ಮೈಸೂರು

ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿದ ಮನಪಾ ಅಭಯ ವಾಹನ ಚಾಲಕ : ದೇವಸ್ಥಾನದ ಕಾಂಪೌಂಡ್ ಕುಸಿತ

ಮೈಸೂರು,ಏ.22:-  ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿದ ಪರಿಣಾಮ ವಾಹನ ಚಾಲಕನ ನಿಯಂತ್ರಣ ತಪ್ಪಿ ದೇವಸ್ಥಾನದ ಕಾಂಪೌಂಡ್ ಮುರಿದು ಬಿದ್ದ ಘಟನೆ ಗಾಯತ್ರೀಪುರಂನಲ್ಲಿ ನಡೆದಿದೆ.

ಗಾಯತ್ರೀಪುರಂನಲ್ಲಿರುವ ಪಟ್ಟಲದಮ್ಮನ ದೇವಸ್ಥಾನದ ಬಳಿ ಮಹಾನಗರ ಪಾಲಿಕೆಗೆ ಸೇರಿದ ಅಭಯ ವಾಹನ ಚಾಲಕ ನಿನ್ನೆ ರಾತ್ರಿ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುತ್ತಿದ್ದ. ಈ ವೇಳೆ ವಾಹನ ಚಾಲಕನ ನಿಯಂತ್ರಣ ತಪ್ಪಿದ  ಪರಿಣಾಮ   ದೇವಸ್ಥಾನದ ಕಂಪೌಂಡ್ ಗೆ ಗುದ್ದಿದ್ದು, ಇದರಿಂದ ಕಾಂಪೌಂಡ್ ಮುರಿದು ಬಿದ್ದಿದೆಯಲ್ಲದೇ ಹಾನಿಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ವಾಹನದ ಮುಂಭಾಗ ಕೂಡ ಜಖಂ ಆಗಿದೆ. ಈ ಕುರಿತು ಎನ್.ಆರ್.ಸಂಚಾರಿ ಠಾಣೆಗೆ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೇ ಮಹಾನಗರ ಪಾಲಿಕೆಯ ಆಯುಕ್ತರಿಗೂ ದೂರು ನೀಡಿದ್ದು,ಆಯುಕ್ತರು ಅಭಯ ವಾಹನ ಚಾಲಕನ ಮೇಲೆ ಯಾವ ಕ್ರಮ ಕೈಗೊಳ್ಳುತ್ತಾರೆಂಬುದನ್ನು ಕಾದು ನೋಡಬೇಕಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: