ಪ್ರಮುಖ ಸುದ್ದಿಮನರಂಜನೆ

ಬಿಜೆಪಿ ಸೇರಲಿದ್ದಾರಾ ಬಾಲಿವುಡ್ ನಟ ಸನಿ ಡಿಯೋಲ್ ?

ದೇಶ(ನವದೆಹಲಿ)ಏ.22:- ದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ನಡುವೆಯೇ ಬಾಲಿವುಡ್ ನಲ್ಲಿ ಯಾರಾದರೊಬ್ಬರು ರಾಜಕೀಯ ಪ್ರವೇಶಿಸುವ ಕುರಿತು ಸುದ್ದಿಗಳು ಬರುತ್ತಲೇ ಇರುತ್ತವೆ.

ನಟಿ ಊರ್ಮಿಳಾ ಮಾತೊಂಡ್ಕರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕಳೆದ ಕೆಲವು ದಿನಗಳಿಂದ ಬಾಲಿವುಡ್ ನಟ ಸನಿ ಡಿಯೋಲ್ ರಾಜಕೀಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ತನ್ನ ತಂದೆ, ನಟ ಧರ್ಮೇಂದ್ರ ಮತ್ತು ಮಲತಾಯಿ ನಟಿ ಹೇಮಾಮಾಲಿನಿಯವರಂತೆ ಬಿಜೆಪಿ ಜೊತೆ ಕೈಜೋಡಿಸಬಹುದೆನ್ನುವ ಮಾತುಗಳು ಕೇಳಿ ಬರುತ್ತಿವೆ. ಕಳೆದ ಕೆಲವು ದಿನಗಳಿಂದ ಸನಿ ಡಿಯೋಲ್ ಅವರ ಒಂದು ಫೋಟೋ ಸಾಕಷ್ಟು ವೈರಲ್ ಆಗಿದೆ. ಅದರಲ್ಲಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಜೊತೆ ಕುಳಿತಿರುವುದು ಕಂಡು ಬರುತ್ತಿದೆ. ಆದರೆ ಇದುವರೆಗೂ ಈ ಭೇಟಿಯ ಕುರಿತ ನಿಖರ ಮಾಹಿತಿ ಲಭ್ಯವಾಗಿಲ್ಲ. ಪುಣೆ ಏರ್ ಪೋರ್ಟ್ ನಲ್ಲಿ ಭೇಟಿಯಾಗಿದ್ದು ಎಂದು ಹೇಳಲಾಗುತ್ತಿದೆ. ಬಿಜೆಪಿ ಸನಿ ಡಿಯೋಲ್ ಅವರನ್ನು ಪಂಜಾಬ್ ನ 13 ಲೋಕಸಭಾ ಕ್ಷೇತ್ರಗಳಲ್ಲಿ ಒಂದಾದ ಗುರದಾಸಪುರ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಸಿದ್ಧತೆ ನಡೆಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. (ಎಸ್.ಎಚ್)

Leave a Reply

comments

Related Articles

error: