ಪ್ರಮುಖ ಸುದ್ದಿವಿದೇಶ

ಲಂಕಾದಲ್ಲಿ ಮತ್ತೆ 87 ಬಾಂಬ್ ಡಿಟೋನೇಟರ್ಸ್ ಪತ್ತೆ! ಭಾರೀ ಅನಾಹುತ ತಪ್ಪಿಸಿದ ಪೊಲೀಸರು!

ಕೊಲಂಬೋ (ಏ.22): ಶ್ರೀಲಂಕಾದಲ್ಲಿ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬೆಂಗಳೂರಿನ ಐವರು ಸೇರಿದಂತೆ ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 290ಕ್ಕೆ ಏರಿದ್ದು, 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಏತನ್ಮಧ್ಯೆ ಶ್ರೀಲಂಕಾ ಪೊಲೀಸರು ಕೊಲಂಬೋ ಮುಖ್ಯ ಬಸ್ ನಿಲ್ದಾಣದಲ್ಲಿ ಮತ್ತೆ ಸುಮಾರು 87 ಬಾಂಬ್ ಡಿಟೋನೇಟರ್ಸ್ ಗಳನ್ನು ಪತ್ತೆ ಹಚ್ಚಿರುವುದಾಗಿ ರಾಯಟರ್ಸ್ ವರದಿ ಮಾಡಿದೆ.

ಈಸ್ಟರ್ ದಿನವಾದ ಭಾನುವಾರದಂದು ಶ್ರೀಲಂಕಾದ ಚರ್ಚ್ ಹಾಗೂ ಐಶಾರಾಮಿ ಹೋಟೆಲ್ ಗಳಲ್ಲಿ ಸಂಭವಿಸಿದ್ದ ಸರಣಿ ಆತ್ಮಹತ್ಯಾ ಬಾಂಬ್ ದಾಳಿ ಘಟನೆಯ ರೂವಾರಿಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಂಪರ್ಕ ಇದೆಯಾ ಎಂಬುದನ್ನು ಪತ್ತೆ ಹಚ್ಚಲು ವಿದೇಶದ ನೆರವು ಅಗತ್ಯ ಎಂದು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲಾ ಸಿರಿಸೇನಾ ಮನವಿ ಮಾಡಿಕೊಂಡಿದ್ದಾರೆ.

ಬಸ್ ನಿಲ್ದಾಣದಲ್ಲಿ 87 ಬಾಂಬ್ ಡಿಟೋನೇಟರ್ಸ್ ಗಳನ್ನು ಪತ್ತೆ ಹಚ್ಚುವ ಮೂಲಕ ಭಾರೀ ಅನಾಹುತವನ್ನು ತಪ್ಪಿಸಿದಂತಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ. ಸರಣಿ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಸ್ಥಳೀಯ ಭಯೋತ್ಪಾದಕರ ಹಿಂದೆ ವಿದೇಶಿ ಭಯೋತ್ಪಾದಕ ಸಂಘಟನೆಗಳ ಕೈವಾಡ ಇದ್ದಿರುವುದಾಗಿ ಶ್ರೀಲಂಕಾ ಗುಪ್ತಚರ ಇಲಾಖೆ ವರದಿ ಶಂಕಿಸಿದೆ. ಈ ನಿಟ್ಟಿನಲ್ಲಿ ಉಗ್ರರ ಜಾಡು ಪತ್ತೆ ಹಚ್ಚಲು ವಿದೇಶಗಳ ನೆರವು ಅಗತ್ಯ ಎಂದು ಸಿರಿಸೇನಾ ಮನವಿ ಮಾಡಿಕೊಂಡಿದ್ದಾರೆ. (ಎನ್.ಬಿ)

Leave a Reply

comments

Related Articles

error: