ಪ್ರಮುಖ ಸುದ್ದಿಮೈಸೂರು

ಏ.29ರಂದು ವಿಜಯ ಮಹಾಗಣಪತಿಯ ಬ್ರಹ್ಮರಥೋತ್ಸವ

ಏ.27 ರಿಂದ 29ರವರೆಗೆ ವಿಶೇಷ ಪೂಜೆ, ಹೋಮ- ಪ್ರಸಾದ ವಿನಿಯೋಗ

ಮೈಸೂರು,ಏ.25 : ವಿಜಯನಗರದ ಮೂರನೇ ಹಂತದಲ್ಲಿರುವ ಶ್ರೀವಿಜಯ ಮಹಾಗಣಪತಿ ಸ್ವಾಮಿ ಜಾತ್ರೆ, ಬ್ರಹ್ಮ ರಥೋತ್ಸವ ಹಾಗೂ ನವ ಚಂಡಿಕಾ ಯಾಗವನ್ನು ಏ.27 ರಿಂದ 29ರವರಗೆ ಏರ್ಪಡಿಸಲಾಗಿದೆ ಎಂದು ಮಹಾಗಣಪತಿ ಸೇವಾ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಸಿ.ಕೆ.ಮಂಜುನಾಥ್ ಶಾಸ್ತ್ರಿ ತಿಳಿಸಿದರು.

ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ದಿ.27ರ ಬೆಳಗ್ಗೆ 7 ಗಂಟೆಯಿಂದಲೇ ಗಣಹೋಮ, ನವಗ್ರಹ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ಮೊದಲಾದ ಪೂಜಾ ಕೈಂಕರ್ಯಗಳು ಆರಂಭವಾಗಲಿವೆ, ರಾತ್ರಿ 7 ಗಂಟೆಗೆ ವಾಸ್ತು ಹಾಗೂ ರಾಕ್ಷೋಘ್ನ ಹೋಮ ಮಾಡಲಾಗುವುದು, ದಿ.28ರಂದು ಬೆಳಗ್ಗೆ 8 ಗಂಟೆಗೆ ಕಲ್ಲೇಶ್ವರ ಸ್ವಾಮಿಗೆ ಪಂಚಾಮೃತಾಭಿಷೇಕ, ರುದ್ರಾ ಹಾಗೂ ಸುಬ್ರಹ್ಮಣ್ಯ ಹೋಮ, ಸಮುಂಗಲಿಯರಿಂದ ಸಾಮೂಹಿಕ ಲಲಿತ ಸಹಸ್ರನಾಮ, ಲಕ್ಷಾರ್ಚನೆ ಇರುವುದು ಎಂದು ತಿಳಿಸಿದರು.

ದಿ.29ರ ಬೆಳಗ್ಗೆ 6 ಗಂಟೆಗೆ ವಿಜಯ ಮಹಾಗಣಪತಿಗೆ 108 ಕಳಶ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಇತರ ದೇವರುಗಳ ಪಂಚಾಮೃತಾಭಿಷೇಕ ಮತ್ತು ರುದ್ರಾಭಿಷೇಕ ನೆರವೇರಿಸಲಾಗುವುದು. ನಂತರ ಸಹಸ್ರಮೋದಕ ಗಣಪತಿ ಹೋಮ, ನವ ಚಂಡಿಕಾಯಾಗ ಮಹಾಪೂರ್ಣಾಹುತಿ ಹಾಗೂ ಗಣಪತಿಯ ಬ್ರಹ್ಮ ರಥೋತ್ಸವ ಹಾಗೂ ವಿವಿಧ ಗಣ್ಯರ ಸನ್ಮಾನ ನೆರವೇರಿಸಲಾಗುವುದು ಎಂದು ಹೇಳಿದರು.

ಮೂರು ದಿನಗಳ ಕಾಲ ಪ್ರತಿ ದಿನ ಮಧ್ಯಾಹ್ನ ಪ್ರಸಾದ ವಿನಿಯೋಗ ಹಾಗೂ ಸಂಜೆ 6 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಗುವುದು ಎಂದರು.

ಜ್ಯೋತಿಷಿ ಕೇಶವಮೂರ್ತಿ, ಪವಮಾನಾಚಾರ್ಯ, ಗೋವಿಂದಾಚಾರ್ಯ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: