ದೇಶಪ್ರಮುಖ ಸುದ್ದಿ

2.5 ಲಕ್ಷದವರೆಗೆ ತೆರಿಗೆ ಇಲ್ಲ ಬಜೆಟ್ ನಲ್ಲಿ ವಿತ್ತ ಸಚಿವ ಜೇಟ್ಲಿ ಘೋಷಣೆ

ವಿತ್ತ ಸಚಿವ ಅರುಣ್ ಜೇಟ್ಲಿ  ಲೋಕಸಭೆಯಲ್ಲಿ  2017-18ನೇ ಸಾಲಿನ ಬಜೆಟ್ ಮಂಡಿಸಿದರು. ಇಂದು ವಸಂತ ಪಂಚಮಿಯ ಶುಭ ಸಮಯದಲ್ಲಿ ಬಜೆಟ್ ಮಂಡಿಸಲಾಗುತ್ತಿದೆ. ನಮ್ಮ ಸರಕಾರವನ್ನು ಜನತೆ ಬಹಳ ನಿರೀಕ್ಷೆಗಳನ್ನಿರಿಸಿ ಚುನಾಯಿಸಿದ್ದರು. ಅವರ ನಿರೀಕ್ಷೆಗಳನ್ನು ಈಡೇರಿಸಲು ಹಣದುಬ್ಬರ ತಡೆಗಟ್ಟಲು ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಶ್ರಮಿಸುತ್ತಿದ್ದೇವೆ. ಕಪ್ಪು ಹಣದ ವಿರುದ್ಧ ನಾವು ಮಹಾಸಮರವನ್ನೇ ಸಾರಿದ್ದೇವೆ. ಸಂಸದ ಈ. ಅಹ್ಮದ್ ನಿಧನದಿಂದ ಬಜೆಟ್ ಇವತ್ತು ಜೇಟ್ಲಿ ಮಂಡಿಸುತ್ತಾರೋ ಇಲ್ಲವೋ ಎನ್ನುವ ಪ್ರಶ್ನೆಯಿತ್ತು. ಸ್ಪೀಕರ್ ಸುಮಿತ್ರಾ ಮಹಾಜನ್ ಬಜೆಟ್ ನ್ನು ಇಂದೇ ಮಂಡಿಸಲು ಸಮ್ಮತಿ ನೀಡಿದರು ಎಂದು ಬಜೆಟ್ ಮಂಡನೆಗೂ ಮುನ್ನ ತಿಳಿಸಿದ್ದಾರೆ.

ಈ ಬಾರಿಯ ಬಜೆಟ್ ಮೂರು ಮುಖ್ಯ ನಿರ್ಣಯ ಕೈಗೊಂಡಿದ್ದಾಗಿ ಹೇಳಿದ ಜೈಟ್ಲಿ ಫೆಬ್ರವರಿ ಕೊನೆ ವಾರದಲ್ಲಿ ಮಂಡನೆ ಆಗಬೇಕಿದ್ದ ಆಯವ್ಯಯವನ್ನು ಫೆಬ್ರವರಿ 1 ರಂದೇ ಮಂಡಿಸುತ್ತಿರುವುದಾಗಿ ಹೇಳಿದ್ದಾರೆ. ರೈಲ್ವೆ ಬಜೆಟ್‌ನ್ನು ಸಾಮಾನ್ಯ ಬಜೆಟ್‌ನಲ್ಲಿ ಮಂಡಿಸುತ್ತಿರುವುದನ್ನು ಐತಿಹಾಸಿಕ ನಿರ್ಣಯ ಎಂದಿದ್ದಾರೆ. ಯೋಜನೆ, ಯೋಜನೇತರ ವೆಚ್ಚದಲ್ಲಿ ಸ್ಪಷ್ಟತೆ ಹೊಂದಿರುವುದು  ಈ ಬಜೆಟ್‌ನ ವಿಶೇಷತೆ ಎಂದು ಜೇಟ್ಲಿ ಪ್ರತಿಪಾದಿಸಿದ್ದಾರೆ.

2017-18ನೇ ಸಾಲಿನ ಬಜೆಟ್‌ನಲ್ಲಿ ಗ್ರಾಮೀಣಾಭಿವೃದ್ಧಿ , ಬಡತನ ನಿರ್ಮೂಲನೆ, ಮೂಲ ಸೌಕರ್ಯಕ್ಕೆ ಆದ್ಯತೆ ನೀಡಿರುವುದಾಗಿ ತಿಳಿಸಿದ್ದಾರೆ.  ಕಪ್ಪು ಹಣದ ವಿರುದ್ಧ ಹೋರಾಟ ನಡೆಸಿದ್ದೇವೆ. ದೊಡ್ಡ ನೋಟ್‌ಗಳ ಚಲಾವಣೆ ರದ್ದುಗೊಳಿಸಿದ್ದೇವೆ. ಸರ್ಕಾರದ ಈ ಹೋರಾಟಕ್ಕೆ ದೇಶದ ಜನತೆ ಬೆಂಬಲಿಸಿದೆ. ದೊಡ್ಡ ನೋಟ್‌ಗಳ ಚಲಾವಣೆ ರದ್ದುಗೊಳಿಸಿ ಪಾರದರ್ಶಕತೆ  ಕಾಪಾಡುತ್ತಿರುವ ಸರ್ಕಾರ ಜನ ಧನವನ್ನು ರಕ್ಷಿಸುತ್ತಿದೆ ಎಂದು  ತಿಳಿಸಿದ್ದಾರೆ.

ಆದಾಯ ತೆರಿಗೆ:
2.5 ಲಕ್ಷದವರೆಗೆ – ಯಾವುದೇ ತೆರಿಗೆ ಇಲ್ಲ. 2.5 ಲಕ್ಷದಿಂದ 5 ಲಕ್ಷ – ಶೇ. 10 ತೆರಿಗೆ, 5 ಲಕ್ಷದಿಂದ 10 ಲಕ್ಷ – ಶೇ. 20 ತೆರಿಗೆ, 10 ಲಕ್ಷದಿಂದ 1 ಕೋಟಿ – ಶೇ. 30 ತೆರಿಗೆ, 1 ಕೋಟಿ ರೂ. ಮೇಲ್ಪಟ್ಟು – ಶೇ. 30 ತೆರಿಗೆ & ಶೇ.15 ಸರ್​ಚಾರ್ಜ್​
60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ: 3 ಲಕ್ಷದವರೆಗೆ – ಯಾವುದೇ ತೆರಿಗೆ ಇಲ್ಲ, 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ: 5 ಲಕ್ಷದವರೆಗೆ – ಯಾವುದೇ ತೆರಿಗೆ ಇಲ್ಲ ಎಂದಿದ್ದಾರೆ.

ನಿವೃತ್ತ ಯೋಧರಿಗೆ ಪಿಂಚಣಿ ನೀಡಿಕೆ ಸಂಪೂರ್ಣ ಆನ್​ಲೈನ್, ಕೇಂದ್ರ ಅಂಚೆ ಕಚೇರಿಗಳಲ್ಲಿ ಪಾಸ್​ಪೋರ್ಟ್ ಸೌಲಭ್ಯ, ಆಧಾರ್ ಆಧಾರಿತ 20 ಲಕ್ಷ ಕಾರ್ಡ್​ ಸ್ವೈಪಿಂಗ್ ಯಂತ್ರ, ಎಲ್ಲ ಸರ್ಕಾರಿ ಸಂಸ್ಥೆಗಳಲ್ಲೂ ಡಿಜಿಟಲ್ ಪಾವತಿ ಕಡ್ಡಾಯ. ಸರ್ಕಾರಿ ಇಲಾಖೆ ಸಂಪೂರ್ಣ ಡಿಜಿಟಲ್  ಎಂದು  ಬಜೆಟ್​ನಲ್ಲಿ ಘೋಷಣೆ ಮಾಡಿದ್ದಾರೆ.  10 ಲಕ್ಷ ಪಿ​ಓಎಸ್​​ಗಳ ಸ್ಥಾಪನೆ, ಗ್ರಾಮೀಣ ಪ್ರದೇಶಗಳಲ್ಲಿ ಪಿಓಎಸ್​ಗಳ ಸ್ಥಾಪನೆ, ಭೀಮಾ ಆ್ಯಪ್ ಬಳಕೆದಾರರಿಗೆ ಬೋನಸ್ ಘೋಷಣೆ, 1.25 ಕೋಟಿ ಜನರಿಂದ ಭೀಮಾ ಆ್ಯಪ್ ಬಳಕೆ ರೈಲ್ವೇ ಟಿಕೆಟ್ ರಿಯಾಯಿತಿಗೆ ಆಧಾರ್ ಕಾರ್ಡ್​ ಕಡ್ಡಾಯ. 500, 1000 ನೋಟ್‌ಗಳ ರದ್ದು, ಜಿಎಸ್‌ಟಿ ಸರ್ಕಾರದ ಮಹತ್ವದ ನಿರ್ಣಯಗಳಾಗಿದ್ದು, ಇವುಗಳಿಂದ ದೇಶದ ಆರ್ಥಿಕತೆ ವೃದ್ಧಿಸಲಿದೆ. ಮುಂದಿನ ವರ್ಷ ಜಿಡಿಪಿ ವೃದ್ಧಿಸಲಿದೆ ಎಂದು ಜೇಟ್ಲಿ ಆಶಿಸಿದ್ದಾರೆ. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಗೆ ಹೆಚ್ಚು ಒತ್ತು ನೀಡಲಾಗುವುದು, ಈ ಯೋಜನೆಗೆ 48 ಸಾವಿರ ಕೋಟಿ ರೂ.ನೀಡಲಾಗುವುದು. ನಕ್ಸಲ್ ಪ್ರಭಾವಿತ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ, ಡೈರಿ ಅಭಿವೃದ್ಧಿಗೆ 8 ಸಾವಿರ ಕೋಟಿ ವಿಶೇಷ ಅನುದಾನ, ಮೈಕ್ರೋ ಇರಿಗೇಶನ್‌ಗಾಗಿ 5 ಸಾವಿರ ಕೋಟಿ, ಬಡವರಿಗೆ ಸಾಮಾಜಿಕ ಭದ್ರತೆ, ಗೃಹ ನಿರ್ಮಾಣ, ಉದ್ಯೋಗಾವಕಾಶ, ಭೂಮಿ ಪರೀಕ್ಷೆಗೆ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಮಿನಿ ಲ್ಯಾಬ್ ಸ್ಥಾಪನೆ, 63 ಸಾವಿರ ಪ್ರಾಥಮಿಕ ಸಹಕಾರ ಸಂಘಗಳಲ್ಲಿ ಕಂಪ್ಯೂಟರೀಕರಣ, ಕೃಷಿ ಸಾಲಕ್ಕೆ 10 ಲಕ್ಷ ಕೋಟಿ ರೂ ಮೀಸಲು, 60 ದಿನಗಳಲ್ಲಿ ಕೃಷಿ ಸಾಲ ತೀರಿಸುವ ರೈತರಿಗೆ ಬಡ್ಡಿ ಮನ್ನಾ,ಮುಂದಿನ 5 ವರ್ಷಗಳಲ್ಲಿ ರೈತರ ಆದಾಯ ದ್ವಿಗುಣೀಕರಣಕ್ಕೆ ಕ್ರಮ, 500 ಕೋಟಿ ವೆಚ್ಚದಲ್ಲಿ ಗ್ರಾಮಗಳಲ್ಲಿ ಸ್ತ್ರೀ ಶಕ್ತಿ ಕೇಂದ್ರಗಳ ಸ್ಥಾಪನೆ, ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಮೂಲಕ 20 ಸಾವಿರ ಕೋಟಿ ಗೃಹ ಸಾಲ, ಕೃಷಿ, ಗ್ರಾಮೀಣ ಅಭಿವೃದ್ಧಿ ರಂಗಗಳಿಗೆ 1.87 ಲಕ್ಷದ 87 ಸಾವಿರ ಕೋಟಿ, ಜಾರ್ಖಂಡ್‌, ಗುಜರಾತ್‌ನಲ್ಲಿ 2 ಏಮ್ಸ್‌ ಸ್ಥಾಪನೆ, ಉನ್ನತ ಶಿಕ್ಷಣದಲ್ಲಿ ಹೊಸ ಪ್ರವೇಶ ಪರೀಕ್ಷಾ ಪದ್ಧತಿ ಜಾರಿ, ಆನ್‌ಲೈನ್‌ನಲ್ಲಿ ಪ್ರಯೋಗಾತ್ಮಕವಾಗಿ 350 ತರಗತಿಗಳು, ಯುವ ಪೀಳಿಗೆಯಲ್ಲಿ ನೈಪುಣ್ಯತೆ ಹೆಚ್ಚಿಸಲು ಸಂಕಲ್ಪ್ ಸ್ಕೀಮ್, ಇದಕ್ಕಾಗಿ 4 ಸಾವಿರ ಕೋಟಿ ಮೀಸಲು, ಪ್ರಧಾನಮಂತ್ರಿ ಸಡಕ್ ಯೋಜನೆಗೆ 19 ಸಾವಿರ ಕೋಟಿ, ಗ್ರಾಮೀಣ ಬಡ ಜನತೆಗೆ  ಮನೆ ನಿರ್ಮಾಣವನ್ನು  ಘೋಷಿಸಿದ್ದಾರೆ.

ರಾಜಕೀಯ ಪಕ್ಷಗಳ ಕಪ್ಪು ಹಣ ತಡೆಯಲು ಶಾಕ್ ಟ್ರೀಟ್ ಮೆಂಟ್ :ರಾಜಕೀಯ ಪಕ್ಷಗಳಿಗೆ ನಗದು ದೇಣಿಗೆ ಸ್ವೀಕಾರ ಮಿತಿ ಕೇವಲ 2 ಸಾವಿರ, ರಾಜಕೀಯ ಪಕ್ಷಗಳು 2 ಸಾವಿರಕ್ಕಿಂತ ಹೆಚ್ಚು ದೇಣಿಗೆ ಪಡೆದರೆ ದಾಖಲೆ ನೀಡಬೇಕು. ಒಬ್ಬ ವ್ಯಕ್ತಿಯಿಂದ ನಗದು ದೇಣಿಗೆ 2 ಸಾವಿರ ರೂ. ಮಾತ್ರ ಸ್ವೀಕಾರಕ್ಕೆ ಅವಕಾಶ. ಈ ಮೊದಲು 20 ಸಾವಿರ ನಗದು ಸ್ವೀಕಾರಕ್ಕೆ ಅವಕಾಶವಿತ್ತು. ಷರತ್ತುಗಳನ್ನು ಪಾಲಿಸಿದರೆ ಮಾತ್ರ, ರಾಜಕೀಯ ಪಕ್ಷಗಳಿಗೆ ತೆರಿಗೆ ವಿನಾಯಿತಿ. ಇನ್ನು ಮುಂದೆ 3 ಲಕ್ಷಕ್ಕಿಂತ ಹೆಚ್ಚು ನಗದು ವ್ಯವಹಾರ ಮಾಡುವಂತಿಲ್ಲ.
3 ಲಕ್ಷಕ್ಕಿಂತ ಮೇಲ್ಪಟ್ಟ ವ್ಯವಹಾರ ಬ್ಯಾಂಕ್ ಮೂಲಕವೇ ಆಗಬೇಕು. ಏಕಕಾಲಕ್ಕೆ 3 ಲಕ್ಷ ನಗದು ವ್ಯವಹಾರಕ್ಕೆ ಬಜೆಟ್​ನಲ್ಲಿ ನಿರ್ಬಂಧ ವಿಧಿಸಲಾಗಿದೆ ಎಂದಿದ್ದಾರೆ.

ರಾಜಧಾನಿ ಅಮರಾವತಿ ಅಭಿವೃದ್ಧಿಗೆ ಅನುದಾನ ಘೋಷಿಸಲಾಗಿದೆ.,ಅಮರಾವತಿ ಮೂಲ ಸೌಕರ್ಯ ಅಭಿವೃದ್ಧಿಗೆ ವಿಶೇಷ ಅನುದಾನ, ಅಮರಾವತಿಗೆ, 3 ವರ್ಷದ ವರೆಗೆ ತೆರಿಗೆ ರಿಯಾಯಿತಿ ಘೋಷಿಸಲಾಗಿದೆ.

ಸಾಲ ಮಾಡಿ ಓಡಿಹೋದವರ ಆಸ್ತಿ ಸಂಪೂರ್ಣ ಜಪ್ತಿ
ವಿಜಯ್ ಮಲ್ಯ ಪರಾರಿ ಹಿನ್ನೆಲೆಯಲ್ಲಿ ಬಜೆಟ್​ನಲ್ಲಿ ಮತ್ತೊಂದು ಆಘಾತ ನೀಡಲಾಗಿದೆ. ಆರ್ಥಿಕ ಅಪರಾಧಗಳ ದಂಡನೆಗೆ ಹೊಸ ಕಾನೂನು ಜಾರಿ ಮಾಡಲಾಗುತ್ತಿದ್ದು, ಇನ್ನು ಮುಂದೆ ಸಾಲ ಮಾಡಿ ಪರಾರಿಯಾದರೆ, ಆಸ್ತಿ ನಿಮ್ಮದಲ್ಲ ಎನ್ನುವ ಸಂದೇಶ ರವಾನಿಸಲಾಗಿದೆ. ಇ ಟಿಕೆಟ್ ಮೇಲೆ ಸರ್ವಿಸ್ ಚಾರ್ಜ್ ಇರುವುದಿಲ್ಲ,  2020ರೊಳಗೆ ಮಾನವ ರಹಿತ ರೈಲ್ವೆ ಕ್ರಾಸಿಂಗ್, 4 ಪ್ರಮುಖ ಉದ್ದೇಶಗಳೊಂದಿಗೆ ರೈಲ್ವೆ ಅಭಿವೃದ್ಧಿ, ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಗೆ ಸೇವಾದರ ಇಲ್ಲ, ಸರಕು ಸಾಗಣೆ ವಲಯದಲ್ಲಿ ಖಾಸಗೀಕರಣ, ತೀರ್ಥಯಾತ್ರೆಗಳಿಗೆ ವಿಷೇಶ ರೈಲು, ನಗದು ರಹಿತ ಟಿಕೆಟ್ ಬುಕಿಂಗ್ ಹೆಚ್ಚಳ, ಇ-ಟಿಕೆಟ್ ಗಳಿಗೆ ಸೇವಾ ಶುಲ್ಕ ರದ್ದು, ರೈಲ್ವೆ ಸೈಟ್ ನಲ್ಲಿ ಟಿಕೆಟ್ ಬುಕ್ ಮಾಡಿದರೆ ಸರ್ವೀಸ್ ಚಾರ್ಜ್ ವಿನಾಯಿತಿ, ರೈಲ್ವೆ ಮಾರ್ಗ ಅಭಿವೃದ್ಧಿಗೆ 1.31ಲಕ್ಷ ಕೋಟಿ ರೂಪಾಯಿ ಅನುದಾನ, ದೇಶದಲ್ಲಿ 70 ರೈಲ್ವೆ ಯೋಜನೆಗಳಿಗೆ ಅಸ್ತು, 25 ರೈಲ್ವೆ ನಿಲ್ದಾಣ ನವೀಕರಣ, ದೂರು ನೀಡಿದರೆ, ತಕ್ಷಣ ರೈಲ್ವೆ ಬೋಗಿಗಳ ಶುಚಿತ್ವಕ್ಕೆ ಅವಕಾಶ, ರೈಲ್ವೆ ವೆಬ್ ಸೈಟ್ ನಲ್ಲಿ ಟಿಕೆಟ್ ಬುಕ್ ಮಾಡಿದರೆ ಸರ್ವಿಸ್ ಚಾರ್ಜ್ ಇಲ್ಲ. 3500 ಕಿಮೀ ಹೊಸ ರೈಲ್ವೆ ಹಳಿಗಳಿಗೆ ಯೋಜನೆ ರೂಪಿಸಲಾಗಿದೆ ಎಂದಿದ್ದಾರೆ.  ಬಂಡವಾಳ ಹೂಡಿಕೆ ಸುರಕ್ಷತೆಗೆ ಒತ್ತು. ಎಸ್ ಸಿ ಎಸ್ ಟಿ ನಿಧಿಯಲ್ಲಿ ಶೇ.35 ರಷ್ಟು ಹೆಚ್ಚಳ, ಮಹಿಳಾ ಕಲ್ಯಾಣಕ್ಕೆ 1.48 ಲಕ್ಷ ಕೋಟಿ.  5 ಕಡೆ ಹೊಸ ಪ್ರವಾಸೋದ್ಯಮ ವಲಯಗಳ ಸ್ಥಾಪನೆ, ಹಿರಿಯ ನಾಗರಿಕರಿಗೆ ಆಧಾರ್ ಕಾರ್ಡ್ ಆಧಾರಿತ ಆರೋಗ್ಯ ಕಾರ್ಡ್, ಪಿಂಚಣಿ ಗ್ಯಾರೆಂಟಿ, ಶಾಲೆಗಳಲ್ಲಿ ಕಲಿಕೆಗೆ ಹೊಸ ಸುಧಾರಿತ ವ್ಯವಸ್ಥೆ, ಕಲಿಕೆ ಸುಧಾರಣೆಗೆ ಇನ್ನೋವೇಶನ್ ಫಂಡ್, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಜಾರಿ. ಶಿಕ್ಷಣದಲ್ಲಿ ತಂತ್ರಜ್ಞಾನ ಅಳವಡಿಕೆ, ಮಹಿಳಾ ಶಕ್ತಿ ಕೇಂದ್ರ ಸ್ಥಾಪನೆ 14 ಲಕ್ಷ ಅಂಗನವಾಡಿಗಳ ಸ್ಥಾಪನೆ ಮಾಡಲಾಗುವುದು ಎಂದಿದ್ದಾರೆ.
ಗ್ರಾಮೀಣ ಭಾಗದಲ್ಲಿ ಮನೆ ನಿರ್ಮಾಣಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲ ರಿಯಾಲ್ಟಿ ವಲಯಕ್ಕೆ ಮೂಲಭೂತ ಸೌಕರ್ಯ ಸ್ಥಾನಮಾನ, ಸಿಬಿಎಸ್ ಸಿ, ಐಸಿಎಸ್ ಸಿ ಪ್ರವೇಶ ಪರೀಕ್ಷೆ ರದ್ದು. ಸಣ್ಣ ನೀರಾವರಿಗೆ ನಬಾರ್ಡ್ ನಿಂದ 5 ಕೋಟಿ ಸ್ಕಿಲ್ ಇಂಡಿಯಾದಡಿ 100 ಕೌಶಲ್ಯ ಅಭಿವೃದ್ಧಿ ಕೇಂದ್ರ ಘೋಷಿಸಿದ್ದಾರೆ.

ಗ್ರಾಮೀಣ ಭಾಗಕ್ಕೆ  ಅಚ್ಛೇದಿನ್: 2018ರ ತಿಂಗಳ ಒಳಗೆ ಎಲ್ಲಾ ಗ್ರಾಮಗಳಿಗೂ ವಿದ್ಯುತ್ ಪೂರೈಕೆ ಗುರಿ ಹೊಂದಲಾಗಿದ್ದು, ಗುಡಿಸಲು ಮುಕ್ತ ಹಳ್ಳಿಗಳ 1 ಕೋಟಿ ಗ್ರಾಮೀಣ ಜನತೆಯನ್ನು ಬಡತನದಿಂದ ಹೊರತರುವ ಗುರಿಯಿದೆ ಎಂದಿದ್ದಾರೆ. ಸಂಕಲ್ಪ ಯೋಜನೆಗಾಗಿ 2 ಸಾವಿರ ಕೋಟಿ, ಚರ್ಮೋದ್ಯಮ ವಲಯದಲ್ಲೂ ಉದ್ಯೋಗ ಸೃಷ್ಟಿ. 2019ರ ವೇಳೆಗೆ 50 ಸಾವಿರ ಗ್ರಾಮ ಪಂಚಾಯಿತಿಗಳಲ್ಲಿ ಬಡತನ ನಿರ್ಮೂಲನೆ ಗುರಿ ಹೊಂದಲಾಗಿದ್ದು, 50 ಸಾವಿರ ಗ್ರಾಮ ಪಂಚಾಯಿತಿಗಳು ಬಡತನ ಮುಕ್ತ ನರೇಗಾ ಯೋಜನೆಗೆ ಅನುದಾನ ಹೆಚ್ಚಳ ಮಾಡಲಾಗಿದೆ. 2018ರ ತಿಂಗಳ ಒಳಗೆ ಎಲ್ಲಾ ಗ್ರಾಮಗಳಿಗೂ ವಿದ್ಯುತ್ ಪೂರೈಕೆ ಗುರಿ ಹೊಂದಲಾಗಿದೆ ಎಂದಿದ್ದಾರೆ.
ಪ್ರಾಮಾಣಿಕ ತೆರಿಗೆದಾರರನ್ನು ಕೇಂದ್ರ ಸರ್ಕಾರ ಗೌರವದಿಂದ ನಡೆಸಿಕೊಳ್ಳಲಿದೆ ಎಂದಿದ್ದಾರೆ.

 

 

Leave a Reply

comments

Related Articles

error: