ಮೈಸೂರು

ಫ್ಲೆಕ್ಸ್ ತೆರವಿಗೆ ವಿರೋಧ : ಪ್ರತಿಭಟನೆ

ಕರ್ನಾಟಕ ರಾಜ್ಯ ಮಡಿವಾಳರ ಸಂಘದಿಂದ ಮೈಸೂರಿನಲ್ಲಿ ಬುಧವಾರ ಮಾಚಿದೇವರ ಜಯಂತ್ಯೋತ್ಸವ ಆಯೋಜಿಸಿದ ಹಿನ್ನೆಲೆಯಲ್ಲಿ ಮಡಿವಾಳ ಸಮುದಾಯದ ಮುಖಂಡರು  ನಗರದ ಪ್ರಮುಖ ವೃತ್ತಗಳಲ್ಲಿ  ಫ್ಲೆಕ್ಸ್ ಗಳನ್ನು ಅಳವಡಿಸಿದ್ದರು. ಆದರೆ ಮಹಾನಗರಪಾಲಿಕೆ ಅದನ್ನು ತೆರವುಗೊಳಿಸಿದೆ. ಪಾಲಿಕೆಯ ಈ ಕೃತ್ಯಕ್ಕೆ  ಮಡಿವಾಳ ಸಮುದಾಯದವರಿಂದ ಆಕ್ರೋಶ ವ್ಯಕ್ತವಾಗಿದ್ದು. ಪ್ರತಿಭಟನೆ ನಡೆಸಿದರು.

ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಮಡಿವಾಳ ಸಮುದಾಯದವರು ಪ್ರತಿಭಟನೆ ನಡೆಸಿದರು. ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರಲ್ಲದೇ ವಾಹನಗಳನ್ನು ಅಡ್ಡಗಟ್ಟಿದರು. ಇದರಿಂದ ಕೆಲಕಾಲ ವಾಹನಗಳ ಸಂಚಾರ ಅಸ್ತವ್ಯಸ್ತವಾಯಿತು. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ  ಪೊಲೀಸರು ಆಗಮಿಸಿ ಪ್ರತಿಭಟನಾಕಾರರ ಮನವೊಲಿಸುವಲ್ಲಿ ಯಶಸ್ವಿಯಾದರು.
ಮೈಸೂರನ್ನು ಫ್ಲೆಕ್ಸ್ ಮುಕ್ತ ನಗರವೆಂದು ಮಹಾನಗರಪಾಲಿಕೆ ಘೋಷಿಸಿದ್ದು, ನಗರದಲ್ಲಿ ಪ್ಲೆಕ್ಸ್ ಹಾಕದಂತೆ ಎಚ್ಚರಿಕೆ ನೀಡಿದೆ. ಪಾಲಿಕೆಯ ಎಚ್ಚರಿಕೆಯ ನಡುವೆಯೂ ಫ್ಲೆಕ್ಸ್ ಗಳನ್ನು ಅಳವಡಿಸಲಾಗುತ್ತು. ಆದರೆ ಮಹಾನಗರ ಪಾಲಿಕೆ ಅಳವಡಿಸಲಾದ ಫ್ಲೆಕ್ಸ್ ನ್ನು ತೆರವುಗೊಳಿಸಿತ್ತು. ಇದರಿಂದ ಕುಪಿತಗೊಂಡು ಮಡಿವಾಳ ಸಮುದಾಯದವರು ಪ್ರತಿಭಟನೆ ನಡೆಸಿದ್ದರು.

Leave a Reply

comments

Related Articles

error: