ಕರ್ನಾಟಕಪ್ರಮುಖ ಸುದ್ದಿ

ದೇವೇಗೌಡರು ಯಡಿಯೂರಪ್ಪರಂತೆ ಹುದ್ದೆಯ ಕನಸು ಕಾಣುವವರಲ್ಲ: ಸಿ.ಎಂ ಕುಮಾರಸ್ವಾಮಿ

ವಿಜಯಪುರ (ಏ.20): ದೇವೇಗೌಡರು ಯಡಿಯೂರಪ್ಪ ಅವರಂತೆ ಕನಸು ಕಾಣುವವರಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ. ಏಳು ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಮತ್ತೆ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿಕೆಗೆ ಟಾಂಗ್ ನೀಡಿದರು.

ಮುಖ್ಯಮಂತ್ರಿ ಆಗುವುದಾಗಿ ಯಡಿಯೂರಪ್ಪ ನವರು ಪದೇ ಪದೇ ಕನಸು ಕಾಣುತ್ತಿದ್ದಾರೆ. ದೇವೇಗೌಡರು ಯಡಿಯೂರಪ್ಪ ಅವರಂತೆ ಕನಸು ಕಾಣುತ್ತಿಲ್ಲ. ಮತ್ತೆ ಪ್ರಧಾನಿಯಾಗುವುದಾಗಿ ಎಲ್ಲಿಯೂ ಹೇಳಿಕೆ ನೀಡಿಲ್ಲ ಎಂದು ಯಡಿಯೂರಪ್ಪ ವಿರುದ್ಧ ಹರಿಹಾಯ್ದರು. ಚುನಾವಣೆ ಬಳಿಕ ಎನ್.ಡಿ.ಎ, ಯುಪಿಎ ಹೊರತಾಗಿ ಮೈತ್ರಿಪಕ್ಷ ಅಸ್ತಿತ್ವಕ್ಕೆ ಬರಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕೂಸು ಹುಟ್ಟುವ ಮುಂಚೆ ಕುಲಾಯಿ ಯಾಕೆ ಹೊಲಿಸಬೇಕು? ಎಂದು ಪ್ರಶ್ನಿಸಿದರು. (ಎನ್.ಬಿ)

Leave a Reply

comments

Related Articles

error: