ಪ್ರಮುಖ ಸುದ್ದಿಮನರಂಜನೆ

ನನ್ನ ತಾಯಿ ನನಗೆ ಈಗಲೂ ಹಣ ನೀಡುತ್ತಾರೆ, ನಾನು ಪ್ರಧಾನಿಯಾಗುತ್ತೇನೆಂದು ಯಾವತ್ತೂ ತಿಳಿದಿರಲಿಲ್ಲ: ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಜೊತೆ ಪ್ರಧಾನಿ ನರೇಂದ್ರ ಮೋದಿ ಮನದಾಳದ ಮಾತು

ದೇಶ(ನವದೆಹಲಿ)ಏ.24:- ಬಾಲಿವುಡ್ ನ ಖಿಲಾಡಿ,ಅ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮುಕ್ತವಾಗಿ, ನ್ಯಾಯೋಚಿತವಾಗಿ, ರಾಜಕೀಯವಲ್ಲದ  ಸಂದರ್ಶನ ನಡೆಸಿದ್ದಾರೆ.

ಲೋಕಕಲ್ಯಾಣ್ ಮಾರ್ಗದಲ್ಲಿರುವ ಪ್ರಧಾನಮಂತ್ರಿ ನಿವಾಸದಲ್ಲಿ ಸಂದರ್ಶನ ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಜೀವನಕ್ಕೆ ಸಂಬಂಧಿಸಿದ ಅನೇಕ ಅಂಶಗಳನ್ನು ಇಲ್ಲಿ ಚರ್ಚಿಸಿದ್ದಾರೆ. ಸಂಭಾಷಣೆಯಲ್ಲಿ ಮೋದಿಯವರು ಅವರ ಕುಟುಂಬ, ಆಹಾರ ಮತ್ತು ವಿನೋದದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಸಂದರ್ಶನದಲ್ಲಿ ಮೊದಲು ತಮ್ಮ ಚಾಲಕನ ಮಗಳ ಪ್ರಶ್ನೆಯನ್ನು ನರೇಂದ್ರ ಮೋದಿಯವರಲ್ಲಿ ಕೇಳಿದ್ದು, ನೀವು ಮಾವಿನ ಹಣ್ಣನ್ನು ತಿನ್ನುತ್ತೀರಾ?

ತಿನ್ನುತ್ತೇನೆ. ಚಿಕ್ಕವನಿದ್ದಾಗ ಗದ್ದೆಗೆ ಓಡಿ ಹೋಗುತ್ತಿದ್ದೆ. ನನಗೆ ಮರದಲ್ಲಿಯೇ ಮಾಗಿದ ಮಾವಿನ ಹಣ್ಣನ್ನು ತಿನ್ನುವುದೆಂದರೆ ಬಲು ಇಷ್ಟ. ಸಮಯ ಮುಂದಕ್ಕೆ ಸಾಗಿದಂತೆ ರಸವನ್ನಷ್ಟೇ ಸೇವಿಸಲು ಆರಂಭಿಸಿದೆ. ಆದರೆ ಈಗ ನಿಯಂತ್ರಿಸಬೇಕಾಗುತ್ತದೆ ಎಂದಿದ್ದಾರೆ.  ನೀವೇನಾದರೂ ಪ್ರಧಾನಮಂತ್ರಿಯಾಗುತ್ತೇನೆಂದು ಯೋಚಿಸಿದ್ದೀರಾ? ಎಂದಿದ್ದಕ್ಕೆ ನನಗೆ ಯಾವತ್ತು ನಾನು ಪ್ರಧಾನಮಂತ್ರಿಯಾಗಬೇಕೆನ್ನುವ ವಿಚಾರ ಬಂದಿರಲಿಲ್ಲ ಎಂದರು. ನೀವು ಸನ್ಯಾಸಿಯಾಗಬಯಸಿದ್ದೀರಾ? ಸೇನೆ ಸೇರಲು ಇಚ್ಛಿಸಿದ್ದೀರಾ? 1962ರ ಯುದ್ಧದ ಸಮಯದಲ್ಲಿ ಮೆಹಸಾಣಾ ನಿಲ್ದಾಣಕ್ಕೆ ಯೋಧರು ಹೋಗುತ್ತಿದ್ದ ಸಂದರ್ಭ ನಾನೂ ಕೂಡ ಹೋಗುತ್ತಿದ್ದೆ. ಗುಜರಾತ್ ನಲ್ಲಿ ಸೈನಿಕ ಶಾಲೆಯ ಕುರಿತು ತಿಳಿಯುವುದು ಮತ್ತು ಅದರಲ್ಲಿ ಪ್ರವೇಶ ಪಡೆಯುವುದು ನನ್ನ ಆಸೆಯಾಗಿತ್ತು. ನಮ್ಮ ವಠಾರದಲ್ಲಿ ಪ್ರಾಂಶುಪಾಲರೊಬ್ಬರಿದ್ದರು. ನಾನು ಅವರ ಹತ್ತಿರ ಹೋದೆ. ನಾನು ಯಾವುದೇ ದೊಡ್ಡ ವ್ಯಕ್ತಿಯನ್ನು ಭೇಟಿಯಾಗಲು ಅಳುಕುತ್ತಿರಲಿಲ್ಲ. ನಾನು ಪ್ರಧಾನಿಯಾಗುತ್ತೇನೆಂದು ಯಾವತ್ತೂ ಯೋಚಿಸಿರಲಿಲ್ಲ ಎಂದು ತಿಳಿಸಿದರು. ನಿಮಗೆ ಯಾವತ್ತಾದರೂ ಸಿಟ್ಟು ಬಂದಿದ್ದಿದೆಯಾ? ಯಾರ ಮೇಲೆ ಮತ್ತು ಅದನ್ನು ಹೇಗೆ ಹೊರಹಾಕುತ್ತೀರಿ? ಎಂದಿದ್ದಕ್ಕೆ ನನಗೆ ಕೋಪ ಬರುವುದಿಲ್ಲವೆಂದರೆ ಕೆಲವರಿಗೆ ಆಶ್ಚರ್ಯವಾಗಬಹುದು. ನೀವು ಒಳ್ಳೆಯ ವಿಷಯಗಳತ್ತ ಮನಸ್ಸನ್ನು ಕೇಂದ್ರೀಕರಿಸಿದರೆ ಋಣಾತ್ಮಕ ವಿಷಯಗಳು ತಮ್ಮಷ್ಟಕ್ಕೆ ನಿಲ್ಲುತ್ತವೆ. ಪ್ಯೂನ್ ನಿಂದ ಆರಂಭವಾಗಿ ಸಚಿವರ ವರೆಗೂ ನನಗೆ ಕೋಪವನ್ನು ತೋರಿಸಿಕೊಳ್ಳಲು ಅವಕಾಶವೇ ಸಿಗಲಿಲ್ಲ. ನನ್ನೊಳಗೆ ಕೋಪವಿರಬಹುದು. ಆದರೆ ನಾನದನ್ನು ತಡೆಯುತ್ತೇನೆ ಎಂದಿದ್ದಾರೆ. ನೀವು ನಿಮ್ಮ ತಾಯಿ ಮತ್ತು ಕುಟುಂಬಿಕರೊಂದಿಗೆ ಇರಲು ಬಯಸುವುದಿಲ್ಲವೇ? ಎಂದು ಕೇಳಿದ್ದಕ್ಕೆ ನಾನು ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಮನೆಯನ್ನು ಬಿಟ್ಟೆ. ಯಾವುದೇ ಮೋಹವುಳಿದಿಲ್ಲ. ಮೊದಲು ಮನೆಯಿಂದ ಹೊರಬಂದಾಗ ಬೇಸರವಾಗುತ್ತಿತ್ತು. ಈಗ ಈ ಜೀವನಕ್ಕೆ ಹೊಂದಿಕೊಂಡಿದ್ದೇನೆ.ತಾಯಿಯನ್ನು ದೆಹಲಿಗೆ ಬಂದು ನೆಲೆಸುವಂತೆ ಹೇಳಿದೆ. ನನ್ನ ಮಾತಿಗೆ ಇಲ್ಲ ಎನ್ನದೇ ಬಂದು ಉಳಿದರು. ಒಂದೆರಡು ದಿನ ರಾತ್ರಿ ಭೋಜನ ಒಟ್ಟಿಗೆ ಮಾಡಿದೆವು. ನನ್ನ ಕೆಲಸದ ಒತ್ತಡದಿಂದ ನಾನು ಬರುವುದು ತಡವಾದರೆ ಅವರು ಚಿಂತೆಗೀಡಾಗುತ್ತಾರೆ. ಅವರು ಗುಜರಾತ್ ಗೆ ತೆರಳಲು ಬಯಸಿದರು. ಹಾಗಾಗಿ ಅವರ ಜೊತೆ ಇರಲು ಆಗುತ್ತಿಲ್ಲ ಎಂದಿದ್ದಾರೆ.

ನಿಮ್ಮ ವೇತನದ ಸ್ವಲ್ಪ ಭಾಗವನ್ನು ತಾಯಿಗೆ ನೀಡುತ್ತೀರಾ ಎಂದು ಕೇಳಿದಾಗ ನನ್ನ ತಾಯಿ ನನಗೆ ಈಗಲೂ ಹಣ ನೀಡುತ್ತಾರೆ. ಅವರು ನನ್ನಿಂದ ಏನನ್ನೂ ಬಯಸುವುದಿಲ್ಲ. ನಾನು ಅವರನ್ನು ಭೇಟಿಯಾದಾಗಲೆಲ್ಲ ನನಗೆ ಹಣ ನೀಡುತ್ತಾರೆ. ಪ್ರಧಾನಿಯಾಗಿ, ಮುಖ್ಯಮಂತ್ರಿಯಾಗಿದ್ದಾಗಲೂ ನಾನೆಂದೂ ಸರ್ಕಾರದ ಹಣವನ್ನು ಬಳಸಿಲ್ಲ ಎಂದಿದ್ದಾರೆ.

ನೀವು ಸಿನಿಮಾ ನೋಡುತ್ತೀರಾ? ನೀವು ನೋಡಿದ ಕೊನೆಯ ಸಿನಿಮಾ ಯಾವುದು ಎಂದು ಕೇಳಿದ್ದಕ್ಕೆ ಅಮಿತಾಬ್ ಬಚ್ಚನ್ ಅವರ ಜೊತೆ ‘ಪಾ’ ಚಿತ್ರ ನೋಡಿದ್ದೆ. ಮುಖ್ಯಮಂತ್ರಿಯಾಗಿದ್ದಾಗ ಅನುಪಮ್ ಜಿ ಅವರೊಂದಿಗೆ ಭಯೋತ್ಪಾದನೆ ಕುರಿತ ಚಿತ್ರ ‘ಎ ವೆಡ್ನ್ಸಡೇ’ ನೋಡಿದ್ದೆ. ಪ್ರಧಾನಿಯಾದ ಬಳಿಕ ಚಿತ್ರ ನೋಡಿಲ್ಲ. ಸ್ವಚ್ಛತೆಯ ಕುರಿತು ನಿರ್ಮಾಣವಾದ ;ಟಾಯ್ಲೆಟ್ ಏಕ್ ಪ್ರೇಮ್ ಕಥಾ’ ಚಿತ್ರವನ್ನು ನೋಡುವಂತೆ ಬಹಳ ಜನರಿಗೆ ಹೇಳಿದ್ದೆ. ಆದರೆ ನಾನೇ ಸ್ವತಃ ಚಿತ್ರ ನೋಡಲು ಸಾಧ್ಯವಾಗಿಲ್ಲ. ಹಲವರಿಂದ ಚಿತ್ರ ಕುರಿತು ಪ್ರಶಂಸೆಯನ್ನೂ ಕೇಳಿದ್ದೇನೆ ಎಂದಿದ್ದಾರೆ.

ನೀವು ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಆಗಿದ್ದೀರಾ? ಇಂದು ನಡೆಯುತ್ತಿದೆ ಎಂಬುದನ್ನು ನೋಡುತ್ತೀರಾ ಎಂದಿದ್ದಕ್ಕೆ ಸಾಮಾಜಿಕ ಜಾಲತಾಣವನ್ನು ನೋಡುತ್ತೇನೆ. ಹೊರಗೇನಾಗುತ್ತಿದೆ ಎಂಬುದು ತಿಳಿಯಲಿದೆ. ನಿಮ್ಮ ಮತ್ತು ಟ್ವಿಂಕಲ್ ಖನ್ನಾಜಿ ಅವರ ಟ್ವೀಟರ್ ನೋಡುತ್ತೇನೆ. ಅವರು ಯಾವ ರೀತಿ ನನ್ನ ಮೇಲೆ ಕೋಪ ಹೊರಹಾಕುತ್ತಾರೋ ಆಗ ನಾನು ನಿಮ್ಮ ಕುಟುಂಬದಲ್ಲಿ ಶಾಂತಿ ನೆಲೆಸಿದೆ ಎಂದು ತಿಳಿಯುತ್ತೇನೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಅಕ್ಷಯ್ ಕುಮಾರ್ ಟ್ವೀಟರ್ ನಲ್ಲಿ ನಾನು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದೇನೆ. ಇದಕ್ಕೂ ಮೊದಲು ನಾನು ಯಾವತ್ತೂ ಈ ರೀತಿ ಮಾಡಿಲ್ಲ ಎಂದು ತಿಳಿಸಿದ್ದರು. ಆ ಟ್ವೀಟರ್ ನಲ್ಲಿ ನಟ ಅಕ್ಷಯ್ ತಿಳಿಸಿದ್ದು ಇದೇ ಎಂದು ಅಭಿಮಾನಿಗಳಿಗೀಗ ಅರ್ಥವಾಗಿದೆ. ನಟ ಅಕ್ಷಯ್ ಕುಮಾರ್ ಮತ್ತೊಮ್ಮೆ ‘ಖಿಲಾಡಿ’ ಆಗಿಬಿಟ್ಟರು. (ಎಸ್.ಎಚ್)

Leave a Reply

comments

Related Articles

error: