ಮೈಸೂರು

ಉದ್ಯಶೀಲತೆಯ ಕೊರತೆ ಹೊಂದಿರುವವರು ಉದ್ಯಮದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ : ಮಂಜುನಾಥ್ ಸ್ವಾಮಿ ಎಂ

ಮೈಸೂರು,ಏ.23:- ಉದ್ಯಶೀಲತೆಯ ಕೊರತೆ ಹೊಂದಿರುವವರು ಉದ್ಯಮದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಅವರು ತಮ್ಮ ಉತ್ಪಾದನೆಯನ್ನು ಮಾರುಕಟ್ಟೆ ತಲುಪಿಸುವಲ್ಲಿ ವಿಫಲರಾಗುತ್ತಾರೆ ಎಂದು ಸಿಇಡಿಒಕೆ ಜಂಟಿ ನಿರ್ದೇಶಕ ಮಂಜುನಾಥ್ ಸ್ವಾಮಿ ಎಂ ತಿಳಿಸಿದರು.

ಅವರಿಂದು ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗ ಮತ್ತು ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ ದಿಶಾ ಇವರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಜಯಲಕ್ಷ್ಮಮ್ಮಣ್ಣಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ‘ಉದ್ಯಮಶೀಲತಾ ಪ್ರೇರಣಾ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾಭ್ಯಾಸ ಮುಗಿದ ನಂತರ ಉದ್ಯೋಗ ಪಡೆಯಬೇಕೆನ್ನುವ ಚಿಂತನೆ ಎಲ್ಲರಲ್ಲಿಯೂ ಇರುತ್ತದೆ. ಆದರೆ ಸರ್ಕಾರದ ಕೆಲಸ ಸಿಗತಕ್ಕ ಅವಕಾಶಗಳು ಶೇ2ರಷ್ಟು ಮಾತ್ರ. ಉಳಿದ 98% ವಿದ್ಯಾರ್ಥಿಗಳು ನಿರುದ್ಯೋಗಿಗಳಾಗಿ ಹೊರಹೊಮ್ಮುತ್ತಾರೆ. ನಿರುದ್ಯೋಗ ಸಮಸ್ಯೆಯೆಂದು ಸರ್ಕಾರ ಪರಿಗಣಿಸಿ ಅನೇಕ ಯೋಜನೆಗಳನ್ನು ರೂಪಿಸುತ್ತದೆ. ಅದಕ್ಕೆ ಉದಾಹರಣೆ ದಿಶಾ ಕಾರ್ಯಕ್ರಮ ಎಮದರು. 2018-19ರ ಬಜೆಟ್ ನಲ್ಲಿ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಏನೆಲ್ಲ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ ಎಂಬುದನ್ನು ನೋಡಿ ಸರ್ಕಾರ ದಿಶಾ ಕಾರ್ಯಕ್ರಮ ಮಾಡುತ್ತಿದೆ. ವಿದ್ಯಾಭ್ಯಾಸ ಮುಗಿಸಿದ ಮೇಲೆ ಪಠ್ಯಕ್ರಮದಲ್ಲಿ ಉದ್ಯಮಶೀಲತೆಯ ಪರಿಕಲ್ಪನೆಯ ಕೊರತೆಯಿದೆ ಎಂಬುದನ್ನರಿತು ವಿದ್ಯಾರ್ಥಿಗಳಿಗೆ ಉದ್ಯಮಶೀಲತೆಯ ಪರಿಕಲ್ಪನೆಯ ಕುರಿತು ತಿಳಿಸಲಾಗುತ್ತಿದೆ. ಉದ್ಯಮಶೀಲತೆ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಇಲಾಖೆ ಮೊದಲಿರಲಿಲ್ಲ. ಕೌಶಲ್ಯದ ಕೊರತೆಯಿದೆ. ಪರಿಣತಿ ನೀಡಬೇಕು ಎಂದು ಆರಂಭಿಸಿ ಅನುಷ್ಠಾನಗೊಳಿಸಲಾಯಿತು. ಉದ್ಯಶೀಲತೆ ಹೊಸಪದ. ಪ್ರಚಲಿತವಾಗಿರಲಿಲ್ಲ. ಉದ್ಯಮ ಶೀಲತೆ ಪರಿಕಲ್ಪನೆಯನ್ನು ಎಲ್ಲ ಕಡೆ ನೀಡಬೇಕೆಂದುಸರ್ಕಾರ ಪ್ರಯತ್ನಿಸುತ್ತಿದೆ. ಅನೇಕ ಮಂದಿ ಉದ್ಯಮದಲ್ಲಿ ತೊಡಗಿಸಿಕೊಂಡು ಸಾಕಷ್ಟು ಉದ್ಯೋಗ ಸೃಷ್ಟಿಮಾಡಿದ್ದಾರೆ ಎಂದು ತಿಳಿಸಿದರು.

ಬೃಹತ್ ಉದ್ಯಮಿಗಳನ್ನು ಕೆಲವರು ರೋಲ್ ಮಾಡೆಲ್ ಆಗಿ ಮಾಡಿಕೊಂಡಿದ್ದಾರೆ. ಯಾವುದೇ ಉತ್ಪನ್ನ ಉತ್ಪಾದಿಸಿದ ನಂತರ ಮಾರುಕಟ್ಟೆಗೆ ಬಿಡುವುದು ಸುಲಭದ ಮಾತಲ್ಲ. ಆರ್ಥಿಕವಾಗಿ ಸದೃಢರಾಗಲು ಮಾರುಕಟ್ಟೆಗೆ ಉತ್ಪನ್ನವನ್ನು ಬಿಡಲೇಬೇಕಿದೆ. ಉತ್ಪನ್ನ ತಯಾರಿಸಿ ಮಾರುಕಟ್ಟೆಗೆ ಬಿಟ್ಟಾಗ ಅವಮಾನ, ಪ್ರಶ್ನೆಗಳನ್ನು ಎದುರಿಸಬೇಕು. ಈಗ ತಂತ್ರಜ್ಞಾನ ಲಭ್ಯವಿದ್ದು, ಸಂಶೋಧನೆ ಮಾಡಿ ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಉದಾಹರಣೆಗೆ ಸಿಎಫ್ ಟಿಆರ್ ಐ ನಲ್ಲೇ ಸಾಕಷ್ಟು ಸಂಶೋಧನೆ ನಡೆಸಿ, ಬೇರೆ ದೇಶ, ರಾಜ್ಯಗಳಿಗೆ ಬಿಡುತ್ತಿದ್ದಾರೆ. ಆದರೆ ಅಲ್ಲಿನ ತಂತ್ರಜ್ಞಾನವನ್ನು ನಾವು ಉತ್ಪನ್ನ ತಯಾರಿಕೆಗೆ ಬಳಸುತ್ತಿಲ್ಲ ಎಂದರು. ಯಾವುದೇ ಒಂದು ಆರ್ಥಿಕ ಚಟುವಟಿಕೆಯಲ್ಲಿ ಭಾಗವಹಿಸಿ ಯಶಸ್ವಿಯಾಗಿ ನಡೆಸಿಕೊಂಡು ಹೋಗತಕ್ಕ ಮನಸ್ಥಿತಿಯನ್ನು ನಾವು ಉದ್ಯಮಶೀಲತೆ ಎನ್ನುತ್ತೇವೆ. ಹಸನ್ಮುಖರಾಗಿ, ಧೈರ್ಯದಿಂದ, ನಾಯಕತ್ವದ ಗೂಣದಿಂದ , ಆಕರ್ಷಣೆಯಿಂದ,ಕ್ರಿಯೇಟಿವಿಟಿಯಿಂದ, ನಡವಳಿಕೆಗಳಿಂದ ಸೆಳೆಯಬಹುದು. ಕೆಲವು ಉತ್ಪನ್ನಗಳು ಮಾರುಕಟ್ಟೆಗೆ ಬರತ್ತೆ, ಮನೆಮನೆಗೆ ಬರಲ್ಲ. ಜಾಹೀರಾತುಗಳ ಮೂಲಕ ಎಲ್ಲರನ್ನೂ ತಲುಪುತ್ತದೆ ಎಂದರು. ಉದಾಹರಣೆಗೆ ಫೇರ್ &ಲವ್ಲಿ. ಅದನ್ನು ಹಚ್ಚಿಕೊಂಡರೆ ಬೆಳ್ಳಗಾಗುತ್ತಾರೆಂದು ನಮ್ಮಂತಹ ಕಪ್ಪಗಿರುವವರು ಹೋಗಿ ಕೊಂಡು ತಂದು ಬೆಳ್ಳಗಾಗಲು ಯತ್ನಿಸುತ್ತಾರೆಂದು ಹಾಸ್ಯ ಚಟಾಕಿ ಹಾರಿಸಿದರು. ಆದರೆ ಉದ್ಯಮಶೀಲತೆ ಕೊರತೆ ಅನುಭವಿಸುವವರು ಮಾರುಕಟ್ಟೆಗೆ ಉತ್ಪನ್ನವನ್ನು ತಲುಪಿಸುವಲ್ಲಿ ವಿಫಲರಾಗುತ್ತಾರೆ. ಅವರಲ್ಲಿ ಉದ್ಯಮ ಕುರಿತಾದ ಕೌಶಲ್ಯವಿರಬೇಕು ಎಂದರು.

ಕಾರ್ಯಕ್ರಮದಲ್ಲಿ ದೀಶಾ ಕೇಂದ್ರದ  ಬಿ.ಎ.ವಿರೂಪಾಕ್ಷ, ಕೇಂದ್ರ ವ್ಯವಸ್ಥಾಪಕಿ ಹಿತಶ್ರೀ ಹೆಚ್.ರಾವ್, ಪ್ರಾಂಶುಪಾಲರಾದ ಪ್ರೊ.ಸಿ.ಹೆಚ್.ಪ್ರಕಾಶ್, ಸಹ ಪ್ರಾಧ್ಯಾಪಕರಾದ ಡಾ.ಬಸೀರತ್ ಸುಲ್ತಾನ್, ಡಾ.ನೇ.ತಿ.ಸೋಮಶೇಖರಯ್ಯ, ಸಹಾಯಕ ಪ್ರಾಧ್ಯಾಪಕ ಡಾ.ಪುಟ್ಟರಾಜು, ಡಾ.ರೇಶ್ಮ ಚೆಂಗಪ್ಪ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: