ಮೈಸೂರು

ಆಸ್ತಿ ತೆರಿಗೆ ಅವೈಜ್ಞಾನಿಕ ಪಾಲಿಕೆ ಸಭೆಯಲ್ಲಿ ಸದಸ್ಯರ ವಿರೋಧ

 

ಮೈಸೂರು ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಣದಲ್ಲಿ ಮಂಗಳವಾರ ನಡೆದ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಏಪ್ರಿಲ್ ಒಂದರಿಂದ ಆಸ್ತಿ ತೆರಿಗೆಯನ್ನು ರಾಜ್ಯ ಸರ್ಕಾರ ಸುತ್ತೋಲೆ ಮೇರೆಗೆ ಶೇ.15 ರಿಂದ 30ರಷ್ಟು ಹೆಚ್ಚಿಸುವುದಕ್ಕೆ ಮುಂದಾಗಿ ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿ ಕೌನ್ಸಿಲ್ ತೀರ್ಮಾನಕ್ಕೆ ಮಂಡಿಸಿತು.

ಆಸ್ತಿ ತೆರಿಗೆ ಅವೈಜ್ಞಾನಿಕವಾಗಿದ್ದು, ನಾಗರೀಕರಿಗೆ ಹೊರೆಯಾಗಲಿದೆ ಎಂದು ಕಾಂಗ್ರೆಸ್ ಪಕ್ಷದ ಸದಸ್ಯರು ವಿರೋದ ವ್ಯಕ್ತಪಡಿಸಿದರು, ಇದಕ್ಕೆ ದನಿಗೂಡಿಸಿದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಹಣಕಾಸು ಮತ್ತು ಅಪೀಲು ತೆರಿಗೆ ಸ್ಥಾಯಿ ಸಮಿತಿಯು ನಗರದ ನಾಗರೀಕರಿಗೆ ಹೆಚ್ಚಿನ ತೆರಿಗೆ ಹೊರೆಯನ್ನು ಹೇರುವುದಕ್ಕೆ ಮುಂದಾಗಿದೆ, ತೆರಿಗೆ ಹೆಚ್ಚಿಸುವುದಕ್ಕೆ ಸದಸ್ಯರ ವಿರೋಧವಿಲ್ಲ ಆದರೇ ತೆರಿಗೆ ಹೆಚ್ಚಳದ ನೆಪದಲ್ಲಿ ಹೋರೆಯಾಗುವುಕ್ಕೆ ಅವಕಾಶ ಮಾಡಿಕೊಡಬಾರದು, ಇದರಿಂದ ಜನರಿಗೆ ತೊಂದರೆಯಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲರ ಚರ್ಚೆಯನ್ನು ಆಲಿಸಿದ ಮೇಯರ್ ರವಿಕುಮಾರ್ ತೆರಿಗೆ ಹೆಚ್ಚಳದ ಕುರಿತು ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿ ಮರು ಪರಿಶೀಲನೆ ನಡೆಸಬೇಕೆಂದು ನಿರ್ಣಯ ಪ್ರಕಟಿಸಿದರು.

ಸಭೆಯಲ್ಲಿ ಉಪಮೇಯರ್ ರತ್ನಲಕ್ಷ್ಮಣ್, ಪಾಲಿಕೆಯ ಆಯುಕ್ತ ಜೆ.ಜಗದೀಶ್, ಸರ್ವ ಸದಸ್ಯರು ಉಪಸ್ಥಿತರಿದ್ದರು

Leave a Reply

comments

Related Articles

error: