ಮೈಸೂರು

‘ಹೆಜ್ಜೆ-ಗೆಜ್ಜೆ ‘ ರಾಜ್ಯಮಟ್ಟದ ಸ್ಪರ್ಧೆ ಹಾಗೂ ನೃತ್ಯ ಸಂಭ್ರಮೋತ್ಸವ

ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಹೆಜ್ಜೆ-ಗೆಜ್ಜೆಯನ್ನು ಹಾಗೂ ನೃತ್ಯ ಸಂಭ್ರಮೋತ್ಸವವನ್ನು ಮೈಸೂರಿನ ಶ್ರೀನಿಮಿಷಾಂಬಾ ಡಾನ್ಸ್ ಪ್ರಮೋಟರ್ಸ್‍ನಿಂದ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ವಿದ್ವಾನ್ ಶ್ರೀಧರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಮಾತನಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಫೆ.4 ಮತ್ತು 5ರಂದು ಜರುಗುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಜಗನ್ಮೋಹನ ಅರಮನೆಯಲ್ಲಿ ಶಾಸಕ ವಾಸು ಚಾಲನೆ ನೀಡುವರು. ಚಿತ್ರ ನಿರ್ದೇಶಕ ಸುಧಾಕರ್ ಸಾಜಾ, ಉದ್ಯಮಿ ಎಂ.ಎ.ಸುಧೀರ್ ಕುಮಾರ್, ವಕೀಲ ಎಂ.ಡಿ.ಹರೀಶ್‍ಕುಮಾರ್‍ ಹೆಗಡೆ ಹಾಗೂ ಖ್ಯಾತನಟ ಡಾರ್ಲಿಂಗ್ ಕೃಷ್ಣ ಸಮಾರಂಭದಲ್ಲಿ ಭಾಗಿಯಾಗುವರು.

ಶ್ರೀಧರ್ ಜೈನ್ ನಿರ್ದೇಶನದ ‘ಸೈನಿಕ’ ಆಧಾರಿತ ನೃತ್ಯ ರೂಪಕವಷ್ಟೇ ಅಲ್ಲದೇ ಕಾರ್ಯಕ್ರಮದಲ್ಲಿ 300 ಕಲಾವಿದರು ಪ್ರದರ್ಶನ ನೀಡುವರು. ಪ್ರಹ್ಲಾದ್ ಆಚಾರ್ಯರಿಂದ ನೆರಳಿನ ಆಟ ಹಾಗೂ ಕಾಮಿಡಿ ಕಿಲಾಡಿಗಳಾದ ರಮೇಶ್ ಬಾಬು ಮತ್ತು ಗೋಪಿಯವರಿಂದ ಹಾಸ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಫೆ.4ರಂದು ಸ್ಪರ್ಧೆಯು ನಡೆಯಲಿದ್ದು ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ನಡೆಸಲಾಗುವುದು ಎಂದು ತಿಳಿಸಿದರು.

ವರ್ಷಾ ಸತೀಶ್, ಡಾ.ಚಿಂತನಾ ಹಾಗೂ ಸೌಮ್ಯ ಜೈನ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Leave a Reply

comments

Related Articles

error: