ಮನರಂಜನೆ

ವಿಜಯ್ ದೇವರಕೊಂಡ ಜೊತೆ ಅಭಿನಯಿಸಲಿದ್ದಾರೆ ನಟ ದಿಗಂತ್

ಬೆಂಗಳೂರು,ಏ.22-ದೂದ್ ಪೇಡ ಖ್ಯಾತಿಯ ನಟ ದಿಗಂತ್ ಟಾಲಿವುಡ್ ಗೆ ಮತ್ತೆ ಟಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ದಿಗಂತ್ ನಟ ವಿಜಯ್ ದೇವರಕೊಂಡ ಅವರ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ.

ವಿಜಯ್ ದೇವರಕೊಂಡ ಅಭಿನಯದ ‘ಹೀರೋ’ ಸಿನಿಮಾದಲ್ಲಿ ನಟ ದಿಗಂತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. `ಹೀರೋ’ ಸಿನಿಮಾ ಕ್ರೀಡಾಧಾರತ ಸಿನಿಮಾವಾಗಿದೆಯಂತೆ. ಈ ಚಿತ್ರದಲ್ಲಿ ವಿಜಯ್ ವೃತ್ತಿಪರ ಬೈಕ್ ರೇಸರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಪಾತ್ರಕ್ಕಾಗಿ ವಿಜಯ್ ಈಗಾಗಲೇ ತಯಾರಿ ಶುರು ಮಾಡಿಕೊಂಡಿದ್ದಾರೆ.

ದಿಗಂತ್ ಪಾತ್ರ ಹೇಗಿರಲಿದೆ ಎನ್ನುವುದು ಇನ್ನು ಬಹಿರಂಗ ಆಗಿಲ್ಲ. ಆದರೆ ದಿಗಂತ್ ಹಾಗೆ ಬಂದು ಹೀಗೆ ಹೋಗುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ವಿಜಯ್ ಜೊತೆ ಪ್ರಮುಖ ಪಾತ್ರದಲ್ಲಿ ದೂದ್ ಪೇಡ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ದಿಗಂತ್ ಮತ್ತು ವಿಜಯ್ ಒಟ್ಟಿಗೆ ಮೊದಲ ಬಾರಿಗೆ ಅಭಿನಯಿಸುತ್ತರುವ ‘ಹೀರೋ’ ಸಿನಿಮಾ ನಾಲ್ಕು ಭಾಷೆಯಲ್ಲಿ ತೆರೆಗೆ ಬರಲಿದೆಯಂತೆ. ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಯಲ್ಲೂ ತೆರೆಗೆ ಬರಲಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ‘ಕಾಕ ಮುಟೈ’ ಚಿತ್ರಕ್ಕೆ ಸಂಭಾಷಣೆ ಬರೆದಿದ್ದ ಆನಂದ್ ಅಣ್ಣಾಮಲೈ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾ. ಚಿತ್ರದಲ್ಲಿ ಶಾಲಿನಿ ಪಾಂಡೆ ಹಾಗೂ ಮಾಳವಿಕಾ ಮೋಹನ್ ಇಬ್ಬರು ನಾಯಕಿಯರು ಕಾಣಿಸಿಕೊಳ್ಳುತ್ತಿದ್ದಾರೆ.

ಈ ಮೊದಲು ‘ಮುಂಗಾರುಮಳೆ’ ತೆಲುಗು ರೀಮೇಕ್ ‘ವಾನ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದ ದಿಗಂತ್ ಅನೇಕ ವರ್ಷಗಳ ಬಳಿಕ ‘ಹೀರೋ’ ಚಿತ್ರದ ಮೂಲಕ ಮತ್ತೆ ಟಾಲಿವುಡ್ ನಲ್ಲಿ ಮಿಂಚಲು ಸಜ್ಜಾಗಿದ್ದಾರೆ.

ದಿಗಂತ್ ಇತ್ತೀಚಿಗಷ್ಟೆ ‘ಹುಟ್ಟುಹಬ್ಬದ ಶುಭಾಶಯಗಳು’ ಚಿತ್ರವನ್ನು ಒಪ್ಪಿಕೊಂಡಿದ್ದರು. ಈ ಚಿತ್ರಕ್ಕೆ ಯುವ ನಿರ್ದೇಶಕ ನಾಗರಾಜ್ ಬೇತೂರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಟೈಟಲ್ ಬಿಡುಗಡೆ ಮಾಡಿರುವ ಚಿತ್ರತಂಡ ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭಿಸಲಿದೆ. ಇದರ ಜೊತೆಗೀಗ ದಿಗಂತ್ ವಿಜಯ್ ದೇವರಕೊಂಡ ಜೊತೆ ‘ಹೀರೋ’ ಸಿನಿಮಾ ಚಿತ್ರೀಕರಣದಲ್ಲೂ ಭಾಗಿಯಾಗಲಿದ್ದಾರೆ. (ಎಂ.ಎನ್)

Leave a Reply

comments

Related Articles

error: