ಮೈಸೂರು

ಮೈಸೂರು ಶಿಕ್ಷಣ ಮೇಳ ‘ಫೆ.3 ರಿಂದ 5ರ’ವರೆಗೆ

ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಒಂದೇ ಸೂರಿನಡಿ ತರುವ ವಿನೂತನ ‘ಮೈಸೂರು ಶಿಕ್ಷಣ ಮೇಳ-2017’ ಅನ್ನು ಪ್ರಪ್ರಥಮ ಬಾರಿಗೆ ಮೈಸೂರಿನಲ್ಲಿ ಫೆ.3 ರಿಂದ 5ರವರೆಗೆ ಆಯೋಜಿಸಲಾಗಿದೆ ಎಂದು ಪ್ರಗತಿ ವಿದ್ಯಾಲಯದ ವೆಂಕಟೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಬಗ್ಗೆ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಸಿಬಿಎಸ್‍ಇ, ಐಸಿಎಸ್‍ಇ ಹಾಗೂ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ ಹಾಗೂ ಚಿರಾಗ್ ಆ್ಯಡ್ಸ್ ಸಹಯೋಗದಲ್ಲಿ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಫೆ.3ರಂದು ಬೆಳಿಗ್ಗೆ 10ಕ್ಕೆ ಶಾಸಕ ವಾಸು ಮೇಳಕ್ಕೆ ಚಾಲನೆ ನೀಡುವರು.

ಪ್ರತಿ ದಿನ ಬೆಳಿಗ್ಗೆ 10 ರಿಂದ ರಾತ್ರಿ 9ರವರೆಗೆ ನಡೆಯುವ ಮೇಳದಲ್ಲಿ ಶಿಕ್ಷಕರಿಗೆ ವಿದ್ಯಾರ್ಥಿಗಳೊಂದಿಗೆ ಸಹಜ ಸೌಜನ್ಯದ ನಡವಳಿಕೆ ಬಗ್ಗೆ ಮತ್ತು ವಿದ್ಯಾರ್ಥಿಗಳಿಗೆ ಸಂಪನ್ಮೂಲಗಳ ಸದ್ಬಳಕೆ, ವ್ಯಕ್ತಿತ್ವ ವಿಕಸನದ ವಿಶೇಷ ತರಬೇತಿ ಸೇರಿದಂತೆ ಪೋಷಕರೊಂದಿಗೆ ಸಂವಾದ ವಿಚಾರಗೋಷ್ಠಿ ಹಾಗೂ ಕಾರ್ಯಾಗಾರ ಹಾಗೂ ಪ್ರಾಂಶುಪಾಲರಿಗೆ ಸನ್ಮಾನವನ್ನು ಮೇಳದಲ್ಲಿ ಆಯೋಜಿಸಲಾಗಿದೆ.

ಮೇಳದಲ್ಲಿ ಕಟ್ಟಡ ವಿನಾಸ್ಯ, ಶಾಲೆಯ ಗುಣಮಟ್ಟ, ಶಿಕ್ಷಣದಲ್ಲಿ ಪೋಷಕರ ಪಾತ್ರ, ವ್ಯಕ್ತಿತ್ವ ವಿಕಸನ, ಮಕ್ಕಳ ಮನೋವಿಜ್ಞಾನದ ಬಗ್ಗೆ ಆಪ್ತ ಸಮಾಲೋಚನೆ ಸೇರಿದಂತೆ ತಜ್ಞರು ಹಾಗೂ ವಿದ್ಯಾ ಪರಿಣಿತರು ನಡೆಸುವ ವಿಚಾರ ಸಂಕಿರಣಗಳಲ್ಲಿ ಪಾಲ್ಗೊಳ್ಳಲು 60ಕ್ಕೂ ವಿದ್ಯಾ ಸಂಸ್ಥೆಗಳು ಹೆಸರು ನೋಂದಾಯಿಸಿಕೊಂಡಿದ್ದು ಭಾಗವಹಿಸಲಿಚ್ಛಿಸುವ ಪೋಷಕರು ಮತ್ತು ಶಾಲಾ ಕಾಲೇಜುಗಳು ಮುಂಗಡ ಹೆಸರು ನೋಂದಾಯಿಸಿಕೊಳ್ಳಲು ಹಾಗೂ ವಿವರಗಳಿಗಾಗಿ ಎಸ್.ವಿವೇಕ್ (98806 37618) ವೆಂಕಟೇಶ್ (99804 11288) ಇವರುಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಚಿರಾಗ್ ಆ್ಯಡ್ಸ್ ನ ರವೀಂದ್ರ ಸ್ವಾಮಿ, ಪ್ರಗತಿ ವಿದ್ಯಾಲಯದ ರಾಧಾಕೃಷ್ಣ ಸಂತೋಷ್ ಹಾಗೂ ಸ್ವರೂಪಿಣಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

comments

Related Articles

error: