
ಮೈಸೂರು
ಮಾಧ್ಯಮಗಳು ಸಂಗೀತ, ನೃತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಿ : ಡಾ.ಸರ್ವಮಂಗಳಾಶಂಕರ್
ಮಾಧ್ಯಮಗಳು ಸಿನಿಮಾ ಸಂಗೀತಕ್ಕೆ ನೀಡುವ ಪ್ರಚಾರ, ಪ್ರೋತ್ಸಾಹಕ್ಕಿಂತ ಶಾಸ್ತ್ರೀಯ, ಸಂಗೀತ, ನೃತ್ಯ ನಾಟಕಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಸರ್ವಮಂಗಳ ಶಂಕರ್ ತಿಳಿಸಿದರು.
ಮೈಸೂರಿನ ಕಲಾಮಂದಿರದಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರ ಬೆಂಗಳೂರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಸ್ವರ ಶತಕ ಭಾರತರತ್ನ ಡಾ.ಎಂ.ಎಸ್.ಸುಬ್ಬುಲಕ್ಷ್ಮಿ ಶತಮಾನೋತ್ಸವ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಸರಣಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಎಂ.ಎಸ್.ಸುಬ್ಬುಲಕ್ಷ್ಮಿ ಅವರು ಸ್ವರದ ಮೂಲಕ ಜಗತ್ತನ್ನು ಸೆರೆಹಿಡಿದಂಥಹ ಜ್ಞಾನಿ. ಅವರು ಪ್ರಬುದ್ಧತೆಯ ಗಾಯಕಿಯಾಗಿದ್ದರು. ಅವರ ಗಾಯನ ಪ್ರಕೃತಿಯ ಕೊಡುಗೆಯಾಗಿತ್ತು. ಅವರ ಉಚ್ಛಾರವೂ ಸ್ಫೂಟವಾಗಿತ್ತು ಎಂದು ಬಣ್ಣಿಸಿದರು. ಇಂದಿನ ವಿದ್ಯಾರ್ಥಿಗಳಲ್ಲಿ ಸಂಗೀತದ ಕುರಿತು ಒಲವು ಮತ್ತು ಅರಿವನ್ನು ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಚೆನ್ನಪ್ಪ,ಐಜಿಎನ್ ಸಿಎ ಎಸ್ ಆರ್ ಸಿ ಕಾರ್ಯನಿರ್ವಾಹಕ ನಿರ್ದೇಶಕಿ ಡಾ.ದೀಪ್ತಿ ನವರತ್ನ ಮತ್ತಿತರರು ಉಪಸ್ಥಿತರಿದ್ದರು.