
ಪ್ರಮುಖ ಸುದ್ದಿ
ಏ.26, 27 ರಂದು ಚೆರಿಯಪರಂಬು ಹಿಫ್ಲುಲ್ ಖುರ್ಆನ್ ಸನದುದಾನ ಮಹಾಸಮ್ಮೇಳನ
ರಾಜ್ಯ(ಮಡಿಕೇರಿ) ಏ. 21 : – ಚೆರಿಯಪರಂಬುವಿನ ನುಸ್ರತುಲ್ ಅನಾಂ ಹಿಫ್ಲುಲ್ ಖುರ್ಆನ್ ಕಾಲೇಜಿನ 5ನೇ ಸ್ವಲಾತ್ ವಾರ್ಷಿಕ ಹಾಗೂ ಹಿಫ್ಲುಲ್ ಖುರ್ಆನ್ ಸನದುದಾನ ಮಹಾಸಮ್ಮೇಳನವು ಏ. 26 ಮತ್ತು 27 ರಂದು ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಪ್ರಮುಖರು ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ಜುಮಾ ಮಸ್ಸಿದ್ ಅದೀನ ಸಂಸ್ಥೆಯಾದ ನುಸ್ರತುಲ್ ಅನಾಂ ರಿಲೀಫ್ ಸಮಿತಿ ಹಿಫ್ಲುಲ್ ಖುರ್ಆನ್ ಕಾಲೇಜಿನ ಸಾನಿದ್ಯದಲ್ಲಿ ಕಾರ್ಯಚರಿಸುತ್ತಿರುವ ಸಂಸ್ಥೆಯ 4 ವಿಧ್ಯಾರ್ಥಿಗಳು ಖುರ್ಆನ್ ಕಂಠಪಾಠ ಮಾಡಿದ್ದು, ಆ ವಿದ್ಯಾರ್ಥಿಗಳಿಗೆ ಸನದುದಾನ ನೀಡಿ ಗೌರವಿಸುವ ಸಲುವಾಗಿ ಸನದುಧಾನ ಮಹಾ ಸಮ್ಮೆಳನ ಹಾಗೂ ಸ್ವಲಾತ್ ವಾರ್ಷಿಕ ಕಾರ್ಯಕ್ರವನ್ನು ಏ. 26, 27 ರಂದು ಹಲವಾರು ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಪ್ರಯುಕ್ತ ಏ. 26 ರಂದು ಜುಮಾ ನಮಾಜಿನ ಬಳಿಕ ಚೆರಿಯಪರಂಬು ಮಖಾಂ ವಠಾರದಲ್ಲಿ ಧ್ವಜಾರೋಹಣ ಹಾಗೂ ಖಬರ್ ಝಿಯಾರತ್ ನಡೆಯಲಿದ್ದು, ಮಧ್ಯಾಹ್ನ 2.30ಕ್ಕೆ ಕೇರಳದ ಪ್ರಖ್ಯಾತ ವಾಗ್ಮಿ ಡಾ. ಅಬ್ದುಸ್ಸಲಾಂ ಓಮಶೈರಿ ಅವರ ನೇತ್ರತ್ವದಲ್ಲಿ ಕುಟುಂಬ ಸಮ್ಮಿಲನ ನಡೆಯಲಿದೆ.
ಅಂದು ರಾತ್ರಿ 7 ಗಂಟೆಗೆ ಕಾಸರಗೋಡಿನ ಪ್ರಖ್ಯಾತ ವಾಗ್ಮಿ ಹನೀಫ್ ನಿಝಾಮಿ ಅವರು ಧಾರ್ಮಿಕ ಉಪನ್ಯಾಸ ನೀಡಲಿದ್ದು, ವೇದಿಕೆಯಲ್ಲಿ ಹಲವಾರು ಉಲಾಮ ಉಮರಾಗಳು ಭಾಗವಹಿಸಲಿದ್ದಾರೆ.
ಏ. 27 ರಂದು ಬೆಳಗ್ಗೆ 9 ಗಂಟೆಗೆ ಮಡಿಕೇರಿಯ ಜಿಲ್ಲಾ ಆರೋಗ್ಯ ಕೇಂದ್ರದಲ್ಲಿ ಒಳರೋಗಿಗಳ ಸಂದರ್ಶನ ಹಾಗೂ ಹಣ್ಣು ಹಂಪಲು ವಿತಣೆ ಕಾರ್ಯಕ್ರಮ ನಡೆಯಲಿದೆ.
ಸಂಜೆ 4 ಗಂಟೆಗೆ ಖುರ್ಹಾನ್ ಕಂಠಪಾಠ ಮಾಡಿದ ವಿದ್ಯಾರ್ಥಿಗಳಿಗೆ ಪದವಿ ವಸ್ತ್ರ ವಿತರಣೆ ಹಾಗೂ ಖತ್ಮುಲ್ ಖುರ್ಆನ್ ಕಾರ್ಯಕ್ರಮ ನಡೆಯಲಿದೆ.
ರಾತ್ರಿ 7 ಗಂಟೆಗೆ ಚೆರಿಯಪರಂಬು ಮಖಾಂ ವಠಾರದಲ್ಲಿ ಸನದುಧಾನ ಮಹಾ ಸಮ್ಮೇಳನ ಹಾಗೂ ಸ್ವಲಾತ್ ವಾರ್ಷಿಕ ಹಾಗೂ ಊರಿನ ಉರುದು ದಾನಿಗಳ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದ ನೇತೃತ್ವವನ್ನು ಅಸ್ಸಯ್ಯಿದ್ ಝೈನುದ್ದೀನ್ ಅಲ್ಬುಖಾರಿ ಕೂರಿಕುಝಿ ವಹಿಸಲಿದ್ದಾರೆ.
ವೇದಿಕೆಯಲ್ಲಿ ಶಹೀದುದ್ದೀನ್ ಅಲ್ಬುಖಾರಿ ಮರ್ಕಝ ಸ್ಸಆದಃ ಶಿವಮೊಗ್ಗ, ಅಸ್ಸಯ್ಯಿದ್ ಇಲ್ಯಾಸ್ ಅಲ್ ಹೈದ್ರೋಸಿ ಎಮ್ಮೆಮಾಡು, ಮಹ್ಮೂದ್ ಮುಸ್ಲಿಯಾರ್ ಎಡಪ್ಪಾಲ, ಹಾಫಿಲ್ ಅಬ್ದುಸ್ಸಲಾಂ ನಿಝಾಮಿ ಪುತ್ತೂರು, ಮುನೀರ್ ಮಹ್ಲರಿ ಚೆರಿಯಪರಂಬು, ಬಸೀರ್ ಚೆರಿಯಪರಂಬು ಹಾಗೂ ಹಲವಾರು ಉಲಮಾ, ಉಮರಾ ಸಾದಾತುಗಳು ಉಪಸ್ಥಿತರಿರುವರು ಎಂದು ಪ್ರಮುಖರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಪಿ.ಹೆಚ್.ಬಶೀರ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್, ಉಸ್ತಾದ್ ಅಬ್ದುಲ್ ಮಜೀದ್, ಜುಬೈರ್, ಹಸೈನಾರ್ ಹಾಜಿ ಹಾಗೂ ಹನೀಫ್ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)