ಮನರಂಜನೆಮೈಸೂರು

ಫೆ.6 ರಿಂದ ತ್ರಿವೇಣಿ ಸಂಗಮ ಧಾರಾವಾಹಿ ಆರಂಭ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಫೆಬ್ರವರಿ 6ರಿಂದ ಆರಂಭವಾಗಲಿರುವ ತ್ರಿವೇಣಿ ಸಂಗಮ ಧಾರಾವಾಹಿಯ ಪೋಸ್ಟರ್ ನ್ನು ಮೈಸೂರಿನಲ್ಲಿ ಬಿಡುಗಡೆಗೊಳಿಸಲಾಯಿತು.

ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟಿ ಅನುಪ್ರಭಾಕರ್, ಹಾಗೂ ನಟ ರಾಜೇಶ್ ಪೋಸ್ಟರ್ ಬಿಡುಗಡೆಗೊಳಿಸಿದರು. ಈ ಸಂದರ್ಭ ನಿರ್ಮಾಪಕ ಪಿ.ಎಲ್ ಸೋಮಶೇಖರ್ ಮಾತನಾಡಿ ಫೆಬ್ರವರಿ 6ರಿಂದ ಸಂಜೆ 7ಗಂಟೆಗೆ  ಸ್ಟಾರ್ ಸುವರ್ಣ ವಾಹಿನಿಯಲ್ಲಿ ತ್ರಿವೇಣಿ ಸಂಗಮ ಧಾರಾವಾಹಿ ಪ್ರಸಾರವಾಗಲಿದೆ. ನಟಿ ಅನುಪ್ರಭಾಕರ್, ನಟರಂಗ ರಾಜೇಶ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಕುಟುಂಬದವರೆಲ್ಲರೂ ಕುಳಿತು ನೋಡಬಹುದಾದ ಹೃದಯಸ್ಪರ್ಶಿ ಧಾರಾವಾಹಿ ಇದಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಕೆಂಪೇಗೌಡ, ನಿರ್ದೇಶಕ ತಿಲಕ್, ಕ್ರಿಯೇಟಿವ್ ಹೆಡ್ ಎಸ್.ಗೋವಿಂದು , ಇನ್ನೋರ್ವ ನಿರ್ಮಾಪಕ ಸತೀಶ್ ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: