ಮೈಸೂರು

ನಡೆದಾಡುವ ದೇವರು ಸಿದ್ಧಗಂಗಾ ‘ಶಿವಕುಮಾರ ಸ್ವಾಮೀಜಿಗಳ’ ನುಡಿ ನಮನ ನಾಳೆ

ಮೈಸೂರು,ಏ.20 : ಶ್ರೀ ಶಿವರಾತ್ರೀಶ್ವರ ಅಕ್ಕನ ಬಳಗ, ಶಿವಶ್ರೀ ವಿದ್ಯಾರ್ಥಿನಿ ನಿಲಯ, ಅಕ್ಕನ ಬಳಗ ಸಂಯುಕ್ತಾಶ್ರಯದಲ್ಲಿ ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಶತಾಯುಷಿ ದಿ. ಡಾ.ಶ್ರೀ ಶಿವಕುಮಾರಸ್ವಾಮಿಜೀಯವರ ನುಡಿ ನಮನವನ್ನು ಏ.21ರ ಸಂಜೆ 4 ಗಂಟೆಗೆ ತ್ಯಾಗರಾಜ ರಸ್ತೆಯ ಅಕ್ಕನ ಬಳಗದಲ್ಲಿ ಏರ್ಪಡಿಸಲಾಗಿದೆ.

ನೀಲಕಂಠಸ್ವಾಮಿ ಮಠದ ಶ್ರೀ ಸಿದ್ಧಮಲ್ಲಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಮೈವಿವಿಯ ಪ್ರಾಚ್ಯವಿದ್ಯಾ ಸಂಶೋಧನಾಲಯ ನಿರ್ದೇಶಕರಾದ ಡಾ.ಎಸ್.ಶಿವರಾಜಪ್ಪ ನುಡಿನಮನ ಸಲ್ಲಿಸಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: