ಮೈಸೂರು

ತ್ರಿಬ್ಬಲ್ ರೈಡ್ : ಅಪ್ರಾಪ್ತ ಯುವಕರಿಗೆ ಪೊಲೀಸ್ ಬುದ್ಧಿವಾದ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿಮಾನ ನಿಲ್ದಾಣದಿಂದ ಜೆ.ಕೆ ಗ್ರೌಂಡ್ ಗೆ ಹೋಗುವ ವೇಳೆ  ಬೈಕ್ ನಲ್ಲಿ ಮೂವರನ್ನು ಕುಳ್ಳಿರಿಸಿಕೊಂಡು ಚಾಲನೆ ಮಾಡಿಕೊಂಡು ಮುನ್ನುಗುತ್ತಿದ್ದ ಕಾಲೇಜು ವಿದ್ಯಾರ್ಥಿಗಳಿಗೆ  ಸಂಚಾರಿ ಪೊಲೀಸ್ ಓರ್ವರು ಬುದ್ಧಿವಾದ ಹೇಳಿ ಕಳುಹಿಸಿದ ಘಟನೆ ಮೈಸೂರಿನ ಪಾಠಶಾಲಾ ಸಿಗ್ನಲ್ ಬಳಿ ನಡೆದಿದೆ.

ಬೈಕ್ ನಂಬರ್ ಕೆ.ಎ.09 EP 7043  ಹೊಂಡಾ ಆ್ಯಕ್ಟೀವಾದಲ್ಲಿ  ಬರುತ್ತಿದ್ದ ವಿದ್ಯಾರ್ಥಿಗಳು ಮುಖ್ಯಮಂತ್ರಿಗಳ ಕಾರು ಪಾಠಾಶಾಲಾ ಜಂಕ್ಷನ್ ಪಾಸ್ ಆದ ತಕ್ಷಣವೇ ತನ್ನ ಆ್ಯಕ್ಟೀವಾ ಬೈಕ್ ನ್ನು ಸ್ಟಾರ್ಟ್ ಮಾಡಿ ಮುನ್ನುಗ್ಗಿದ್ದಾನೆ. ಈ ವೇಳೆ ಕೆ.ಆರ್. ಟ್ರಾಫಿಕ್ ಪೊಲೀಸ್ ಗಿರೀಶ್ ವಿದ್ಯಾರ್ಥಿಗಳಿಗೆ ನಿಲ್ಲಿಸಲು ಸೂಚನೆ ನೀಡಿದ್ದಾರೆ. ಆದರೆ ವಿದ್ಯಾರ್ಥಿಗಳು ಮೂವರು ಒಂದೇ ವಾಹನದಲ್ಲಿ ಚಾಲನೆ  ಮಾಡುತ್ತಿದ್ದ ಹಿನ್ನಲೆಯಲ್ಲಿ ಭಯದಲ್ಲಿ ಮುನ್ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸ್ ವಿದ್ಯಾರ್ಥಿಗಳ ಬೈಕ್ ನಿಲ್ಲಿಸಿ ಎಲ್ಲಾ ವಾಹನಗಳು ಹೋದ ನಂತರ ಬುದ್ಧಿವಾದ ಹೇಳಿದ್ದಾರೆ. ಆದರೆ ಈ ವೇಳೆ ವಿದ್ಯಾರ್ಥಿಗಳು ಪರೀಕ್ಷೆ ನಡೆಯುತ್ತಿದ್ದರಿಂದ ತುರ್ತು ಅಗತ್ಯವಿತ್ತು. ಹಾಗಾಗಿ ನಾವು ಮೂವರು ಒಟ್ಟಿಗೆ ಬಂದಿದ್ದೇವೆಂದು  ಸಮಾಜಾಯಿಶಿ ನೀಡಿದ್ದಾರೆ. ಈ ವೇಳೆ ಟ್ರಾಫಿಕ್ ಪೊಲೀಸ್ ಗಿರೀಶ್ ಅವರಿಗೆ ಇನ್ಮುಂದೆ ಹೆಲ್ಮೆಟ್ ಇಲ್ಲದೇ ಹಾಗೂ ತ್ರಿಬಲ್‌ ಡ್ರೈವಿಂಗ್ ಮಾಡದಂತೆ ಎಚ್ಚರಿಸಿ ಬುದ್ದಿವಾದ ಹೇಳಿ ಕಳುಹಿಸಿದ್ದಾರೆ ಎನ್ನಲಾಗಿದೆ. ಆದರೆ ಸ್ಥಳದಲ್ಲಿ ಸೇರಿದ ಸಾರ್ವಜನಿಕರು ಪೊಲೀಸರು 18 ವರ್ಷದೊಳಗಿನ ಮಕ್ಕಳಿಗೆ ವಾಹನ ಚಾಲನೆ ಮಾಡುವವರಿಗೆ ದಂಡ ವಿಧಿಸಲ್ಲ.  ಬದಲಿಗೆ ಅವರಿಗೆ ಬುದ್ದಿವಾದ ಹೇಳಲು ವಾಹನ ನಿಲ್ಲಿಸಲು ಹೇಳುತ್ತಾರೆ. ಆದರೆ ಇದನ್ನರಿಯದೆ ಅಪ್ರಾಪ್ತ ಬೈಕ್ ಸವಾರರು ಹೆದರಿ ವಾಹನವನ್ನು ವೇಗವಾಗಿ ಚಲಾಯಿಸುತ್ತಾರೆ. ಇದು ಅಪಘಾತಕ್ಕೆ ಕಾರಣವಾಗುತ್ತೆ. ಪೊಲೀಸರು ಬುದ್ಧಿ ಹೇಳುವುದಷ್ಟೇ ಅಲ್ಲ. ಅವರಿಗೆ ದಂಡ ವಿಧಿಸಬೇಕು ಎಂದು ತಿಳಿಸಿದ್ದಾರೆ.

Leave a Reply

comments

Related Articles

error: