ಪ್ರಮುಖ ಸುದ್ದಿವಿದೇಶ

ಶ್ರೀಲಂಕಾ ಸರಣಿ ಸ್ಪೋಟದಲ್ಲಿ ಸ್ವಲ್ಪದರಲ್ಲೇ ಪಾರಾದ ನಟಿ ರಾಧಿಕಾ ಶರತ್ ಕುಮಾರ್

ಕೊಲಂಬೊ (ಏ.22): ಮೂನ್ನೂರಕ್ಕೂ ಹೆಚ್ಚು ಜನರು ಬಲಿಯಾದ ಶ್ರೀಲಂಕಾದ ಸರಣಿ ಬಾಂಬ್ ಸ್ಫೋಟದಲ್ಲಿ ಬಹುಭಾಷಾ ನಟಿ ರಾಧಿಕಾ ಶರತ್‍ಕುಮಾರ್ ಅವರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ಸಿನ್ನಾಮಾನ್ ಗ್ರಾಂಡ್ ಹೋಟೆಲ್‍ನಲ್ಲಿದ್ದ ನಟಿ ರಾಧಿಕಾ ಶರತ್ ಕುಮಾರ್ ಅವರು ಬಾಂಬ್ ಸ್ಫೋಟ ಸಂಭವಿಸುವ ಕೆಲವೇ ನಿಮಿಷಗಳಿಗೆ ಮುಂಚೆ ಹೋಟೆಲ್‍ನಿಂದ ಹೊರಗೆ ಬಂದಿದ್ದ ಕಾರಣ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ಹೇಳಿದ್ದಾರೆ.

ಹೋಟೆಲ್‍ನಿಂದ ನಿರ್ಗಮಿಸಿದ ಕೆಲ ಹೊತ್ತಿನಲ್ಲಿ ಬಾಂಬ್ ಸ್ಫೋಟದ ಸುದ್ದಿ ಕೇಳಿ ಶಾಕ್ ಆಯ್ತು. ದೇವರ ದಯೆಯಿಂದ ನಾವೆಲ್ಲಾ ಅಪಾಯದಿಂದ ಪಾರಾಗಿರುವುದಾಗಿ ರಾಧಿಕಾ ಶರತ್ ಕುಮಾರ್ ಟ್ವೀಟ್ ಮಾಡಿದ್ದಾರೆ. ಐದು ಚರ್ಚ್, ಮೂರು ಪಂಚತಾರಾ ಹೋಟೆಲ್‍ಗಳ ಮೇಲೆ ಏಕಕಾಲದಲ್ಲಿ ನಡೆದ ಬಾಂಬ್ ಸ್ಫೋಟದಿಂದಾಗಿ 300ಕ್ಕೂ ಹೆಚ್ಚು ಜನರು ಮೃತಟ್ಟು , 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಮೃತಪಟ್ಟವರಲ್ಲಿ ಐವರು ಭಾರತೀಯರು ಸೇರಿದ್ದಾರೆ. ಈಸ್ಟರ್ ದಿನವಾದ ಬೆಳಗ್ಗೆ 8-45ರ ಸುಮಾರಿನಲ್ಲಿ ಚರ್ಚ್‍ಗಳಲ್ಲಿ ಸಾಮೂಹಿಕ ಪಾರ್ಥನೆ ನಡೆಯುತ್ತಿದ್ದ ವೇಳೆಯಲ್ಲಿ ಶ್ರೀಲಂಕಾದ ಹಲವು ಕಡೆಗಳಲ್ಲಿ ಏಕಕಾಲದಲ್ಲಿ ಬಾಂಬ್ ಸ್ಫೋಟಗಳು ನಡೆದು ಅಪಾರ ಸಾವು-ನೋವು ಸಂಭವಿಸಿದೆ ಎಂದು ಪೊಲೀಸ್ ವಕ್ತಾರ ರುವಾನ್ ಗುಣಶೇಖರಾ ಹೇಳಿದ್ದಾರೆ. (ಎನ್.ಬಿ)

Leave a Reply

comments

Related Articles

error: