ಮೈಸೂರು

ಒಣಕಸ ಸಂಗ್ರಹಣಾ ಘಟಕದಲ್ಲಿ ವ್ಯಾಪಾರ : ಅನುಮತಿ ನೀಡಿದವರಾರು ಸಾರ್ವಜನಿಕರಿಂದ ಪ್ರಶ್ನೆ

ಮೈಸೂರು,ಏ.24:- ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಲವು ವಾರ್ಡ್ ಗಳಲ್ಲಿ ಒಣಕಸ ಸಂಗ್ರಹಣಾ ಘಟಕ ಮಾಡಿದ್ದು ಅಲ್ಲಿ ಒಣ ಕಸ ಬದಲು ಕಬ್ಬಿಣ ,ಇತ್ಯಾದಿ  ವಸ್ತುಗಳನ್ನು ಖರೀದಿಸಲಾಗುವುದು ಎಂದು ಫಲಕ ನೇತು ಹಾಕಿ ವ್ಯಾಪಾರ ನಡೆಸಲಾಗುತ್ತಿದೆ.

ಕುವೆಂಪುನಗರ ಶ್ರೀರಾಮಪುರ ಬಡಾವಣೆಗಳಲ್ಲಿ ಅಲ್ಲದೇ ಹಲವು ಕಡೆ ಮಹಾನಗರ ಪಾಲಿಕೆಯವರು ಈ ರೀತಿ ಒಣಕಸ ಸಂಗ್ರಹಣಾ ಘಟಕವನ್ನು ತೆರೆದಿದ್ದಾರೆ. ಆದರೆ ಇಲ್ಲಿ   ಪೇಪರ್, ಬಿಯರ್ ಬಾಟಲ್, ಕಬ್ಬಿಣ, ಬುಕ್ಸ್ ಸೇರಿದಂತೆ ಗುಜರಿಗೆ ಹಾಕುವಂತಹ ವಸ್ತುಗಳನ್ನು ಕೊಳ್ಳಲಾಗುತ್ತಿದೆ. ಈ ರೀತಿ ಕಾರ್ಯನಿರ್ವಹಿಸಲು ಪಾಲಿಕೆ ಅನುಮತಿ ನೀಡಿದೆಯೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಯಾವುದೇ ಅನುಮತಿಯಿಲ್ಲದೇ ಇದೇ ರೀತಿ ಮುಂದುವರಿಸಿಕೊಂಡು ಹೋದಲ್ಲಿ ಶಾಪ್ ನಲ್ಲಿರುವವರು ಇದನ್ನೇ ಉದ್ಯಮವನ್ನಾಗಿಸಿಕೊಂಡು ಪಾಲಿಕೆಗೆ ದ್ರೋಹವೆಸಗಬಹುದು. ಕೂಡಲೇ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: