ಮನರಂಜನೆ

12ವರ್ಷಗಳ ಬಳಿಕ ಒಟ್ಟಿಗೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ ಬಾಲಿವುಡ್ ನ ಬಿಗ್ ಬಿ – ಖಿಲಾಡಿ ಅಕ್ಷಯ್ ಕುಮಾರ್

ದೇಶ(ನವದೆಹಲಿ)ಏ.25:- 71ರ ಹರೆಯದಲ್ಲಿಯೂ ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ಪಾತ್ರವನ್ನು  ಯಶಸ್ವಿಯಾಗಿ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ವರದಿಯೊಂದರ ಪ್ರಕಾರ ಬಿಗ್ ಬಿ ಅಮಿತಾಬ್ ಬಚ್ಚನ್ ಭಯಾನಕ ಹಾಸ್ಯ ರಂಜನಾ ಚಿತ್ರ’ ಕಾಂಚನ’ ಹಿಂದಿ ರೀಮೇಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಅಮಿತಾಬ್ ಚಿತ್ರದಲ್ಲಿ ಟ್ರಾನ್ಸ್ ಜೆಮಟರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇವರೊಂದಿಗೆ 12ವರ್ಷಗಳ ಬಳಿಕ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ದೆಹಲಿಯ ವೃತ್ತಪತ್ರಿಕೆಯೊಂದರ ಮಾಹಿತಿಯ ಪ್ರಕಾರ ತಮಿಳಿನ ಸೂಪರ್ ಹಿಟ್ ಚಿತ್ರ’ ಕಾಂಚನಾ’ ರೀಮೇಕ್ ಆಗಲಿದೆ. ‘ಕಾಂಚನಾ’ ಟ್ರಾನ್ಸ್ ಜೆಂಡರ್ ಮಹಿಳೆಯಾಗಿದ್ದು ಬಿಗ್ ಬಿ ಕಾಂಚನಾ ಮಹಿಳೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಟ್ರಾನ್ಸ್ ಜೆಂಟರ್ ಮಹಿಳೆಯು ತನ್ನ ಸಾವಿನ ಸೇಡು ತೀರಿಸಿಕೊಳ್ಳಲಲು ರಾಘವನ ಶರೀರವನ್ನು ಆಯ್ಕೆ ಮಾಡಿದ್ದು, ತಮಿಳಿನಲ್ಲಿ ಕಾಂಚನಾಳ ಪಾತ್ರವನ್ನು ಆರ್.ಶರದ್ ಕುಮಾರ್ ನಿಭಾಯಿಸಿದ್ದರು.

ವರದಿಗಳ ಪ್ರಕಾರ ಅಕ್ಷಯ್ ಕುಮಾರ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅವರ ಪತ್ನಿಯ ಪಾತ್ರದಲ್ಲಿ ಕಿಯಾರಾ ಅಡ್ವಾಣಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. 12ವರ್ಷಗಳ ನಂತರ ಅಕ್ಷಯ್ ಕುಮಾರ್-ಬಿಗ್ ಬಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದು, ಅಭಿಮಾನಿಗಳಿಗೆ ಇದು ಯಾವ ಸಂತೋಷಕ್ಕೂ ಕಡಿಮೆಯೇನಲ್ಲ. ಬಿಗ್ ಬಿ’ ಬ್ರಹ್ಮಾಸ್ತ್ರ’ದಲ್ಲಿಯೂ ನಟಿಸಲಿದ್ದಾರೆ ಎನ್ನಲಾಗಿದೆ. (ಎಸ್.ಎಚ್)

Leave a Reply

comments

Related Articles

error: