
ಕರ್ನಾಟಕಪ್ರಮುಖ ಸುದ್ದಿ
ರಮೇಶ್ ಜಾರಕಿಹೋಳಿ ಹೋದ್ರೆ ಹೋಗಲಿ, ಸರ್ಕಾರಕ್ಕೇನೂ ಆಗಲ್ಲ! ಶಾಮನೂರು ವಿಶ್ವಾಸ
ದಾವಣಗೆರೆ (ಏ.23): ರಮೇಶ್ ಜಾರಕಿ ಹೊಳಿ ಬಿಜೆಪಿಗೆ ಹೋಗುವುದಾದರೆ ಹೋಗಲಿ ಅದರಿಂದ ಏನೂ ವ್ಯತ್ಯಾಸವಾಗುವುದಿಲ್ಲ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂದಿದ್ದರೂ ರಮೇಶ್ ಜಾರಕಿ ಹೊಳಿ ಬಿಜೆಪಿ ಹೋಗೋ ಗಿರಾಕಿನೇ ಎಂದರು.
ಅವರು ಬಿಜೆಪಿಗೆ ಹೋಗುವುದರಿಂದ ಮೈತ್ರಿ ಸರ್ಕಾರ ಏನು ಪತನವಾಗುವುದಿಲ್ಲ. ಪಕ್ಷ ಬಿಡ್ತೀನಿ, ಬಿಡ್ತೀನಿ ಅಂತ ಹೇಳ್ತಾನೇ ಇದಾರೆ, ಇನ್ನು ಪಕ್ಷ ತೊರೆದಿಲ್ಲ, ಹೋಗೋದಿದ್ರೆ ಹೋಗ್ಲಿ; ಬಿಜೆಪಿಯವರು ಮೈತ್ರಿ ಸರ್ಕಾರ ಪತನವಾಗುತ್ತೆ ಎಂದು ಹೇಳ್ತಾನೆ ಬಂದಿದ್ದಾರೆ, ಅವರ್ ಹೇಳಿದ್ದೊಂದೂ ಆಗುವುದಿಲ್ಲ ಎಂದರು.
ರಮೇಶ್ ಜಾರಕಿ ಹೊಳಿ ಅಡ್ವಾನ್ಸ್ ತಗೊಂಡಿದ್ದಾರೆ ಅದಕ್ಕೆ ರಾಜೀನಾಮೆ ಕೊಡ್ತೀನಿ ಅಂತಾರೆ. ಯಾರ್ ಹೋದ್ರೂ ಏನೂ ಆಗೋದಿಲ್ಲ ಎಂದು ಶಾಮನೂರು ಶಿವಶಂಕರಪ್ಪ ಹೇಳಿದರು. (ಎನ್.ಬಿ)