ಮೈಸೂರು

ಕುಕ್ಕರಹಳ್ಳಿ ಕೆರೆ ಏರಿಯ ಮೇಲಿನ ಪಾದಚಾರಿ ರಸ್ತೆಯಲ್ಲಿ ಬಿರುಕು : ವಾಯುವಿಹಾರಿಗಳಲ್ಲಿ ಆತಂಕ

ಮೈಸೂರು,ಏ.23:- ಮೈಸೂರಿನ ಪ್ರಸಿದ್ಧ ಕುಕ್ಕರಹಳ್ಳಿ ಕೆರೆ ಏರಿಯ ಮೇಲಿನ ಪಾದಚಾರಿ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ವಾಯುವಿಹಾರಿಗಳಲ್ಲಿ ಆತಂಕ ಮೂಡಿಸಿದೆ.

ರಾತ್ರಿ ಸುರಿದ ಮಳೆಯಿಂದಾಗಿ ಪಾದಚಾರಿ ರಸ್ತೆಯಲ್ಲಿ   ಬಿರುಕು ಕಾಣಿಸಿಕೊಂಡಿದ್ದು, ಕುಕ್ಕರಹಳ್ಳಿ ಕೆರೆಯ ಗೌರ್ನಮೆಂಟ್ ಪ್ರೆಸ್ ಎದುರಿನ ಬೋಟಿಂಗ್ ಪಾಯಿಂಟ್ ಸಮೀಪವಿರುವ ರಸ್ತೆಯಲ್ಲಿ ಬಿರುಕು ಕಂಡು ಬಂದಿದೆ.  ಕೆರೆ ಏರಿಯ ರಸ್ತೆಯಲ್ಲಿ ಬಿರುಕು ಕಂಡಿರುವ  ಹಿನ್ನೆಲೆಯಲ್ಲಿ ವಾಯು ವಿಹಾರಿಗಳು, ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಹಗಲು ರಾತ್ರಿಯೆನ್ನದೇ ಈ ಪರಿಸರದಲ್ಲಿ ವಾಕ್ ಮಾಡುವವರು, ಜಾಗಿಂಗ್ ಮಾಡುವವರ ಸಂಖ್ಯೆ ಹೆಚ್ಚಿದೆ. ಅಕಸ್ಮಾತ್ ಕತ್ತಲಾದ ಸಮಯದಲ್ಲಿ ಕಾಲು ಸಿಲುಕಿಕೊಂಡರೆ ಮೇಲೇಳಲು ಕಷ್ಟ ಸಾಧ್ಯ. ರಾತ್ರಿ ಸುರಿದಿರುವ ಬಾರಿ ಮಳೆಯಿಂದಾಗಿ ಬಿರುಕು ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಕೂಡಲೇ ಕೆರೆ ಏರಿಯ ಮೇಲಿರುವ ಪಾದಚಾರಿ ರಸ್ತೆಯನ್ನು ದುರಸ್ತಿ ಮಾಡುವಂತೆ ವಾಯುವಿಹಾರಿಗಳು ಒತ್ತಾಯಿಸಿದ್ದಾರೆ. ಇದು ಮೈಸೂರು ವಿಶ್ವವಿದ್ಯಾಲಯ ವ್ಯಾಪ್ತಿಗೆ ಒಳಪಡುತ್ತಿದ್ದು, ವಿಶ್ವವಿದ್ಯಾಲಯ ಇಂಜಿನಿಯರ್ ವಿಭಾಗಕ್ಕೆ   ದುರಸ್ತಿ ಕಾರ್ಯ ಒಳಪಡಲಿದೆ. ಕೂಡಲೇ ಬಿರುಕನ್ನು  ಸರಿಪಡಿಸದೆ ಇದ್ದರೆ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದ್ದು, ಅನಾಹುತ ಸಂಭವಿಸಬಹುದೆಂದು ಸಾರ್ವಜನಿಕರು ತಿಳಿಸಿದ್ದಾರೆ. ಆದಷ್ಟು ಶೀಘ್ರದಲ್ಲಿಯೇ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: