಿ ಸಾಮಾಜಿಕ ಕಳಕಳಿಯಿಂದ ಖಾಸಗಿ ಕಂಪನಿಗಳು ಉದ್ಯೋಗದ ಅವಕಾಶ ನೀಡಲು ಮುಂದಾಗಬೇಕೆಂದು ಕರೆ ನೀಡಿದರು, ಇದು ಕೇವಲ ಪಂದ್ಯಾವಳಿಯಾಗಿಲ್ಲ  ಸಮ್ಮಿಲನದ ಕಾರ್ಯಕ್ರಮವಾಗಿದ್ದು ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಉದ್ಯಮಿ ಡಿಟಿ ಪ್ರಕಾಶ್, ಪರಿವರ್ತನಂ ಟ್ರಸ್ಟ್ ಅಧ್ಯಕ್ಷ ವಿನಯ್ ಕಣಗಾಲ್, ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಕರ್ನಾಟಕ ವಿಕಲಚೇತನ ಕ್ರಕೆಟ್ ಅಸೋಸಿಯೆಷನ್ ಅಧ್ಯಕ್ಷ ಶ್ರೀಧರ್, ರಾಮಚಂದ್ರ ಕಡಕೊಳ ಜಗದೀಶ್  ಭಾಗವಹಿಸಿದ್ದರು.

Leave a Reply

comments

Related Articles

error: