ಮೈಸೂರು

ಆಗಸ್ಟ್ 27-28: ಸಮೂಹ ಗಾಯನ, ರಸಪ್ರಶ್ನೆ ಸ್ಪರ್ಧೆ

ಸರಸ್ವತಿಪುರಂನ ವಿಜಯ ವಿಠ್ಠಲ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ಆಗಸ್ಟ್ 27ರಂದು ಬೆಳಿಗ್ಗೆ 9.30ಕ್ಕೆ ರಾಷ್ಟ್ರೀಯ ಸಮೂಹ ಗಾಯನ ಸ್ಪರ್ಧೆ -2016 ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ನೇತ್ರಾವತಿ ಗ್ರಾಮೀಣ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ಡಿ.ಕಿಣಿ ನೆರವೇರಿಸಲಿದ್ದು, ಖ್ಯಾತ ಕೈಗಾರಿಕೋದ್ಯಮಿ ಡಾ.ಎಂ.ಜಗನ್ನಾಥ ಶೆಣೈ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಅಧ್ಯಕ್ಷತೆಯನ್ನು ಭಾರತ ವಿಕಾಸ ಪರಿಷದ್ ಅಧ್ಯಕ್ಷ ಡಾ.ಬಿ.ಎನ್. ರಂಗನಾಥ ರಾವ್ ವಹಿಸಲಿದ್ದು, ಸಂಜೆ 4.30ಕ್ಕೆ ಬಹುಮಾನ ವಿತರಣೆಯನ್ನು ವಿಜಯವಿಠ್ಠಲ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸತ್ಯ ಪ್ರಸಾದ್ ನಡೆಸಿಕೊಡಲಿದ್ದಾರೆ.

ಆಗಸ್ಟ್ 28ರಂದು ಭಾರತ್ ಕೋ ಜಾನೋ ರಸಪ್ರಶ್ನೆ ಸ್ಪರ್ಧೆ-2016 ಬೆಳಿಗ್ಗೆ 9.30ರಿಂದ ನಡೆಯಲಿದ್ದು, ಸಂಜೆ 4 ಗಂಟೆಯ ಸಮಾರೋಪ ಸಮಾರಂಭದಲ್ಲಿ ಅ.ಚ.ಅಶೋಕ ಕುಮಾರ್ ಸಮಾರೋಪ ನುಡಿಯನ್ನಾಡಲಿದ್ದಾರೆ. ಜಿ.ಎಸ್.ಎಸ್.ಯೋಗಿಕ್ ಫೌಂಡೇಶನ್ ಸಂಸ್ಥಾಪಕ ಡಿ.ಶ್ರೀಹರಿ ಬಹುಮಾನ ವಿತರಿಸಲಿದ್ದಾರೆ.

Leave a Reply

comments

Related Articles

error: