ಕರ್ನಾಟಕಪ್ರಮುಖ ಸುದ್ದಿ

ಪತ್ನಿ ಬಗ್ಗೆ ಕೆಟ್ಟ ಸುದ್ದಿ ಹಬ್ಬಿಸಿದವರ ವಿರುದ್ಧ ಆರ್.ಜೆ ಪ್ರದೀಪ್ ಆಕ್ರೋಶ

ಬೆಂಗಳೂರು (ಏ.25): ಕೆಲವು ವೆಬ್ ಸೈಟ್ ಗಳು ಪ್ರಚಾರ ಗಿಟ್ಟಿಸಿಕೊಳ್ಳುವ ಉದ್ದೇಶದಿಂದ ಸೆಲೆಬ್ರಿಟಿಗಳ ಬಗ್ಗೆ ಕೆಟ್ಟ ಕೆಟ್ಟ ಸುದ್ದಿಗಳನ್ನು ಹಬ್ಬಿಸುತ್ತಿವೆ. ಇಂತಹ ಕೆಟ್ಟ ಸುಳ್ಳು ಸುದ್ದಿಗಳೀಗ ಅನೇಕ ಸೆಲೆಬ್ರಿಟಿ ವ್ಯಕ್ತಿಗಳನ್ನು ತೊಂದರೆಗೆ ಸಿಲುಕಿಸುತ್ತಿವೆ. ಈಗ ಇಂತಹದೇ ಒಂದು ಕೆಟ್ಟ ಸುದ್ದಿಯ ವ್ಯೂಹದಲ್ಲಿ ಸಿಲುಕಿಕೊಂಡಿದ್ದಾರೆ ಆರ್ ಜೆ ಪ್ರದೀಪ್ ಪತ್ನಿ ಶ್ವೇತಾ ಪ್ರಸಾದ್!

ಆರ್ ಜೆ ಪ್ರದೀಪ್ ಪತ್ನಿ, ಕಿರುತೆರೆಯ ಖ್ಯಾತ ನಟಿ ಶ್ವೇತಾ ಪ್ರಸಾದ್ ಬಗ್ಗೆ ಕೆಟ್ಟ ಸುದ್ದಿಯೊಂದು ಹರಿದಾಡುತ್ತಿದೆ. ನಟಿ ಶ್ವೇತಾ ಪ್ರಸಾದ್ ಕಾರು ಅಫಘಾತದಲ್ಲಿ ನಿಧನರಾಗಿದ್ದಾರೆ ಎನ್ನುವ ಕೆಟ್ಟ ಸುದ್ದಿಯನ್ನು ಒಂದು ವೆಬ್ ಸೈಟ್ ವರದಿ ಮಾಡಿದೆ. ಏಪ್ರಿಲ್ 23ರ ರಾತ್ರಿ ಈ ಅವಘಡ ಸಂಭವಿಸಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಈ ಸುದ್ದಿ ನೋಡಿ ಪ್ರದೀಪ್ ದಂಪತಿ ಮತ್ತು ಅಭಿಮಾನಿಗಳು ಶಾಕ್ ಆಗಿದ್ದಾರೆ.

ಶ್ವೇತಾ ದಂಪತಿ ಈ ಸುದ್ದಿ ನೋಡಿ ಶಾಕ್ ಆಗುವುದರ ಜೊತೆಗೆ ಕೆಟ್ಟ ಸುದ್ದಿ ಹಬ್ಬಿಸಿದವರ ವಿರುದ್ಧ ಪ್ರದೀಪ್ ಆಕ್ರೋಶ ಗೊಂಡಿದ್ದಾರೆ. ಒಂದಿಷ್ಟು ಲೈಕ್ಸ್ ಗಿಟ್ಟಿಸಿಕೊಳ್ಳುವ ಉದ್ದೇಶದಿಂದ ಮಾಡಿರುವ ಚೀಪ್ ಗಿಮಿಕ್ ಇದು. ಕೆಲವು ವೆಬ್ ಸೈಟ್ ಗಳು ಗೂಗಲ್ ಜಾಹಿರಾತುಗಳಿಂದ ಹಣ ಮಾಡುವ ಉದ್ದೇಶದಿಂದ ಈ ರೀತಿಯ ಕೆಟ್ಟ ಸುದ್ದಿಗಳನ್ನು ಬಿತ್ತರಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಕಾರು ಅಫಘಾತದ ಸುಳ್ಳು ಸುದ್ದಿ ಬಿತ್ತರವಾಗುತ್ತಿದಂತೆ ಅನೇಕರು ಗಾಬರಿಯಿಂದ ಕರೆ ಮಾಡಿ ಆರಾಮಾಗಿದ್ದೀರ ಎಂದು ವಿಚಾರಿ ಕೊಳ್ಳುತ್ತಿದ್ದಾರೆ. ಪತ್ನಿ ಶ್ವೇತಾ ಮತ ಚಲಾಯಿಸಲು ಶಿವಮೊಗ್ಗಕ್ಕೆ ತೆರಳಿದ್ದಾರೆ. ನಾನು ಬೆಂಗಳೂರಿನಲ್ಲೇ ಇದ್ದೀನಿ ಚುನಾವಣಾ ಆಯೋಗದ ಕೆಲಸದಲ್ಲಿ ನಿರತನಾಗಿದ್ದೀನಿ. ಇಬ್ಬರು ಜೀವಂತವಾಗಿ ಸಂತೋಷವಾಗಿದ್ದೀವೆ ಎಂದು ಹೇಳಿದ್ದಾರೆ

ಪತ್ನಿ ಶ್ವೇತಾ ಬಗ್ಗೆ ಸುಳ್ಳು ವರದಿ ಮಾಡಿದ ವೆಬ್ ಸೈಟ್ ವಿರುದ್ಧ ಆರ್ ಜೆ ಪ್ರದೀಪ್ ಕ್ರಮ ತೆಗೆದುಕೊಂಡಿದ್ದಾರೆ. ಕೆಟ್ಟ ಸುದ್ದಿ ಬಿತ್ತರಿಸಿದವರ ವಿರುದ್ಧ ಪ್ರದೀಪ್ ಸೈಬರ್ ಕ್ರೈಮ್ ಗೆ ದೂರು ನೀಡಿದ್ದಾರೆ. ಇಂತವರ ವಿರುದ್ಧ ವರದಿ ಮಾಡಿ ಇಂತಹ ಕಳೆಯನ್ನು ಕಿತ್ತು ಹಾಕಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ‘ರಾಧಾ ರಮಣ’ ಧಾರಾವಾಹಿಯ ನಾಯಕಿ.

ಶ್ವೇತಾ ಪ್ರಸಾದ್ ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ರಾಧಾ ರಮಣ’ ದಾರಾವಾಹಿಯ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ರಾಧಾ ಮಿಸ್ ಅಂತಾನೆ ಖ್ಯಾತಿ ಗಳಿಸಿರುವ ಶ್ವೇತಾ ಕಿರುತೆರೆ ಪ್ರೇಕ್ಷಕರ ನೆಚ್ಚಿನ ನಟಿಯಾಗಿದ್ದಾರೆ. ಹೀಗಿರುವಾಗ ಇಂತಹ ಕೆಟ್ಟ ಸುದ್ದಿ ಹಬ್ಬಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ್ದು ತಕ್ಕ ಕ್ರಮವೇ ಆಗಿರುತ್ತದೆ. (ಎನ್.ಬಿ)

Leave a Reply

comments

Related Articles

error: