ಮೈಸೂರು

ಜೀವವಿಮಾ ಪ್ರತಿನಿಧಿಗಳ ಕಾರ್ಯಾಗಾರ ‘ಫೆ.6ರಂದು’

ಮೈಸೂರು ವಿಭಾಗದ ಅಖಿಲ ಭಾರತೀಯ ಜೀವವಿಮಾ ಪ್ರತಿನಿಧಿಗಳ ಒಕ್ಕೂಟದಿಂದ ಪ್ರತಿನಿಧಿಗಳ ಶೈಕ್ಷಣಿಕ ಕಾರ್ಯಾಗಾರವನ್ನು ಇದೇ ಫೆ.6ರಂದು ಬೆಳಿಗ್ಗೆ 10ಕ್ಕೆ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ವಿ.ಜಿ.ಅಶೋಕ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು ವಿಭಾಗೀಯ ವ್ಯವಸ್ಥಾಪಕ ಕೆ.ಅನಂತದ್ಮನಾಭ ಉದ್ಘಾಟಿಸುವರು, ಅಧ್ಯಕ್ಷ ವಿ.ಜಿ.ಅಶೋಕ್ ಅಧ್ಯಕ್ಷತೆ ವಹಿಸುವರು, ಪ್ರಾಂತೀಯ ವ್ಯವಸ್ಥಾಪಕ ಮಹಮ್ಮದ್ ಅಜೀಬುದ್ದೀನ್, ಎಸ್.ಬಿ.ಶ್ರೀನಿವಾಸಾಚಾರಿ, ಜೂಲಿಯನ್ ಡಿಸೋಜಾ, ಸಿಂಗಾರಪ್ಪು ಶ್ರೀನಿವಾಸ, ಡಿ.ರಾಮಚಂದ್ರ, ಜಿ.ಚಂದ್ರಶೇಖರ್ ಪಾಲ್ಗೊಳ್ಳುವರು ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಬಿ.ಪಿ.ವಿಜಯ್ ಹಾಗೂ ಎಸ್.ಪ್ರಸನ್ನಪ್ರಕಾಶ್ ಭಾಗವಹಿಸುವರು ಎಂದು ತಿಳಿಸಿದರು. ಕಾರ್ಯಾಗಾರದಲ್ಲಿ ಮೈಸೂರು ಮಂಡ್ಯ,ಚಾಮರಾಜನಗರ ಸೇರಿದಂತೆ ಒಟ್ಟು 22 ಶಾಖೆಗಳ ಸುಮಾರು 1500 ಪ್ರತಿನಿಧಿಗಳು ಪಾಲ್ಗೊಳ್ಳುವರು, ಕಾರ್ಯಾಗಾರದಲ್ಲಿ ಪ್ರತಿನಿಧಿಗಳಿಗೆ ಸೀಮಿತ ಅವಧಿಯಲ್ಲಿ ಗುರಿಸಾಧನೆ, ಆರ್ಥಿಕ ವ್ಯವಹಾರ ಸುಧಾರಣೆ, ಸದಾ ಕ್ರಿಯಾಶೀಲತೆಗೆ ಪೂರಕವಾಗುವ ತರಬೇತಿಯನ್ನು ನೀಡಲಾಗುವುದು ಎಂದು ತಿಳಿಸಿದರು.

ಕಾರ್ಯದರ್ಶಿ ಡಿ.ಪುಟ್ಟಸ್ವಾಮಿ, ಖಜಾಂಚಿ ಕೆ.ಆರ್.ಸುಬ್ರಹ್ಮಣಿ, ವಿ.ಜಿ.ರಾಧಾ, ಸ್ವಾಮಿಗೌಡ, ಹಾಸನ ವಿಭಾಗದ ರಾಮಚಂದ್ರ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

 

 

 

Leave a Reply

comments

Related Articles

error: